ಕಾಂಗ್ರೆಸ್ ರಾಜ್ಯ ಉಸ್ತುವಾರಿ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಂಗ ಆಯೋಗ ಆದೇಶ, ಕಾಂಗ್ರೆಸ್ಸಿಗೆ ಭಾರಿ ಮುಖಭಂಗ
ತಿರುವನಂತಪುರ: ಸೋಲಾರ್ ಹಗರಣ ಆರೋಪಿ ಸರಿತಾ ನಾಯರ್ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಲೈಂಗಿಕ ಕಿರುಕುಳ ಕುರಿತು ಸರ್ಕಾರಕ್ಕೆ ನೀಡಿದ್ದ ಪತ್ರ ಈಗ ನ್ಯಾಯಾಂಗದ ಮೆಟ್ಟಿಲೇರಿದ್ದು, ನಾಯರ್ ಹೇಳಿಕೆ ಆಧರಿಸಿ ವೇಣುಗೋಪಾಲ್ ವಿರುದ್ಧ ಎಫ್ಐಆರ್ ದಾಖಲಿಸಬಹುದು ಎಂದು ನ್ಯಾಯಾಂಗ ಆಯೋಗ ತಿಳಿಸಿದೆ.
ಈ ಪ್ರಕರಣ ಕೆ.ಸಿ.ವೇಣುಗೋಪಾಲ್ ಗೆ ಕುತ್ತಾಗಿದ್ದು, ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ಇಂಥ ಹಗರಣ ಬೆಳಕಿಗೆ ಬಂದಿರುವುದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಕೇರಳ ವಿಧಾನಸಭೆ ಸೋಲಾರ್ ಹಗಣರದ ಮರುತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ, ಕೆ.ಸಿ.ವೇಣುಗೋಪಾಲ್ ವಿರುದ್ಧ ಸರಿತಾ 2013ರಲ್ಲಿ ಮಾಡಿರುವ ಆರೋಪ ಪರಿಗಣಿಸಲು ನ್ಯಾಯಾಂಗ ಆಯೋಗ ಹೇಳಿದೆ.
ವೇಣುಗೋಪಾಲ್ ಅವರನ್ನು ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆಗೆ ತೆರಳಿದ್ದಾಗ ವೇಣುಗೋಪಾಲ್ ನನ್ನ ಹಿಂಭಾಗ ಸವರಿದ್ದಲ್ಲದೇ, ಕೆಲ ದಿನಗಳ ಬಳಿಕ ತುಂಬ ಮೃದುವಾಗಿದೆ, ಸ್ಟಿಲ್ ಲವ್ ಯೂ ಎಂದು ಮೊಬೈಲ್ಗೆ ಮೆಸೇಜ್ ಕಳುಹಿಸಿದ್ದಾರೆ. ಅಲ್ಲದೆ ಇಕೋ ಟೂರಿಸಂಗೆ ಸಂಬಂಧಿಸಿದ ಪತ್ರಗಳಿಗೆ ಸಹಿ ಹಾಕಲಾಗುವುದು ಎಂದು ರೋಸ್ ಹೌಸಿಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನನ್ನ ಮೊಬೈಲ್ಗೆ ವೇಣುಗೋಪಾಲ್ ಮಾಡಿರುವ ಕರೆಗಳ ಕುರಿತು ದಾಖಲೆಗಳಿವೆ ಎಂದು ಸರಿತಾ ನೀಡಿರುವ ಹೇಳಿಕೆ ಆಧರಿಸಿ ನ್ಯಾಯಾಂಗ ಆಯೋಗ ಎಫ್ಐಆರ್ ದಾಖಲಿಸಲು ಸೂಚಿಸಿದೆ.
ಒಟ್ಟಿನಲ್ಲಿ ಈ ಪ್ರಕರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕಾಂಗ್ರೆಸ್ ವಿರುದ್ಧದ ಸಮರ ಎಂದೇ ಬಿಂಬಿಸಲಾಗಿದ್ದರೂ, ಕೆ.ಸಿ.ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಮುಜಗರದ ವಿಷಯವಾಗಿ ಪರಿಣಮಿಸಿದೆ.
Leave A Reply