ಅರವಿಂದ ಕೇಜ್ರಿವಾಲ್ ಒಬ್ಬ ವಿಲಕ್ಷಣ ವ್ಯಕ್ತಿ: ಅಮರಿಂದರ್ ಸಿಂಗ್
ಚಂಡೀಗಡ: ಅರವಿಂದ್ ಕೇಜ್ರಿವಾಲ್ ಎಲ್ಲ ವಿಷಯಗಳ ಬಗ್ಗೆಯೂ ಏನನ್ನೂ ಗೊತ್ತಿರದೆ, ತಿಳಿದುಕೊಳ್ಳದೆ ಮಾತನಾಡುತ್ತಾರೆ. ಅವರೊಬ್ಬ ವಿಚಿತ್ರ ಹಾಗೂ ವಿಲಕ್ಷಣ ವ್ಯಕ್ತಿ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟೀಕಿಸಿದ್ದಾರೆ.
ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವ ಕಾರಣ ಪಂಜಾಬ್ ಹಾಗೂ ಹರಿಯಾಣದಲ್ಲಿ ರೈತರು ಗದ್ದೆಯಲ್ಲಿ ಭತ್ತದ ತ್ಯಾಜ್ಯ ಸುಡಬಾರದು ಎಂದು ಕೇಜ್ರಿವಾಲ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅಮರಿಂದರ್ ಸಿಂಗ್ ಟ್ವಿಟರ್ ನಲ್ಲಿ ಕೇಜ್ರಿ ವಿರುದ್ಧ ಮಾತನಾಡಿದ್ದಾರೆ.
ರಾಜ್ಯದಲ್ಲಿ 20 ದಶಲಕ್ಷ ಟನ್ ಭತ್ತದ ತ್ಯಾಜ್ಯ ಇದೆ. ಇದೆಲ್ಲವನ್ನೂ ರೈತರಿಗೆ ಸಂಗ್ರಹಿಸಲು ಹೇಳಿದರೆ, ಅವರು ಆಕ್ರೋಶಗೊಂಡು, ಆ ತ್ಯಾಜ್ಯದಲ್ಲೇ ನಮ್ಮನ್ನು ಮುಚ್ಚಿ ಹಾಕುತ್ತಾರೆ. ರೈತರು ಭತ್ತದ ತ್ಯಾಜ್ಯ ಹೇಗೆ ಸಂಗ್ರಹಿಸಬೇಕು? ಇಂಥ ಕನಿಷ್ಠ ಜ್ಞಾನವೂ ಇಲ್ಲದ ಕೇಜ್ರಿವಾಲ್ ವಿಲಕ್ಷಣ ವ್ಯಕ್ತಿ ಎಂದು ಜರಿದಿದ್ದಾರೆ.
ಅಲ್ಲದೆ, ಉತ್ತರ ಭಾರತದ ನಾವೆಲ್ಲರೂ ರಾಜಕೀಯವನ್ನು ಬದಿಗಿತ್ತು, ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳೋಣ, ಹೋರಾಡೋಣ. ಅದರ ಬದಲು ರೈತರಿಗೆ ತೊಂದರೆ ಕೊಡುವುದು ಬೇಡ ಎಂದು ಅಮರಿಂದರ್ ಸಲಹೆ ನೀಡಿದ್ದಾರೆ.
Leave A Reply