ಆತ ನನ್ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ, ಸೈದಿಗೆ ಕರೆದೊಯ್ದ, ಅಲ್ಲಿ ಲೈಂಗಿಕ ಕಿರುಕುಳ ನೀಡಿದ…
ಕೇರಳದಲ್ಲಿ ಮತ್ತೊಬ್ಬ ಮಹಿಳೆಯೊಬ್ಬರು ಮತಾಂತರದ ಸುಳಿಗೆ ಸಿಲುಕಿದ್ದು, ತನಗೆ ಹೇಗೆ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಯಿತು ಎಂಬುದನ್ನು ಕೇರಳ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಕೇರಳದ ಪಠಾಣಮ್ ಥಿಟ್ಟಾದ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಮುಸ್ಲಿಂ ಯುವಕನೊಂದಿಗೆ ಸ್ನೇಹವಾಗಿದ್ದು, ಆತ್ಮೀಯತೆ ಬೆಳೆದಿದೆ. ಬಳಿಕ ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದಲ್ಲದೇ, ದುಬೈಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೈಕೋರ್ಟ್ ಗೆ ತಿಳಿಸಿದ್ದಾರೆ.
ಮೊದಲು ಬೆಂಗಳೂರಿನಲ್ಲೇ ಆತ ಯುವತಿಯನ್ನು ಅತ್ಯಾಚಾರ ಮಾಡಿದ್ದು, ಅದರ ವಿಡಿಯೋ ತೆಗೆದು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಮತಾಂತರಗೊಳಿಸಿದ್ದ. ನಂತರ ಸೌದಿ ಅರೇಬಿಯಾಗೆ ಕರೆದೊಯ್ದು ಕಿರುಕುಳ ನೀಡಿದ್ದು, ಅದೃಷ್ಟವಶಾತ್ ಆತನಿಂದ ತಪ್ಪಿಸಿಕೊಂಡು ನನ್ನ ಊರಿಗೆ ಬಂದಿದ್ದೇನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಮೊದಲು ಯುವತಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸಹಾಯದ ಮೇರೆಗೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.
Leave A Reply