ಜಿಎಸ್ಟಿ ಮೂಲಕ ಸಣ್ಣ ಉದ್ದಿಮೆದಾರರಿಗೆ ಸಿಹಿ ಸುದ್ದಿ ನೀಡಲಿದ್ದಾರೆಯೇ ಮೋದಿ?
ದೆಹಲಿ: ಜಿಎಸ್ಟಿ ಜಾರಿಯಿಂದ ಉದ್ಯಮಿಗಳು, ಅದರಲ್ಲೂ ಸಣ್ಣ ಉದ್ದಿಮೆದಾರರಿಗೆ ಹೊಡೆತ ಬಿದ್ದಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್ಟಿಯಿಂದ ಸಣ್ಣ ಉದ್ದಿಮೆದಾರರಿಗೆ ರಿಯಾಯಿತಿ, ತೆರಿಗೆ ದರ ಕಡಿತ ಅಥವಾ ವಿನಾಯಿತಿ ಕೊಡುವ ಮುನ್ಸೂಚನೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಎಲ್ಲ ರಾಜ್ಯಗಳಿಂದ ದೂರು ಬಂದಿವೆ. ಅದರಲ್ಲಿ ರಾಜ್ಯ ಸಚಿವರೇ ಈ ಕುರಿತು ದೂರಿದ್ದಾರೆ. ಹಾಗಾಗಿ ಕೆಲವು ಮಾರ್ಪಾಡು ಮಾಡಲು ಸಹ ಜಿಎಸ್ಟಿ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಹೇಳಿರುವುದು ಹೊಸ ಘೋಷಣೆಯ ಸೂಚನೆ ಸಿಕ್ಕಿದ್ದು, ಇದರಿಂದ ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗಿದೆ ಎಂಬ ಮಾತು ಕೇಳಿಬರುತ್ತಿವೆ.
ಜಿಎಸ್ಟಿ ಜಾರಿ ಬಳಿಕ ದೇಶಾದ್ಯಂತ ಸಣ್ಣ ಉದ್ದಿಮೆದಾರರಿಗೆ ಕಚ್ಚಾ ವಸ್ತುಗಳ ಖರೀದಿ, ಉತ್ಪಾದನಾ ವೆಚ್ಚ, ತೆರಿಗೆ ದರದ ಹೊಡೆತ ಸೇರಿ ಹಲವು ಸಮಸ್ಯೆಗಳಾಗುತ್ತಿವೆ ಎಂಬ ಆರೋಪ ಕೇಳಿಬಂದಿದ್ದವು. ಇದನ್ನೇ ಮೋದಿ ವಿರುದ್ಧ ಅಸ್ತ್ರವನ್ನಾಗಿಯೂ ಕೆಲವು ರಾಜಕೀಯ ಪಕ್ಷಗಳು ಕೇಳಿಸಿಕೊಂಡಿದ್ದವು. ಆದರೆ ಮೋದಿ ಅವರೆಲ್ಲರ ಬಾಯಿ ಮುಚ್ಚಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಅವರ ಮಾತಿನಿಂದ ಸ್ಪಷ್ಟವಾಗಿದೆ.
ನ.9 ಹಾಗೂ 10ರಂದು ಸರಕು ಮತ್ತು ಸೇವಾ ತೆರಿಗೆ ಸಮಿತಿ ಅಧ್ಯಕ್ಷ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Leave A Reply