ನೋಟು ನಿಷೇಧದ ಬಳಿಕ ಖೋಟಾ ನೋಟಿಗೆ ಕುತ್ತು
ದೆಹಲಿ: ಕಳೆದ ವರ್ಷ ನೋಟು ನಿಷೇಧಿಸಿದ ಬಳಿಕ ಖೋಟಾ ನೋಟುಗಳ ಪತ್ತೆಯಲ್ಲಿ ಗಣನೀಯವಾಗಿ ಕುಸಿತವಾಗಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.
2015, 16ಕ್ಕೆ ಹೋಲಿಸಿದರೆ ದೇಶದಲ್ಲಿ 2016ರ ನವೆಂಬರ್ ಬಳಿಕ ಇದುವರೆಗೆ ನಕಲಿ ನೋಟುಗಳ ಹಾವಳಿ ಕಡಿಮೆಯಾಗಿದೆ. 2017ರಲ್ಲಿ ದೇಶದಲ್ಲಿ 16 ಕೋಟಿ ನಕಲಿ ನೋಟುಗಳು ಪತ್ತೆಯಾಗಿವೆ. ಆದರೆ 2015ರಲ್ಲಿ ದೇಶದಲ್ಲಿ 44 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು, 2016ರಲ್ಲಿ 51 ಕೋಟಿ ರೂ. ಮೌಲ್ಯದ ನಕಲಿ ನೋಟು ವಶಪಡಿಸಿಕೊಳ್ಳಲಾಗಿತ್ತು.
ಆದರೆ ನೋಟು ನಿಷೇಧದ ಬಳಿಕ ಹೊಸ ನೋಟುಗಳಲ್ಲಿ ಬದಲಾಯಿಸಿದ ತಂತ್ರಜ್ಞಾನ, ನಕಲಿ ನೋಟು ತಡೆಗೆ ಸರ್ಕಾರ ಕೈಗೊಂಡ ಕ್ರಮಗಳಿಂದ ಖೋಟಾ ನೋಟು ಹಾವಳಿ ಕಡಿಮೆಯಾಗಿದೆ.
ಮೊದಲು ದೇಶದ ನೋಟುಗಳನ್ನು ಅನಾಮತ್ತು ನಕಲಿ ಮಾಡಲಾಗುತ್ತಿತ್ತು. ಆದರೆ ಈ ಅದು ಸಾಧ್ಯವಾಗುತ್ತಿಲ್ಲ. ನಕಲಿನೋಟು ಮುದ್ರಿಸುವವರ ಹಾವಳಿಗೆ ಕಡಿವಾಣ ಬಿದ್ದಿದ್ದು, ಪ್ರಸಕ್ತ ವರ್ಷದಲ್ಲಿ ಪತ್ತೆಯಾದ ನೋಟುಗಳಲ್ಲಿ ಬಹುತೇಕ ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಹಾಗೂ ಜೆರಾಕ್ಸ್ ಮಾಡಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಆದಾಗ್ಯೂ, ದೇಶದ ವಿತ್ತ ವಲಯವನ್ನೇ ಬುಡಮೇಲು ಮಾಡುವ ಖೋಟಾ ನೋಟುಗಳು ನೋಟ್ ಬ್ಯಾನ್ ನಿರ್ಧಾರದಿಂದ ಕಡಿಮೆಯಾದವು ಎಂಬುದು ನಿಟ್ಟುಸಿರು ಬಿಡುವ ವಿಚಾರ.
Leave A Reply