ನೋಟು ನಿಷೇಧ ನಿರ್ಧಾರ ಒಂದು, ಉಪಯೋಗ ಹಲವು
ದೆಹಲಿ: ಕಳೆದ ವರ್ಷದ ನ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಐನೂರು, ಸಾವಿರ ರೂ. ಮೌಲ್ಯದ ನೋಟು ನಿಷೇಧಗೊಳಿಸಿದ ಬಳಿಕ ಇದು ಕೆಟ್ಟ ನಿರ್ಧಾರ, ಬಡವರಿಗೆ ತೊಂದರೆ ಕೊಡುವ ನಿರ್ಧಾರ ಎಂದಿನಿಂದ ಇಂದಿನವರೆಗೂ ಬಾಯಿ ಬಡಿದುಕೊಳ್ಳುವವರಿಗೆ ಈಗ ಸರ್ಕಾರವೇ ಬೀಗ ಜಡಿದಿದ್ದು, ನೋಟು ಬ್ಯಾನ್ ನಿಂದ ಹಲವು ಉಪಯೋಗಗಳಾಗಿವೆ ಎಂದು ಕೇಂದ್ರ ಹಣಕಾಸು ಇಲಾಖೆಯೇ ಮಾಹಿತಿ ನೀಡಿದೆ.
ನೋಟು ನಿಷೇಧದಿಂದ ಎಡಪಂಥೀಯ ಉಗ್ರ ಚಟುವಟಿಕೆ, ಭಯೋತ್ಪಾದನೆಗೆ ಸಂದಾಯವಾಗುವ ಹಣಕ್ಕೆ ಕತ್ತರಿಬಿದ್ದಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಅಲ್ಲದೆ ಇದರಿಂದ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದ್ದು,, ಸೆಪ್ಟಂಬರ್ ನಲ್ಲೇ 1.24 ಲಕ್ಷ ಕೋಟಿ ಹಣ ಡಿಜಿಟಲ್ ಮೂಲಕವೇ ವರ್ಗಾವಣೆಯಾಗಿದೆ. ಇದರಿಂದ ಜನ ಡಿಜಿಟಲ್ ಸಾಕ್ಷರರಾಗಿದ್ದಾರೆ ಎಂದು ಮಾಹಿತಿ ನೀಡಿದೆ.
ಕಪ್ಪು ಹಣ ದಂಧೆಕೋರರಿಗೆ ಪೆಟ್ಟು, ನಕಲಿ ನೋಟುಗಳ ಚಲಾವಣೆಗೆ ಇಕ್ಕಳ, ಭಯೋತ್ಪಾದನೆ ಚಟುವಟಿಕೆಯಲ್ಲಿ ಕುಂಠಿತ, ನಕಲಿ ಕಂಪನಿಗಳ ಪತ್ತೆ ಹಾಗೂ ನೋಂದಣಿ ರದ್ದುಗೊಳಿಸಿದ್ದು, 5 ಲಕ್ಷಕ್ಕೂ ಅಧಿಕ ತೆರಿಗೆದಾರರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು ಸೇರಿ ನೋಟು ನಿಷೇಧದಿಂದ ಹಲವು ಉಪಯೋಗಗಳಾಗಿವೆ ಎಂದು ಇಲಾಖೆ ವಿವರ ನೀಡಿದೆ.
Leave A Reply