ಗಡುವು ಮುಗಿಯಿತಲ್ಲ ಸಿಎಂ ಸಾಹೇಬ್ರೇ, ಗುಂಡಿ ಮುಚ್ಚಿದವಾ?

ಬೆಂಗಳೂರು: ನಗರದಲ್ಲಿ ಗುಂಡಿಗಳಿಗೆ ಹಲವು ಜೀವಗಳು ಬಲಿಯಾದ ಬಳಿಕ ವ್ಯಕ್ತವಾದ ಅಪಾರ ಟೀಕೆ ವ್ಯಕ್ತವಾದ ಬಳಿಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.6ರೊಳಗೆ ಗುಂಡಿ ಮುಚ್ಚಿಸುವುದಾಗಿ ತಿಳಿಸಿದ್ದರು.
ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಿಎಂ ನೀಡಿದ ಗಡುವು ಮುಗಿದಿದ್ದು, ನೂರಕ್ಕೆ ನೂರರಷ್ಟು ಗುಂಡಿ ಮುಚ್ಚುವಲ್ಲಿ ಪಾಲಿಕೆ ವಿಫಲವಾಗಿದ್ದು, ಸಿಎಂ ಆದೇಶಕ್ಕೂ ಕಿಮ್ಮತ್ತಿಲ್ಲದಂತಾಗಿದೆ.
ಲಗ್ಗೆರೆ, ಶೇಷಾದ್ರಿಪುರಂ, ವಿದ್ಯಾರಣ್ಯಪುರ ಸೇರಿ ಹಲವು ರಸ್ತೆಗಳಲ್ಲಿ ಪಾಟ್ ಹೋಲ್ಸ್ ಬಾಯಿ ತೆರೆದುಕೊಂಡಿದ್ದು, ಜನ ಅಪಘಾತ ಭೀತಿಯಲ್ಲೇ ಸಂಚರಿಸುವಂತಾಗಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಗುಂಡಿ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಗಡುವು ಮುಗಿದ ಬಳಿಕ ನಗರ ಪ್ರದಕ್ಷಿಣೆ ಮಾಡಿ ಗುಂಡಿ ಮುಚ್ಚಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ಆದರೆ ಗುಡುವು ಮುಗಿದರೂ ಇನ್ನೂ ಬೆಂಗಳೂರಿನಲ್ಲಿ 800 ಪಾಟ್ ಹೋಲ್ ಗಳು ಇವೆ ಎಂದು ತಿಳಿದುಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಾರಾ? ಇಲ್ಲ, ಪ್ರಕರಣ ಜನರಿಂದ ಮರೆಯಾಯಿತು ಎಂದು ಸುಮ್ಮನಿರುತ್ತಾರಾ? ಎಂಬುದು ಪ್ರಶ್ನೆಯಾಗಿದೆ.
—
Leave A Reply