ಭಾರತ-ಪಾಕ್ ಮಾತುಕತೆಗೆ ಭಯೋತ್ಪಾದನೆ ಮುಕ್ತ ವಾತಾವರಣ ಅವಶ್ಯ
ದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆ ಮುಂದುವರಿಯಬೇಕಾದರೆ ಭಯೋತ್ಪಾದನೆ ಮುಕ್ತ ವಾತಾವರಣ ನಿರ್ಮಾಣ ಅಗತ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಉಭಯ ದೇಶಗಳ ನಡುವೆ ವಿವಾದ ಬಗೆಹರಿಸಿಕೊಳ್ಳಲು, ಶಾಂತಿ ಸ್ಥಾಪನೆ ಮಾಡಿಕೊಳ್ಳಲು ಭಯೋತ್ಪಾದನೆ ಮುಕ್ತ ವಾತಾವರಣ ನಿರ್ಮಾಣವಾಗಬೇಕಿದ್ದು, ಪಾಕಿಸ್ತಾನ ಮೊದಲು ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ಭಾರತ ಸರ್ಕಾರದ ನಿಲುವು ಸಮಚಿತ್ತ ಹಾಗೂ ಯಥಾಸ್ಥಿತಿಯಿಂದ ಕೂಡಿದೆ. ಪಾಕಿಸ್ತಾನಕ್ಕೆ ಮಾತುಕತೆ ಮುಂದುವರಿಸಬೇಕು ಎಂಬ ಇಂಗಿತವಿದ್ದರೆ, ಮೊದಲು ಭಯೋತ್ಪಾದನೆಯನ್ನು ಮುಕ್ತಗೊಳಿಸಬೇಕು ಹಾಗೂ ಉಗ್ರ ಪೋಷಣೆ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
2016ರಲ್ಲಿ ಪಾಕಿಸ್ತಾನಿ ಉಗ್ರರು ಭಾರತದ ಪಠಾಣ್ ಕೋಟ್ ಮೇಲೆ ದಾಳಿ ನಡೆಸಿದ ಬಳಿಕ ಭಾರತ-ಪಾಕಿಸ್ತಾನ ಮಾತುಕತೆ ರದ್ದಾಗಿದೆ. ಆದಾಗ್ಯೂ, ಭಾರತ-ಪಾಕ್ ಸಮಸ್ಯೆ ನಡುವೆ ಚೀನಾ ಮೂಗು ತೂರಿಸುತ್ತಿದ್ದು, ರವೀಶ್ ಹೇಳಿಕೆಗೆ ಪಾಕಿಸ್ತಾನ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ.
Leave A Reply