ವಿವಾದಿತ ಧರ್ಮಗುರು ಜಾಕೀರ್ ನಾಯ್ಕ್ ಹಸ್ತಾಂತರಕ್ಕೆ ಮಲೇಷ್ಯಾ ಒಪ್ಪಿಗೆ
ದೆಹಲಿ: ವಿವಾದಿತ ಧರ್ಮಗುರು, ಮುಸ್ಲಿಮರೆಲ್ಲರೂ ಹತ್ಯಾರ ಹಿಡಿಯಬೇಕು ಎಂದು ದಳ್ಳುರಿ ಬಿತ್ತುವ, ಪ್ರಸ್ತುತ ಹವಾಲ ದಂಧೆಯಲ್ಲಿ ಎನ್ಐಎ ಉರುಳಿಗೆ ಸಿಲುಕಿಕೊಂಡಿರುವ ಜಾಕೀರ್ ನಾಯ್ಕ್ ಹಸ್ತಾಂತರಕ್ಕೆ ಮಲೇಷ್ಯಾ ಸರ್ಕಾರ ಒಪ್ಪಿಗೆ ನೀಡಿದೆ.
ಮಲೇಷ್ಯಾದ ಉಪ ಪ್ರಧಾನಿ ಅಹ್ಮದ್ ಜಹೀದ್ ಹಮೀದಿ ಈ ಕುರಿತು ಹೇಳಿದ್ದು, ಭಾರತ ನಾಯ್ಕ್ ಹಸ್ತಾಂತರಕ್ಕೆ ಅಧಿಕೃತ ಮನವಿ ಸಲ್ಲಿಸಿದರೆ ಹಸ್ತಾಂತರಗೊಳಿಸುವುದಾಗಿ ತಿಳಿಸಿದ್ದಾರೆ.
ಕಳೆದ ವಾರ ಜಾಕೀರ್ ನಾಯ್ಕ್ ಹಸ್ತಾಂತರದ ಮಲೇಷ್ಯಾ ಸರ್ಕಾರಕ್ಕೆ ಭಾರತ ಮನವಿ ಮಾಡುತ್ತದೆ. ಆತನ ಹಸ್ತಾಂತರಕ್ಕೆ ಮಲೇಷ್ಯಾ ಸರ್ಕಾರ ಸಹಕರಿಸಬೇಕು ಎಂದು ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಲೇಷ್ಯಾ ಉಪಪ್ರಧಾನಿ ಹಸ್ತಾಂತರದ ಕುರಿತು ಒಪ್ಪಿಗೆ ಸೂಚಿಸಿದ್ದಾರೆ.
ಇದಕ್ಕೆ ಭಾರತ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಮಲೇಷ್ಯಾ ಸರ್ಕಾರಕ್ಕೆ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಮೂಲಗಳಿಂದ ತಿಳಿದುಬಂದಿದೆ.
ಭಾಷಣದ ಮೂಲಕ ಇಸ್ಲಾಂ ಯುವಕರಿಗೆ ಮೂಲಭೂತವಾದದಲ್ಲಿ ತೊಡಗುವಂತೆ ಪ್ರಚೋದನೆ ಹಾಗೂ ಹವಾಲ ದಂಧೆಯಲ್ಲಿ ತೊಡಗಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಜಾಕೀರ್ ನಾಯ್ಕ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ತನಿಖೆ ಸಹ ಮುಂದುವರಿಸಿದೆ.
Leave A Reply