ಸಿರಿಯಾದಲ್ಲಿ ಐಸಿಸ್ ಉಗ್ರರ ಅಟ್ಟಹಾಸ, 75 ಜನರ ಸಾವು
ಬೀರತ್: ದಿನೇದಿನೆ ಇಸ್ಲಾಂ ಮೂಲಭೂತವಾದ ಹೆಚ್ಚಾಗುತ್ತಿದ್ದು ಸಿರಿಯಾದಲ್ಲಿ ಐಸಿಸ್ ಉಗ್ರರ ದಾಳಿಗೆ 75 ಜನ ಬಲಿಯಾಗಿದ್ದಾರೆ.
ಸಿರಿಯಾದ ದೇರ್ ಎಝರ್ ಎಂಬಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 75 ಜನ ಮೃತಪಟ್ಟಿದ್ದು 140ಕ್ಕೂ ಅಧಿಕ ಮಂದಿಗೆ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಝರ್ ಪ್ರಾಂತ್ಯದಲ್ಲಿ ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಯೂಪ್ರೇಟ್ ನದಿ ತೀರಕ್ಕೆ ವಲಸೆ ಹೋಗಿದ್ದು, ದುರುಳ ಉಗ್ರರು ಅಲ್ಲಿಯೇ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತ್ತ ಅಮೆರಿಕದಲ್ಲೂ ಉಗ್ರನೊಬ್ಬ ಅಟ್ಟಹಾಸ ಮೆರೆದಿದ್ದು, ಟೆಕ್ಸಾಸ್ ನ ಚರ್ಚ್ ಒಂದರ ಬಳಿ ಉಗ್ರ ನಡೆಸಿದ ಗುಂಡಿನ ದಾಳಿಗೆ 27 ಜನ ಮೃತಪಟ್ಟಿದ್ದಾರೆ.
ದಾಳಿ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಘಟನೆಯಿಂದ ನಮ್ಮ ಹೃದಯ ಉಕ್ಕಿ ಬಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಜನರ ಮೇಲೆ ಟ್ರಕ್ ಹಾಯಿಸಿ 8 ಜನರನ್ನು ಕೊಂದಿದ್ದ. ಅಲ್ಲದೆ ಆತ, ಐಸಿಸ್ ನಿಂದ ಸ್ಫೂರ್ತಿಯಾಗಿ ದಾಳಿ ಮಾಡಿದ್ದಾಗಿ ತಿಳಿಸಿದ್ದ.
ಒಟ್ಟಿನಲ್ಲಿ ಇಸ್ಲಾಂ ಮೂಲಭೂತವಾದಕ್ಕೆ ವಿಶ್ವವೇ ನಲುಗುತ್ತಿರುವುದಂತೂ ಸುಳ್ಳಲ್ಲ.
Leave A Reply