ಪಾಕಿಸ್ತಾನದಿಂದ ವಲಸೆ ಬಂದಿದ್ದ ಹಿಂದೂ ಯುವತಿಗೆ ಭಾರತದ ನಾಗರಿಕತ್ವ, ಈಕೆ ಈಗ ಬಿಜೆಪಿ ಸದಸ್ಯೆಯೂ ಹೌದು!
ದೆಹಲಿ: ಪಾಕಿಸ್ತಾನದಲ್ಲಿ ಭದ್ರತೆ ಇಲ್ಲದ ಕಾರಣ ಸಿಂಧ್ ಪ್ರಾಂತ್ಯದಿಂದ ಗುಜರಾತ್ ಗೆ ವಲಸೆ ಬಂದು 26 ವರ್ಷಗಳಿಂದ ಇಲ್ಲೇ ನೆಲೆಸಿರುವ ಡಿಂಪಲ್ ವೀರಂದಾನಿಗೆ ಭಾರತ ಸರ್ಕಾರ ದೇಶದ ಪೌರತ್ವ ನೀಡಿದೆ. ಅಲ್ಲದೆ ಡಿಂಪಲ್ ಸ್ವಯಂ ಇಚ್ಛೆಯಿಂದ ಬಿಜೆಪಿ ಸೇರಿದ್ದಾರೆ.
1990ರಲ್ಲಿ ಭಾರತಕ್ಕೆ ಬಂದಾಗ ಡಿಂಪಲ್ ಗೆ 13 ವರ್ಷ ವಯಸ್ಸಿನವರಾಗಿದ್ದು, ಸುಮಾರು 27 ವರ್ಷಗಳ ನಿರಂತರ ಶ್ರಮದಿಂದ ಭಾರತದ ಪೌರತ್ವ ಪಡೆದಿದ್ದಾರೆ. ಸಾಮಾನ್ಯ ಕಾರ್ಯಕರ್ತೆಯಾಗಿ ಬಿಜೆಪಿಯನ್ನೂ ಸೇರಿದ್ದಾರೆ.
ಪ್ರಸ್ತುತ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುವವರಿಗೆ ದೀರ್ಘಾವಧಿ ವೀಸಾ ಹಾಗೂ ನಾಗರಿಕತ್ವಕ್ಕೆ ಅರ್ಜಿ ಹಾಕಲು ಅನುಕೂಲ ಕಲ್ಪಿಸುವ ದಿಸೆಯಿಂದ ಎನ್ ಜಿಒ ಒಂದನ್ನು ನಡೆಸುತ್ತಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಡಿಂಪಲ್, “ಕೇಂದ್ರ ಸರ್ಕಾರ ನಮ್ಮ ಬೇಗುದಿ ಆಲಿಸುತ್ತದೆ, ನೋವಿಗೆ ಸ್ಪಂದಿಸುತ್ತದೆ” ಅಲ್ಲದೆ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎನ್ನುತ್ತಾರೆ.
ತಮ್ಮ ತಂದೆ-ತಾಯಿ ಹಾಗೂ ನಾಲ್ವರು ಮಕ್ಕಳ ಜತೆಗೆ ಪಾಕಿಸ್ತಾನದಲ್ಲಿ ಹಿಂಸೆ ತಾಳದೆ ಭಾರತಕ್ಕೆ ಬಂದಿರುವ ಕುರಿತು ತಿಳಿಸುವ ಡಿಂಪಲ್, 1999ರಲ್ಲಿ ಹಿಂದೂ ಯುವಕನ ಜತೆ ಮದುವೆಯಾಗಿದ್ದಾರೆ.
Leave A Reply