ಮುಸ್ಲಿಂ ಯೋಗ ಶಿಕ್ಷಕಿಗೆ ಯೋಗ ತರಬೇತಿ ನಿಲ್ಲಿಸುವಂತೆ, ಮತಾಂಧರಿಂದ ಫತ್ವಾ
ರಾಂಚಿ: ಯೋಗ ಶಿಕ್ಷಣ ನೀಡುತ್ತಿದ್ದ ಮುಸ್ಲಿಂ ಮಹಿಳೆಯೊಬ್ಬರಿಗೆ ಮುಸ್ಲಿಂ ಮೌಲ್ವಿಗಳು ಯೋಗ ಶಿಕ್ಷಣ ನೀಡುವುದನ್ನು ನಿಲ್ಲಿಸುವಂತೆ ಫತ್ವಾ ಹೊರಡಿಸಿದ್ದಾರೆ. ಅವರದ್ದೇ ಧರ್ಮಾಂಧರಿಂದ ಮಹಿಳೆಗೆ ಯೋಗ ಶಿಕ್ಷಣ ಸ್ಥಗಿತಗೊಳಿಸಬೇಕು ಎಂದು ಜೀವ ಬೆದರಿಕೆ ಹಾಕಲಾಗಿದೆ ಎಂಬ ದೂರು ಕೇಳಿ ಬಂದಿದೆ.
ಕೆಲ ದಿನಗಳ ಹಿಂದೆ ಯೋಗ ಗುರು ಸ್ವಾಮಿ ಬಾಬಾ ರಾಮ್ ದೇವ ಜತೆ ವೇದಿಕೆ ಮೇಲೆ ಯೋಗ ಪ್ರಚುರಪಡಿಸಿದ್ದರಿಂದ ಯೋಗ ಶಿಕ್ಷಕಿ ರಫಿಯಾ ನಾಜ್ ಅವರ ಕುಟುಂಬಕ್ಕೆ ತೀವ್ರ ಒತ್ತಡ ಹೇರಲಾಗಿದೆ. ಅವರದ್ದೇ ಸಮುದಾಯದ ವ್ಯಕ್ತಿಗಳು ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.
ಯಾರಿಗೂ ನಾನು ಕೈಬಿಸಿ ಕರೆಯುವುದಿಲ್ಲ. ಯಾರು ಬರುತ್ತಾರೋ ಅವರಿಗೆ ಯೋಗ ಶಿಕ್ಷಣ ನೀಡುತ್ತೇನೆ. ಅದ್ದರಿಂದ ಸಮಸ್ಯೆಯೇನು ಇಲ್ಲ. ನನ್ನ ಕಾಯಕ ನಾನು ಮುಂದುವರಿಸುತ್ತೇನೆ. ನನ್ನ ಹೆಸರು ಕೇಳಿ ಯಾರು ಯೋಗ ಕಲಿಯಲು ಬರುವುದಿಲ್ಲ. ಒಂದು ವೇಳೆ ಹಾಗೆ ಆದ್ರೆ, ನನ್ನ ಹೆಸರನ್ನು ಬದಲಾಯಿಸುತ್ತೆನೆ ಎಂದು ಯೋಗ ಶಿಕ್ಷಕಿ ರಫಿಯಾ ನಾಜ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಕ್ರಮ ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡಿರುವ ಜಾರ್ಖಂಡ್ ಸರಕಾರ ಯೋಗ ಶಿಕ್ಷಕಿಗೆ ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದೆ. ಅಲ್ಲದೇ ರಾಂಚಿಯ ಎಸ್ಪಿ ಮಹಿಳೆಯನ್ನು ಭೇಟಿಯಾಗಿ ವಿಚಾರಣೆ ನಡೆಸಿದ್ದಾರೆ. ಇಬ್ಬರು ರಕ್ಷಣಾ ಸಿಬ್ಬಂದಿಯನ್ನು ರಕ್ಷಣೆಗೆ ನೇಮಿಸಲಾಗುವುದು ಎಂದು ಹೇಳಿದ್ದಾರೆ.
Leave A Reply