ಚುನಾವಣೆ ಹೊಸ್ತಿಲಲ್ಲಿ ಗುಂಡೂರಾವ್ ಅವರದ್ದು ಇದೆಂಥ ಜಾತ್ಯತೀತ ನಿಲುವು?
-
ಇತ್ತೀಚೆಗೆ ಬೆಂಗಳೂರಿನಲ್ಲಿ ‘ನಮಗೂ ಹೇಳಲಿಕ್ಕಿದೆ’ ಎಂಬ ರ್ಯಾಲಿ ನಡೆಯುತ್ತದೆ. ಅಲ್ಲಿ ಹಿಂದೂ ಧರ್ಮದ ಬಗ್ಗೆ, ಭವ್ಯ ಭಾರತದ ಬಗ್ಗೆ ಪೆದ್ದ ಸ್ವಾಮೀಜಿಯೊಬ್ಬ ‘ಕೊಲೆಗಡುಕರ ಭಾರತ’ ಎಂದು ಮಾತನಾಡುತ್ತಾನೆ.
-
ಬೆಂಗಳೂರಿನಲ್ಲಿ ಅದ್ಧೂರಿ ರ್ಯಾಲಿ ಮಾಡಿದ ಸಂಘಟನೆ ಹೆಸರು ‘ಪಿಎಫ್ಐ’. ರ್ಯಾಲಿ ಅನುಮತಿ ನೀಡಿ ಎಲ್ಲ ರಕ್ಷಣೆ, ಪೋಷಣೆ ನೀಡಿದವರು ಘನತೆವೆತ್ತ ರಾಜ್ಯದ ಕಾಂಗ್ರೆಸ್ ಸರಕಾರ.
-
ಪಿಎಫ್ಐನ ಇಡೀ ಸಮಾವೇಶದಲ್ಲಿ ಭಾರತ ಮಾತೆಯ ಅವಹೇಳನ ನಡೆಯುತ್ತದೆ. ರಾಷ್ಟ್ರಭಕ್ತರು, ದೇಶದ ಪ್ರಧಾನಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಲಾಗುತ್ತದೆ. ಪಿಎಫ್ಐ ಸಂಘಟನೆಯ ಘನೋದ್ದೇಶಗಳ ಬಗ್ಗೆ ಹಾಡಿ ಹೋಗಳಲಾಗುತ್ತದೆ.
-
ಅಷ್ಟೇ ಅಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಕೂಡಲೇ ಪಿಎಫ್ಐ ಸಂಘಟನೆ ಕಾರ್ಯಕರ್ತರ ವಿರುದ್ಧವಿದ್ದ ಪ್ರಕರಣಗಳನ್ನು ಕೈಬಿಟ್ಟು ತಮ್ಮ ಜಾತ್ಯಾತೀತ ನಿಲುವು ಘೋಷಿಸಲಾಗುತ್ತದೆ
ಆದರೆ ಶುಕ್ರವಾರ ರಾಜ್ಯ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಅವರು ಒಂದು ಟ್ವೀಟ್ ಮಾಡಿ ‘ಪಿಎಫ್ಐ ಒಂದು ಮೂಲಭೂತವಾದಿ ಸಂಘಟನೆ. ಅದನ್ನು ನಿಷೇಧಿಸಬೇಕು. ಇಂತಹ ಸಂಘಟನೆಗಳು ದೇಶಕ್ಕೆ ಮಾರಕ’ ಎಂದು ಹೇಳುತ್ತಾರೆ. ಅಂದರೆ ಇಷ್ಟು ಕಾಂಗ್ರೆಸ್ ಸರಕಾರ ಮೃದು ಧೋರಣೆ ತಳೆದಿದ್ದ ಸಂಘಟನೆಯನ್ನೇ ನಿಷೇಧಿಸುವಂತ ನಿಲುವಿಗೆ ಬರಲು ಕಾರಣವಾದರು ಏನು ಎಂಬ ಅನುಮಾನ ಮೂಡದೇ ಇರದು. ರಾಜ್ಯದಲ್ಲಿ ಚುನಾವಣೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ ಪರಿವರ್ತನಾ ರ್ಯಾಲಿ ಮೂಲಕ ರಾಜ್ಯ ಸರಕಾರದ ತುಘುಲಕ್ ಆಡಳಿತ, ಹಿಂದೂ ಕಾರ್ಯಕರ್ತರ ಕೊಲೆ, ಮುಸ್ಲಿಂರ ತುಷ್ಟೀಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡಲು ಮುಂದಾಗಿದೆ. ಇಂತಹ ಹೊತ್ತಿನಲ್ಲಿ ಹಿಂದೂಗಳ ಮತ ಎಲ್ಲಿ ತಮ್ಮ ಕೈ ತಪ್ಪಿ ಹೋಗುತ್ತವೆಯೋ ಎಂಬ ಭೀತಿಯಲ್ಲಿ ಕಾಂಗ್ರೆಸ್ ಈಗ ಹೊಸತೊಂದು ಆಟ ಹೂಡಿದೆ.
ದಿನೇಶ್ ಗುಂಡೂರಾವ್ ಅವರ ನಿಲುವು ತಪ್ಪಲ್ಲ. ಪ್ರಶ್ನೆ ಮೂಡಿರುವುದು ಮೈಸೂರಿನಲ್ಲಿ ರಾಜು, ಮಡಿಕೇರಿಯ ಕುಟ್ಟಪ್ಪ, ಬೆಂಗಳೂರಿನ ರುದ್ರೇಶ್ ಹತ್ಯೆ ಸೇರಿ ಹಿಂದೂ ಕಾರ್ಯಕರ್ತರ ಮಾರಣ ಹೋಮದಲ್ಲಿ ಪಿಎಫ್ಐ ಕಾರ್ಯಕರ್ತರ ಕೈವಾಡವಿದೆ ಎಂದು ಹೇಳಿದ್ದರು. ಅಂದು ತನಿಖಾ ತಂಡಗಳೇ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳದೇ ಬಾಯಿಯಲ್ಲಿ ಕಡುಬು ತುರುಕಿಕೊಂಡು ಕುಳಿತವರು ಈಗ ಎದ್ದು ಕುಳಿತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಮೂಡದೇ ಇರದು.
ಅದಕ್ಕೆ ಪೂರಕವೆಂಬಂತೆ ರಾಷ್ಟ್ರೀಯ ಖಾಸಗಿ ವಾಹಿನಿ ನಡೆಸಿರುವ ಸ್ಟಿಂಗ್ ಆಪರೇಷನ್ ವರದಿಗಳನ್ನು ತೋರಿಸುತ್ತಿದ್ದಾರೆ ಗುಂಡೂರಾವ್. ಆದರೆ ರಾಜ್ಯ ಮತ್ತು ಕೇರಳದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಭಾಗಿಯಾದವರು ಇವರೇ ಎಂದು ತನಿಖಾ ತಂಡಗಳೇ ಹೇಳಿದರು ಸುಮ್ಮನಿದ್ದೀರಿ. ತನಿಖಾ ತಂಡಗಳ ಮೇಲೆ ವಿಶ್ವಾಸವಿಡದವರು ಈಗ ವಾಹಿನಿ ನಡೆಸಿದ ಕಾರ್ಯಚರಣೆಯನ್ನಾದರೂ ನಂಬಿದ್ದೀರಲ್ಲ ಅಷ್ಟೇ ಸಾಕು. ಚುನಾವಣೆ ಹೊತ್ತಲ್ಲಿ ತಮ್ಮ ನಿಲುವು ಬದಲಾಯಿಸಿದ್ದು, ನಿಮ್ಮದ್ದು ಜಾತ್ಯಾತೀತ ಒಲವು, ನಿಲುವು ಅಲ್ಲ.ವೋಟ್ ಬ್ಯಾಂಕ್ ರಾಜಕಾರಣ ಅಂಥ ಸಾಬೀತಾಯಿತು. ಸುಮ್ಮನೇ ಮತಕ್ಕಾಗಿ ಏನೇನೋ ಹೇಳಬೇಡಿ. ವಾಸ್ತವ ಚುನಾವಣೆ ಮುಂಚೆ, ನಂತರ, ಹಿಂದೆ ಯಾವಾಗಲೂ ವಾಸ್ತವವೇ. ನಿಮ್ಮ ನಿಲುವುಗಳು ಹಾಗೇಯೇ. ಈಗ ಬದಲಾದರೂ ಮೂಲ ಗುರಿ, ಕಾಳಜಿ ಮರೆಯುವುದಿಲ್ಲ. ಚುನಾವಣೆ ಹೊತ್ತಲ್ಲಿ ನಿಮ್ಮ ನಿಲುವು ಬದಲಾಗಬಹುದು. ಆದರೆ ಗುರಿ ಬದಲಾಗಲ್ಲ. ಜನ ಮೂರ್ಖರಲ್ಲ ನಿಮ್ಮ ತುಷ್ಟೀಕರಣ ರಾಜಕಾರಣ ನೋಡಿ ಬೇಸತ್ತಿದ್ದಾರೆ. ಶೀಘ್ರದಲ್ಲಿ ಅದಕ್ಕೆ ಉತ್ತರವೂ ದೊರೆಯಲಿದೆ.
ದಿನೇಶ ಗುಂಡೂರಾವ್ ಅವರೇ ನಿಮ್ಮ ನಿಲುವಿನಲ್ಲಿ ಇನ್ನಷ್ಟು ಬಿಗಿಯಾಗಿ ಬನ್ನಿ ಆಗ ನೋಡೋಣ….
Leave A Reply