ರಾಹುಲ್ ಗಾಂಧಿ ಕಾಣುತ್ತಲೇ ಮೋದಿ ಮೋದಿ ಎಂದು ಕೂಗಿದ ಜನ, ಪಿಗ್ಗಿ ಬಿದ್ದ ರಾಗಾ
ಗಾಂಧಿನಗರ: ಇದುವರೆಗೂ ರಾಹುಲ್ ಗಾಂಧಿ ಭಾಷಣಕ್ಕೆ ನಿಂತರೆ, ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲು ಆರಂಭಿಸಿದರೆ ಸಾರ್ವಜನಿಕರು ಮೋದಿ ಮೋದಿ ಮೋದಿ… ಎಂದು ಕೂಗಿ ಅವಮಾನಗೊಳಿಸುತ್ತಿದ್ದರು.
ಆದರೆ ಈಗ ಹೊಸ ಟ್ರೆಂಡ್ ಶುರುವಾಗಿದೆ…
ಹೌದು, ಗುಜರಾತಿನ ಜವಳಿ ಮಾರುಕಟ್ಟೆಯೊಂದರ ಮಾಲೀಕರ ಜತೆ ಸಮಾಲೋಚನೆ ನಡೆಸಲು ರಾಹುಲ್ ಗಾಂಧಿ ತೆರಳಿದ್ದು, ರಾಗಾರನ್ನು ಕಾಣುತ್ತಲೇ ಜನ ಮೋದಿ ಮೋದಿ ಮೋದಿ… ಎಂದು ಝೇಂಕರಿಸಿದ್ದಾರೆ. ಇದು ರಾಹುಲ್ ಗಾಂಧಿಗೆ ಮುಜುಗರಕ್ಕೀಡಾಗಿದ್ದು ಅಲ್ಲಿಂದ ಸುಮ್ಮನೆ ಕಾಲ್ಕಿತ್ತಿದ್ದಾರೆ.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಟ್ಟಿನಲ್ಲಿ ರಾಹುಲ್ ಗಾಂಧಿಯ ಹುರುಳಿಲ್ಲದ ಟೀಕೆಗೆ ಬೇಸತ್ತ ಜನ, ರಾಗಾ ಕಾಣುತ್ತಲೇ ಮೋದಿ ಮೋದಿ ಎಂದು ಕೂಗಲಾರಂಭಿಸಿದ್ದಾರೆ.
ಇದು ರಾಹುಲ್ ಗಾಂಧಿಯವರ ಸಣ್ಣ ಮಟ್ಟದ ರಾಜಕಾರಣ, ಜನರಿಂದ ರಾಗಾಯೆಡೆಗಿರುವ ತಿರಸ್ಕಾರದ ಸಂಕೇತವಾಗಿದ್ದು, ರಾಹುಲ್ ಇನ್ನಾದರೂ ಕೇಂದ್ರದ ವಿರುದ್ಧ, ಮೋದಿ ವಿರುದ್ಧ ಹುರುಳಿಲ್ಲದ ಟೀಕೆ ನಿಲ್ಲಿಸುತ್ತಾರಾ? ಇಲ್ಲವೇ, ಮೋದಿ ಮೋದಿ ಎಂಬ ಧ್ವನಿ ಪದೇ ಪದೆ ಕೇಳಿಸಿಕೊಳ್ಳುತ್ತಾರಾ? ಎಂಬುದೇ ಕುತೂಹಲ.
Leave A Reply