ಕಾಶ್ಮೀರ ಸ್ವಾತಂತ್ರ್ಯದ ಬೇಡಿಕೆ ಇಲ್ಲ: ಪಾಕ್ ಪ್ರಧಾನಿ
ಲಂಡನ್: ಅಲ್ಲದೇ ಅಜಾಧಿ ಕಾಶ್ಮೀರ ಬೇಡಿಕೆ ಇಲ್ಲ. ಕಾಶ್ಮೀರಕ್ಕೆ ಸ್ವಾತಂತ್ರ್ಯದ ಬೇಡಿಕೆಗೆ ಬೆಂಬಲವಿಲ್ಲ. ಸಮಸ್ಯೆ ನಿವಾರಣಗೆ ಮಾತುಕತೆಯೊಂದೆ ಮಾರ್ಗ ಎಂದು ಪಾಕಿಸ್ಥಾನ ಪ್ರಧಾನಿ ಶಹೀದ್ ಖಾನ್ ಅಬ್ಬಾಸಿ ಹೇಳಿದ್ದು, ಕಾಶ್ಮೀರದ ಕುರಿತ ಭಾರತದ ವಾದಕ್ಕೆ ಬಲ ನೀಡಿದಂತಾಗಿದೆ.
ಲಂಡನ್ ಸೌಥ್ ಏಷಿಯಾ ಕೇಂದ್ರ ಸ್ಕೂಲ್ ಆಫ್ ಏಕಾನಮಿಯಲ್ಲಿ ನಡೆದ ‘ಫ್ಯೂಚರ್ ಆಫ್ ಪಾಕಿಸ್ತಾನ 2017’ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ಭಾರತ ಪಾಕಿಸ್ತಾನದ ಸಂಬಂಧ ಹದಗೆಡುತ್ತಲೇ ಇರುತ್ತದೆ. ಆದರೆ ಅದಕ್ಕೆ ಯುದ್ಧ ಆಯ್ಕೆಯಾಗಬಾರದು ಎಂದು ಹೇಳಿದರು.
ಕಾಶ್ಮೀರ ಸಮಸ್ಯೆ ನಿರ್ವಹಣೆಗೆ ಯುದ್ಧ ಆಯ್ಕೆಯಲ್ಲ. ಎರಡು ನೆರೆಹೊರೆಯ ರಾಷ್ಟ್ರಗಳ ಮಧ್ಯದ ವಿವಾಧ ಬಗೆಹರಿಯುವ ವರೆಗೆ ಪರಿಸ್ಥಿತಿ ಉದ್ವೀಗ್ನವಾಗಿಯೇ ಉಳಿಯುತ್ತದೆ. ಅಲ್ಲದೇ ಇದೇ ವೇಳೆ ಅಪಘಾನಿಸ್ತಾನದ ಸಂಬಂಧದ ಕುರಿತು ಮೃಧು ದೋರಣೆ ವ್ಯಕ್ತಪಡಿಸಿರುವ ಅಬ್ಬಾಸಿ, ಉಗ್ರರ ವಿರುದ್ಧ ಪಾಕಿಸ್ತಾನ ಹೋರಾಡುತ್ತಿದೆ. ನಮ್ಮ ಸೈನ್ಯದ ಕಾಲುಭಾಗ ಭಯೋತ್ಪಾದನೆಯನ್ನು ಹತ್ತಿಕಲೇ ವ್ಯಯಿಸಲಾಗುತ್ತಿದೆ. ಅಪಘಾನಿಸ್ತಾನದಲ್ಲೂ ಭಯೋತ್ಪಾದನೆ ನಿಯಂತ್ರಣಕ್ಕೆ ಪಾಕಿಸ್ತಾನ ಬೆಂಬಲಿಸಿದೆ ಎಂದು ಹೇಳಿದರು. ಭಯೋತ್ಪಾನೆ ನಿಯಂತ್ರಣದಿಂದ ಅಮೆರಿಕದೊಂದಿಗಿನ ಸಂಬಂಧವು ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಭಾರತ ಸರಕಾರದ ವಿಶೇಷ ಪ್ರತಿನಿಧಿ ದಿನೇಶ್ವರ ಶರ್ಮಾ ‘ಕಾಶ್ಮೀರದ ಶೇರುದಾರರು, ರಾಜಕಾರಣಿಗಳು, ಪ್ರತ್ಯೇಕತವಾದಿಗಳು ಸೇರಿ ನಾನಾ ಸಂಘಟನೆಗಳಿಗೆ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಎಲ್ಲ ಸಂಘಟನೆಗಳು ಶಾಂತಿ ಮಾತುಕತೆಯನ್ನು ನಿರಾಕರಿಸಿದ್ದವು.
Leave A Reply