ಎಲ್.ಕೆ.ಆಡ್ವಾಣಿಗೆ ಜನ್ಮದಿನದ ಶುಭಕೋರಿದ ಪ್ರಧಾನಿ ಮೋದಿ
Posted On November 8, 2017
0
ದೆಹಲಿ: ಮಾಜಿ ಉಪ ಪ್ರಧಾನ ಮಂತ್ರಿ, ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿ ಅವರ 90ನೇ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ಶುಭಾಶಯ ಕೋರಿದ್ದಾರೆ.
ಶ್ರೀಯುತ ಎಲ್.ಕೆ.ಆಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆರೋಗ್ಯ, ಐಶ್ವರ್ಯ ನೀಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ದೇಶದ ರಾಜಕೀಯ ಕ್ಷೇತ್ರಕ್ಕೆ ಆಡ್ವಾಣಿ ಅವರ ಕಠಿಣ ಪರಿಶ್ರಮ ಹಾಗೂ ಆದರ್ಶಯುತ ವ್ಯಕ್ತಿತ್ವದ ಸೇವೆ ಅಪಾರವಾದುದು. ಸದಾ ಉತ್ತಮ ಮಾರ್ಗದರ್ಶನ ನೀಡುವ ಆಡ್ವಾಣಿಯವರನ್ನು ಪಡೆದಿದ್ದೇ ಬಿಜೆಪಿ ಕಾರ್ಯಕರ್ತರ ಪುಣ್ಯ ಎಂದು ಮೋದಿ ಶ್ಲಾಘಿಸಿದ್ದಾರೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









