ಜಯಾ ಸುದ್ದಿವಾಹಿನಿ ಕಚೇರಿ ಹಾಗೂ ಶಶಿಕಲಾ ಕುಟುಂಬಸ್ಥರ ಕಚೇರಿ ಮೇಲೆ ಐಟಿ ದಾಳಿ!
Posted On November 10, 2017
ಚೆನ್ನೈ: ತೆರಿಗೆ ವಂಚನೆ ಪ್ರಕರಣದಲ್ಲಿ ತಮಿಳುನಾಡಿನ ಪ್ರಭಾವಿ ಜಯ ಸುದ್ದಿವಾಹಿನಿ ಕಚೇರಿ ಹಾಗೂ ದಿ.ಜಯಲಲಿತಾ ಆಪ್ತೆ ಶಶಿಕಲಾ ಅವರ ಕುಟುಂಬಸ್ಥರ ಮಾಲೀಕತ್ವದ ವಿವಿಧ ಕಚೇರಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಜಯಾ ಟಿವಿ, ಜಾಜ್ ಸಿನಿಮಾ ಹಾಗೂ ಶಶಿಕಲಾ ಸಂಬಂಧಿಕರ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಸ್ತುತ ಜೈಲಿನಲ್ಲಿರುವ ಶಶಿಕಲಾ ಅವರ ಸಂಬಂಧಿ ವಿವೇಕ್ ಜಯರಾಮನ್ ಜಯಲಲಿತಾ ಹೆಸರಿನಲ್ಲಿ ಆರಂಭವಾದ ಜಯಾ ಟಿವಿ ನೇತೃತ್ವ ವಹಿಸಿದ್ದು, ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದಶಕಗಳವರೆಗೆ ಎಐಎಡಿಎಂಕೆ ಮುಖವಾಣಿಯಂತೆ ಕಾರ್ಯನಿರ್ವಹಿಸಿದ್ದ ಜಯಾ ಟಿವಿ ಜಯಲಲಿತಾ ನಿಧನವಾದ ಬಳಿಕ ಉಂಟಾದ ಬಣ ರಾಜಕೀಯದಿಂದ ಬೇಸತ್ತು, ಅದರ ಮುಖ್ಯಸ್ಥರು ಸ್ವತಂತ್ರವಾಗಿ ಸಂಸ್ಥೆ ನಡೆಸಲು ತೀರ್ಮಾನಿಸಿದ್ದರು.
- Advertisement -
Leave A Reply