ಕೊನೆಗೂ ಮಣಿದ ಪಾಕಿಸ್ತಾನ, ಕುಲಭೂಷಣ್ ಜಾಧವ್ ಭೇಟಿ ಮಾಡಲು ಪತ್ನಿಗೆ ಅವಕಾಶ
ಇಸ್ಲಾಮಾಬಾದ್: ಭಾರತೀಯ ನೌಕಾದಳ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ರಕ್ಷಣೆಗೆ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲೇ ಪಾಕಿಸ್ತಾನಕ್ಕೆ ಮುಖಭಂಗವಾದ ಬಳಿಕ ಮೆತ್ತಗಾಗಿರುವ ಪಾಕಿಸ್ತಾನ, ಕೊನೆಗೂ ಕುಲಭೂಷಣ್ ಜಾಧವ್ ಪತ್ನಿಗೆ ಭೇಟಿ ಮಾಡಲು ಒಪ್ಪಿಗೆ ಸೂಚಿಸಿದೆ.
ಭಾರತ ಹಾಗೂ ಕುಲಭೂಷಣ್ ಜಾಧವ್ ಕುಟುಂಬಸ್ಥರು ಪಾಕಿಸ್ತಾನಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಹಲವು ಬಾರಿ ರಾಯಭಾರ ಒಪ್ಪಿಗೆಗೆ ಮನವಿ ಮಾಡಿದ್ದರೂ ಪಾಕಿಸ್ತಾನ ಮೊಂಡುತನ ಮಾಡಿತ್ತು.
ಈಗ ಜಾಧವ್ ಪತ್ನಿಗೆ ತಮ್ಮ ಪತಿಯನ್ನು ಭೇಟಿ ಮಾಡಲು ಮಾನವೀಯ ಆಧಾರದ ಮೇಲೆ ಅವಕಾಶ ನೀಡಲಾಗಿದೆ. ಈ ಕುರಿತು ಇಸ್ಲಾಮಾಬಾದ್ ನಲ್ಲಿರುವ ಭಾರತದ ಹೈಕಮಿಷನ್ ಗೆ ಸೂಚನೆ ನೀಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಬೇಹುಗಾರಿಕೆ ಆರೋಪದಲ್ಲಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿರುವ ಪಾಕಿಸ್ತಾನ ಜಾಧವ್ ಗೆ ಮರಣ ದಂಡನೆ ವಿಧಿಸಿತ್ತು. ಆದರೆ ಭಾರತ ಸರ್ಕಾರದ ಪ್ರಯತ್ನದ ಫಲವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕಿಸ್ತಾನ ವಿಧಿಸಿದ ಶಿಕ್ಷೆಗೆ ಮೇ 18ರಂದು ತಡೆಯಾಜ್ಞೆ ನೀಡಿದೆ.
Leave A Reply