17 ವರ್ಷದೊಳಗಿನವರ ವಿಶ್ವಕಪ್ ಯಶಸ್ವಿ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ತಿಳಿಸಿದ ಫಿಪಾ ಅಧ್ಯಕ್ಷ!
2011ರ ಕಾಮನ್ ವೆಲ್ತ್ ಗೇಮ್ಸ್ ಬಳಿಕ ಬಯಲಿಗೆ ಬಂದ ವಿವಾದ ನೆನಪಿರಬೇಕು. ಯುಪಿಎ ಸರ್ಕಾರ ಟಿಶ್ಯೂ ಪೇಪರ್ ನಿಂದ ಹಿಡಿದು ಕ್ರೀಡಾಕೂಟಕ್ಕೆ ಖರೀದಿಸಿದ ಪ್ರತಿ ವಸ್ತುವಿನಲ್ಲೂ ಹಣ ಎಗರಿಸಿದೆ ಎಂಬ ಆರೋಪ ಕೇಳಿಬಂದಿದ್ದವು. ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿತ್ತು. ಕಾಂಗ್ರೆಸ್ಸಿನ ಭ್ರಷ್ಟಾಚಾರ ವಿಶ್ವಾದ್ಯಂತ ಬಹಿರಂಗವಾಗಿತ್ತು.
ಆದರೆ ಇತ್ತೀಚೆಗಷ್ಟೇ ಭಾರತ ಫಿಫಾ ಅಂತಾರಾಷ್ಟ್ರೀಯ 17 ವರ್ಷದೊಳಗಿನವರ ಫುಟ್ ಬಾಲ್ ವಿಶ್ವಕಪ್ ಅನ್ನು ಭಾರತ ಆಯೋಜಿಸಿದ್ದನ್ನು ಫಿಫಾ ಅಧ್ಯಕ್ಷರೇ ಮೆಚ್ಚಿದ್ದಾರೆ. ಅಷ್ಟೇ ಅಲ್ಲ, ಯಶಸ್ವಿ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಯಶಸ್ವಿ ಆಯೋಜನೆ ಕುರಿತು ಫಿಫಾ ಅಧ್ಯಕ್ಷ ಜಿಯೋವನ್ನಿ ವಿನ್ಸೆಂಝೋ ಪ್ರಧಾನಿ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಫಿಫಾ ಗಣ್ಯರ ತಂಡ ಭಾರತದಲ್ಲಿ ಹಲವು ಸ್ಮರಣೀಯ ನೆನಪುಗಳನ್ನು ಹೊತ್ತುಕೊಂಡು ಜುರಿಚ್ ತಲುಪಿದೆ. ಯಶಸ್ವಿಯಾಗಿ ಟೂರ್ನಿ ಆಯೋಜಿಸಿದ ನಿಮಗೆ ಹಾಗೂ ಸ್ಥಳೀಯ ಆಯೋಜನೆ ಸಮಿತಿಗಳಿಗೆ ನನ್ನ ಅಭಿನಂದನೆ ಸಲ್ಲುತ್ತವೆ. ನೀವು ಟೂರ್ನಿ ಆಯೋಜಿಸಲು ವ್ಯಯಿಸಿದ ಶ್ರಮ ಅಭಿನಂದನಾರ್ಹ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಪ್ರಧಾನಿಯವರನ್ನು ಭೇಟಿ ಮಾಡಲು ಆಗದ ಕಾರಣ ಬೇಸರವನ್ನೂ ವ್ಯಕ್ತಪಡಿಸಿರುವ ನಿನ್ಸೆಂಝೋ, ಹಲವು ಬದ್ಧತೆ ಹಾಗೂ ಬಿಡುವಿಲ್ಲದ ವೇಳಾಪಟ್ಟಿ ಇದ್ದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಆಗಲಿಲ್ಲ. ಆದರೂ ಮುಂದಿನ ದಿನಗಳಲ್ಲಿ ಫುಟ್ ಬಾಲ್ ಅಭಿವೃದ್ಧಿ ಕುರಿತು ಮೋದಿ ಅವರ ವಿಚಾರ, ಯೋಜನೆಗಳು ವಿನಿಮಯ ಆಗಲಿವೆ ಎಂಬ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.
Leave A Reply