ಬಿಜೆಪಿ ಬ್ರಾಹ್ಮಣ, ಮೇಲ್ವರ್ಗದವರ ಪಕ್ಷ ಎನ್ನುವವರು ಈ ಸುದ್ದಿ ಓದಿ!
ಲಖನೌ: ಬಿಜೆಪಿ ಬ್ರಾಹ್ಮಣ ಹಾಗೂ ಮೇಲ್ವರ್ಗದವರು ಎಂದು ಹೇಳಿಕೆ ನೀಡುವವರಿಗೆ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ತಕ್ಕ ಉತ್ತರ ನೀಡಿದ್ದು, ಉತ್ತರ ಪ್ರದೇಶ ಸ್ಥಳೀಯ ಚುನಾವಣೆಗೆ 25 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ಇದು ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಗಳನ್ನು ಒಳಗೊಂಡ ಎರಡು ಮತ್ತು ಮೂರನೇ ಹಂತದ ಚುನಾವಣೆಗಳಲ್ಲಿ ಮತ್ತಷ್ಟು ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ತಿಳಿಸಿದೆ.
ಅಮೇಥಿಯ ಮುಸಾಫಿರ್‌ಖಾನಾ ನಗರ ಪಂಚಾಯಿತಿಯ ಮಿಶ್ರೌಲಿ, ಬಾಬಾಗಂಜ್ ದಕ್ಷಿಣ ಮತ್ತು ಘೋಸಿಯಾನಾ ವಾರ್ಡ್‌ಗಳಲ್ಲಿ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಲಖನೌದ ಮಹಿಳಾಬಾದ್ ನಗರ ಪಂಚಾಯತ್ ಚುನಾವಣೆಗೆ ಐವರು ಮುಸ್ಲಿಮರಿಗೆ ಬಿಜೆಪಿ ಟಿಕೆಟ್ ನೀಡಿದೆ. ಪ್ರತಾಪ್‌ಘರ್ ಜಿಲ್ಲೆಯಲ್ಲೂ ಕೆಲವು ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಅಲ್ಲದೆ, ಲಖನೌದ ಮಹಿಳಾಬಾದ್ ನಗರ ಪಂಚಾಯತ್‌ನಲ್ಲೂ ಮುಸ್ಲಿಂ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಜೋಶಿನ್ ತೋಲಾ ವಾರ್ಡ್‌ನಲ್ಲಿ ಆತಿಯಾ, ಮೊಹಮ್ಮದನ್ ತೋಲಾದಲ್ಲಿ ಆಲಿ ಮೊಹಮ್ಮದ್, ಚೌಧ್ರಾನಾದಲ್ಲಿ ಇಮ್ರಾನ್ ಅನ್ಸಾರಿ, ಕೆವಲ್ಲಾರ್ ವಾರ್ಡ್‌ನಲ್ಲಿ ನೌಜಿಯಾ ಮತ್ತು ಸಂದಾ ವಾರ್ಡ್‌ನಲ್ಲಿ ಅರ್ಜಾ ಬಾನೊ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅನ್ವಯ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಚಂದ್ರಮೋಹನ್ ಸಿಂಗ್ ತಿಳಿಸಿದ್ದಾರೆ.
Leave A Reply