ಹಿಮಾಚಲ ಪ್ರದೇಶದಲ್ಲಿ ಇಂದು ಮತದಾನ, ಅರಳುವುದೇ ಕಮಲ?
ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುವನಾವಣೆ ಆರಂಭವಾಗಿದ್ದು, ಬೆಳಗ್ಗೆಯೇ ಮತದಾನ ಶುರುವಾಗಿದೆ. ಚಳಿಯನ್ನೂ ಲೆಕ್ಕಿಸದೆ ಜನ ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗೆ 7 ಗಂಟೆಗೇ ಮತದಾನ ಆರಂಭವಾಗಿದ್ದು, ಸಂಜೆ ಐದು ಗಂಟೆಯವರೆಗೆ ನಡೆಯಲಿದೆ. ಒಂದೇ ಹಂತದಲ್ಲಿ 68 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಗೆಲುವಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ಪೈಪೋಟಿ ಎದುರಿಸುತ್ತಿವೆ.
ರಾಜ್ಯಾದ್ಯಂತ 7,525 ಮತಗಟ್ಟೆ ತೆರೆಯಲಾಗಿದ್ದು, 25.68 ಲಕ್ಷ ಪುರುಷ ಹಾಗೂ 24.57 ಲಕ್ಷ ಮಹಿಳಾ ಮತದಾರರಿದ್ದಾರೆ. ಒಟ್ಟು 50 ಲಕ್ಷ ಮತದಾರರಿದ್ದು, ಯಾರ ಒಲವು ಯಾವ ಪಕ್ಷದ ಕಡೆ ಎಂಬುದು ಇಂದು ಮತಯಂತ್ರಗಳಲ್ಲಿ ಮತಗಳ ರೂಪದಲ್ಲಿ ಸೇರಲಿವೆ.
ಎಲ್ಲ 68 ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ನಿಂದ ವೀರಭದ್ರಸಿಂಗ್, ಬೀಜೆಪಿಯಿಂದ ಪ್ರೇಮ್ ಕುಮಾರ್ ಧುಮಾಲ್ ಸಿಎಂ ಅಭ್ಯರ್ಥಿಗಳಾಗಿದ್ದಾರೆ. ಉಳಿದಂತೆ ಬಿಎಸ್ ಪಿ 42, ಸಿಪಿಎಂ 14 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ.
ನ.18ರಂದು ಫಲಿತಾಂಶ ಹೊರಬೀಳಲಿದ್ದು, ಈಗಾಗಲೇ ಸಮೀಕ್ಷೆ ಪ್ರಕಾರ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ.
Leave A Reply