ಸಿ ವೋಟರ್ ಸಮೀಕ್ಷೆ ಬಿಡುಗಡೆ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೇ ಗೆಲುವು
ಶಿಮ್ಲಾ: ಕರ್ನಾಟಕ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಬಹುಮತ ಪಡೆಯಲಿದೆ ಎಂದು ಚುನಾವಣೆ ಪೂರ್ವ ಸಮೀಕ್ಷೆ ತಿಳಿಸಿರುವ ಬೆನ್ನಲ್ಲೇ, ಸಿ ವೋಟರ್ ಸಂಸ್ಥೆ ಗುರುವಾರ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಪೂರ್ವ ಸಮೀಕ್ಷೆ ಬಿಡುಗಡೆಗೊಳಿಸಿದ್ದು, ಅಲ್ಲೂ ಬಿಜೆಪಿಯೇ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿಸಿದೆ.
ಬಿಜೆಪಿ ಪ್ರಸ್ತುತ 26 ಸೀಟು ಹೊಂದಿದ್ದು 52 ಸ್ಥಾನಕ್ಕೆ ಏರಲಿದೆ. ಕಾಂಗ್ರೆಸ್ 36 ಶಾಸಕರನ್ನು ಹೊಂದಿದ್ದು, 21 ಸ್ಥಾನ ಕಳೆದುಕೊಳ್ಳಲಿದೆ . ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಶೇ.11.8ರಷ್ಟು ಹೆಚ್ಚಿನ ಮತ ಪಡೆಯುವ ಮೂಲಕ ಬಹುಮತ ಸಾಧಿಸಿದರೆ, ಕಾಂಗ್ರೆಸ್ ಶೇ.5ರಷ್ಟು ಕಡಿಮೆ ಮತ ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ರಾಜ್ಯದಲ್ಲಿರುವ ನಿರುದ್ಯೋಗ, ಮೂಲ ಸೌಕರ್ಯ, ಭ್ರಷ್ಟಾಚಾರ ಸೇರಿ ಹಲವು ಸಮಸ್ಯೆ ತೊಲಗಿಸಲು ಬಿಜೆಪಿಯೇ ಉತ್ತಮ ಎಂದು ಜನ ಅಭಿಪ್ರಾಯ ತಿಳಿಸಿದ್ದಾರೆ. ಶೇ.33ರಷ್ಟು ಜನ ಪ್ರೇಮ್ ಕುಮಾರ್ ಧುಮಾಲ್ ಮುಖ್ಯಮಂತ್ರಿಯಾಗಲಿ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ನ.18ರಂದು ಫಲಿತಾಂಶ ಹೊರಬೀಳಲಿದೆ.
Leave A Reply