‘ಟಿಪ್ಪು’ ಇಂಥದ್ದೊಂದು ಹೆಸರನ್ನು ಕೊಡವರು ತಮ್ಮ ಸಾಕುನಾಯಿಗೆ ಇಡುತ್ತಾರೆ! ಯಾಕಂತ ಓದಿ ತಿಳ್ಕೊಳ್ಳಿ
ಟಿಪ್ಪು ಜಯಂತಿಯನ್ನು ಕಟ್ಟಾ ಮುಸ್ಲಿಮರೆ ವಿರೋಧಿಸಬೇಕು ಯಾಕಂದರೆ….?
‘ಟಿಪ್ಪು’ ಇಂಥದ್ದೊಂದು ಹೆಸರನ್ನು ಕೊಡವರು ತಮ್ಮ ಸಾಕುನಾಯಿಗೆ ಇಡುತ್ತಾರೆ! ಯಾಕೆಂದರೆ ಕೊಡವರಿಗೆ ಈ ಟಿಪ್ಪು ಎಂಬ ಹೆಸರಿನ ಸುಲ್ತಾನನ ಮೇಲೆ ಬೆಂಕಿಯಂಥಾ ಸಿಟ್ಟಿದೆ! ಆ ಹೆಸರೆತ್ತಿದರೇ ಸಾಕು ಕೊಡವರ ರಕ್ತ ಕುದಿಯುತ್ತದೆ. ಟಿಪ್ಪು ತಂದೆ ಹೈದರಾಲಿಯ ಕಾಲದಿಂದಲೇ ಈ ಅಪ್ಪ-ಮಗ ಕೊಡವರ ಮೇಲೆ ಇನ್ನಿಲ್ಲದ ರೀತಿಯ ಹಿಂಸಾಚಾರ ಎಸಗಿದ್ದರು. ಹಲ ತಲೆಮಾರುಗಳು ಕಳೆದರೂ ಆ ಭಯಾನಕ, ಕರಾಳ ನೆನಪುಗಳಿಂದ ಅಲ್ಲಿನ ಜನರಿಗಿಂದೂ ಹೊರಬರಲು ಆಗುತ್ತಿಲ್ಲ.
ಹೈದರ್ ಕೊಡಗಿನ ಮೇಲೆ ಆಕ್ರಮಣ ಮಾಡಿದ್ದು 1765 ರಲ್ಲಿ, ಏಕಾಏಕಿ ದಾಳಿ ಮಾಡಿದ ಹೈದರನ ಸೈನ್ಯದ ಕುಟಿಲ ಯದ್ಧತಂತ್ರದೆದುರು ಕೊಡಗು ಶರಣಾಯಿತು. ಕೊಡಗಿನ ಅರಸ ಕೇರಳಕ್ಕೆ ಓಡಿಹೋದ. ದಾಳಿಗೆ ಬೆಚ್ಚಿ ಕಾಡಿನೊಳಗೆ ಸೇರಿಕೊಂಡ ಕೊಡವರನ್ನು ಹುಡುಕಿ-ಹುಡುಕಿ ಕೊಂದುಹಾಕಿದ ಹೈದರಾಲಿ, ಹಾಗೆ ಮಾಡುವಾಗ ಓರ್ವ ಕೊಡವನ ತಲೆ ಕಡಿದು ತಂದ ಸೈನಿಕನಿಗೆ ಐದುರೂಪಾಯಿ ಬಹುಮಾನ ಘೋಷಿಸಿದ! ಬಳಿಕ 1773 ರಲ್ಲಿ ಮತ್ತೊಮ್ಮೆ ದಾಳಿಮಾಡಿದ ಹೈದರ್ ತನ್ನ ಕೈಗೊಂಬೆಯಾಗಿದ್ದ ಅಪ್ಪಾಜಿಯನ್ನು ಅರಸನನ್ನಾಗಿ ಮಾಡಿದ್ದ. ಹೈದರಾಲಿ ಮರಣ ಹೊಂದಿ ಟಿಪ್ಪುವಿನ ಆಡಳಿತ ಶುರುವಾದ ಮೇಲೆ ಕೊಡವರು ಮತ್ತೊಮ್ಮೆ ಎದ್ದುನಿಂತರು. ದಾಳಿ ಮಾಡಿದ ಟಿಪ್ಪು ಸೈನ್ಯವನ್ನು ಹಿಮ್ಮೆಟ್ಟಿಸಿ ಸೋಲಿಸಿದರು.
1785 ರಲ್ಲಿ ಎರಡೆರೆಡು ಬಾರಿ ಸೈನ್ಯ ಕಳಿಸಿದರೂ ಕೊಡವರ ವೀರಾವೇಶಕ್ಕೆ ಟಿಪ್ಪುವಿನ ಸೈನ್ಯ ಮಣಿಯಬೇಕಾಯಿತು. ಆಗ ಟಿಪ್ಪು ಸ್ವತಹಾ ತಾನೆ ಸೈನ್ಯ ಸಮೇತ ದಂಡೆತ್ತಿ ಬಂದು ಉಳಗುಳಿಯಲ್ಲಿ ಶಿಬಿರಹೂಡಿ ಅಲ್ಲೆ ಮುಹರ್ರಂ ಆಚರಿಸಿಕೊಂಡ. ನಂತರ ತಲಕಾವೇರಿಗೆ ಬಂದು ಅಲ್ಲಿ ಶಿಬಿರಹೂಡಿ ಕೊಡವರ ಬಳಿ ದೂತರನ್ನು ಕಳಿಸಿ ಒಪ್ಪಂದ ಮಾಡಿಕೊಳ್ಳುತ್ತೇನೆಂದು ಕೇಳಿಕೊಂಡ. ಕೊಡವರು ಶಾಂತಿ ಒಪ್ಪಂದವಾಯಿತೆಂದು ಸಂತೊಷದಿಂದ ನಿರುಮ್ಮಳರಾದರು. ಆದರೆ ಕ್ರೂರಿ ಟಿಪ್ಪುವಿನ ಲೆಕ್ಕಾಚಾರವೇ ಬೇರೆಯಿತ್ತು. ದೇವಾಟ್ಪಪರಂಬ ಎಂಬ ಜಾಗಕ್ಕೆ ಕೊಡವರನ್ನು ಒಪ್ಪಂದಕ್ಕೆಂದು ಕರೆಸಿಕೊಂಡ ಟಿಪ್ಪು ಅವರಿಗೆ ದ್ರೋಹವೆಸೆಗಿದ. ಎಲ್ಲಾ ಕಡೆಗಳಿಂದಲೂ ಕೊಡವರ ಮೇಲೆ ತನ್ನ ಸೈನ್ಯದ ಮೂಲಕ ಆಕ್ರಮಣ ಮಾಡಿಸಿದ. ಅಲ್ಲೊಂದು ಮಾರಣಹೋಮವೇ ನಡೆದುಹೋಯಿತು. ಟಿಪ್ಪುವಿನ ಆಸ್ಥಾನದ ಅಧಿಕೃತ ಇತಿಹಾಸಕಾರ ಮೀರ್ ಹುಸೇನ್ ಕಿರ್ಮಾನಿಯ ಪ್ರಕಾರವೇ ಹೇಳುವುದಾದರೆ, ಸುಮಾರು ಎಂಭತ್ತು ಸಾವಿರಕ್ಕೂ ಹೆಚ್ಚು ಕೊಡವ ಹೆಂಗಸರು ಮಕ್ಕಳನ್ನು ಅಂದು ಸೆರೆಹಿಡಿಯಲಾಯಿತು. ಅವರನ್ನೆಲ್ಲಾ ಶ್ರೀರಂಗ ಪಟ್ಟಣಕ್ಕೆ ಕರೆತಂದು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಯಿತು. ಒಪ್ಪದವರನ್ನು ನಿರ್ದಯವಾಗಿ ಕೊಲ್ಲಲಾಯಿತು.
ನಂತರ 1789ರಲ್ಲಿ ಟಿಪ್ಪು ಸೈನ್ಯ ಮತ್ತೊಮ್ಮೆ ಕೊಡಗಿನ ಮೇಲೆ ದಾಳಿಮಾಡಿತು. ಕೊಡಗನ್ನು ಪೂರ್ತಿ ಲೂಟಿಹೊಡೆದ ಟಿಪ್ಪುಸೈನ್ಯ ಹೆಂಗಸರು ಮಕ್ಕಳೆನ್ನದೇ ಸಾವಿರಾರು ಜನರನ್ನು ಮಾರಣಹೋಮ ಮಾಡಿತು. ಹೆಂಗಸರನ್ನು ರಸ್ತೆಬದಿಯ ಮರಗಳಿಗೆ ನೇಣು ಹಾಕಿದ ಮೇಲೆ ಅವರ ಕುತ್ತಿಗೆಗಳಿಗೆ ಅವರ ಮಕ್ಕಳನ್ನು ನೇತು ಹಾಕಿ ಸಾಯಿಸಲಾಯಿತು. ಇದೆಲ್ಲಾ ವಿವರವನ್ನು ಯಾವುದೋ ಬ್ರಿಟಿಷ್ ಇತಿಹಾಸಕಾರ ಕೊಟ್ಟದ್ದಲ್ಲ. ಬದಲಿಗೆ ಮೀರ್ ಹುಸೇನ್ ಕಿರ್ಮಾನಿಯ ದಾಖಲೆಗಳೇ ಹಾಗೆ ಹೇಳುತ್ತವೆ. ತನ್ನ ಸುಲ್ತಾನನೆಸಗಿದ ಕ್ರೌರ್ಯವನ್ನು ಮಹಾನ್ ಸಾಧನೆಯೇನೋ ಎಂಬಂತೆ ಕಿರ್ಮಾನಿ ವಿವರಿಸುತ್ತಾನೆ. ಟಿಪ್ಪುವನ್ನು ಕ್ರೂರಿ ಮತಾಂಧನಂತೆ ಚಿತ್ರಿಸಿದ್ದು ಬ್ರಿಟಿಷರು ಅಂತ ರಾಗ ಹಾಡುವ ನಮ್ಮ ನಾಡಿನ ಬುದ್ದಿಜೀವಿಗಳು ಸ್ವತಹಾ ಟಿಪ್ಪುಸುಲ್ತಾನನೇ ಈ ಕುರಿತು ರಣಮಸ್ತ್ ಖಾನನಿಗೆ ಮತ್ತು ಬದ್ರುಝ್ಝಮಾನ್ ಖಾನನಿಗೆ ಬರೆದ ಪತ್ರಗಳನ್ನೊಮ್ಮೆ ನೋಡಬೇಕು. ಆ ಪತ್ರಗಳು ಟಿಪ್ಪುವಿನ ಕ್ರೌರ್ಯಕ್ಕೆ ಸಾಕ್ಷಿ ಹೇಳುತ್ತವೆ.
ಟಿಪ್ಪು ಸತ್ತುಹೋಗಿ ಇನ್ನೂರು ಚಿಲ್ಲರೆ ವರ್ಷವಾದರೂ ಕೊಡವರು ಅವನನ್ನು ಮತ್ತು ಅವನ ಕ್ರೌರ್ಯವನ್ನು ನೆನಪಿಟ್ಟಿದ್ದಾರೆ ! ಹೀಗಾಗಿ ಇಂಥಾ ಕ್ರೂರ ಮತಾಂಧ ಟಿಪ್ಪುವಿನ ಹೆಸರನ್ನು ಕೊಡವರು ಇವತ್ತಿಗೂ ತಾವು ಸಾಕುವ ನಾಯಿಗಳಿಗೆ ಇಡುತ್ತಾರೆ, ಮತ್ತು ಒಂದು ರೀತಿಯ ಪ್ರೀತಿಯಿಂದ ತಾವುಂಡ ಎಂಜಲಿನ ಮೂಳೆತುಂಡನ್ನು ಎಸೆಯುತ್ತಾರೆ. ಕೊಡವರು ಅವನನ್ನು ಮತ್ತು ಅವನ ಕ್ರೌರ್ಯವನ್ನು ಇನ್ನೂ ಮರೆತಿಲ್ಲ ವೆಂಬುದಕ್ಕೆ ಇದೊಂದು ಉದಾಹರಣೆ ಮಾತ್ರ.
ಹಾಗಾಗಿಯೇ ಇವತ್ತಿಗೂ ಕೊಡಗಿನ ಯಾವುದೇ ಮೂಲೆಗೆ ಹೋಗಿ ‘ಟಿಪ್ಪು’ ಅಂತಂದರೆ ಕುಂಯ್ಯ ಕುಂಯ್ಯ ಅಂತ ಕಿರುಲುತ್ತಾ ನಿಮ್ಮ ಕಾಲ ಬಳಿಗೆ ಎಂಜಲು ಎಲುಬಿನ ಆಸೆಯಿಂದ ಬರುವ ಬೀದಿನಾಯಿ, ಸಾಕುನಾಯಿಗಳು ಸಾಕಷ್ಟಿವೆ. ಆದರೆ ಅಚ್ಚರಿಯೆಂದರೆ ನಮ್ಮ ಜಾತ್ಯತೀತ, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳೆಲ್ಲಾ ಹಾಡಿಹೊಗಳುವ ಟಿಪ್ಪುಸುಲ್ತಾನ ಎಂಬ ಧೀರ ಶೂರ ದೇಶ ಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ(?)ನ ಹೆಸರಿಟ್ಟುಕೊಂಡಿರುವ ಒಬ್ಬನಾದರು ಇಸ್ಲಾಮಿ ಮನುಷ್ಯ ಕಾಣುತ್ತಿಲ್ಲ. ಯಾಕೆ? ಸುಲ್ತಾನನೆಂಬ ಪದ ಬಿಟ್ಟುಬಿಡಿ, ಬರೀ ಟಿಪ್ಪು ಅಲಿ ಖಾನ್ ಅಂತಲೋ, ಶೇಕ್ ಮಹಮದ್ ಟಿಪ್ಪು ಅಂತಲೋ ಯಾಕೆ ಯಾರೂ ತಮ್ಮ ಮಕ್ಕಳಿಗೆ ಹೆಸರಿಡುವುದಿಲ್ಲ? ತಾವು ವೀರಾಧಿ ವೀರನೆಂದು ಹಾಡಿ ಹೊಗಳುವ ಟಿಪ್ಪುವಿನ ಹೆಸರನ್ನುಇವರೆಲ್ಲಾ ಯಾಕೆ ಮರೆತುಬಿಡುತ್ತಾರೆ? ಸಾಮಾನ್ಯ ಬಡಪಾಯಿ ಮುಸ್ಲಿಮರ ಕತೆ ಬಿಡಿ. ಎಡಬಲದ ಪರಿವೆಯಿರುವ ವಿಚಾರವಾದಿ ಮುಸ್ಲಿಮರಾದರೂ ತಮ್ಮ ಮಕ್ಕಳಿಗೆ ಆ ಹೆಸರಿಡಬಹುದಲ್ಲವೆ? ಯಾವುದೋ ಸ್ಟಾಲಿನ್, ಲೆನಿನ್, ಮಾವೋ ಅಂತೆಲ್ಲಾ ಎಡಬಿಡಂಗಿ ಹೆಸರಿಡುವ, ಹೆಸರಿಟ್ಟುಕೊಳ್ಳುವ ಸಿದ್ಧಾಂತ ಶಿಖಾಮಣಿಗಳಿಗೆ ‘ಟಿಪ್ಪು’ ಎಂಬ ಹೆಸರಿನ ಮೇಲೆ ಯಾಕೆ ಮೋಹವಿಲ್ಲ?
ಇಲ್ಲಿ, ಇನ್ನೊಂದು ವಿಚಾರ ಬರುತ್ತದೆ. ಅದಕ್ಕೊಂದು ಕುತೂಹಲಕಾರಿ ಸಾಮ್ಯತೆಯೂ ಇದೆ. ಎರಡನೇ ಮಹಾಯುದ್ದ 1945 ರಲ್ಲೆ ಮುಗಿದು ಹೋಯಿತು.ಇಷ್ಟು ವರ್ಷಗಳಾದರೂ ನಿಮಗೆ ಹಿಟ್ಲರ್ ಮತ್ತು ಮುಸ್ಸೊಲಿನಿ ಇತ್ಯಾದಿ ಹೆಸರಿನವರು ಕಾಣಿಸುವುದಿಲ್ಲ! ಹಾಗೆ ಕರ್ನಾಟಕ ಕೇರಳದಲ್ಲಿ ನಿಮ್ಮ ಟಿಪ್ಪುಸುಲ್ತಾನ್ ಅನ್ನೋ ಹೆಸರು ಕಾಣಿಸುವುದಿಲ್ಲಾ. ಆಂದ ಹಾಗೆ ಅದಕ್ಕೆ ಇನ್ನೊಂದು ಕಾರಣವೂ ಇದೆ. ಈ ‘ಟಿಪ್ಪು’ ಎಂಬ ಹೆಸರು ಮುಸ್ಲಿಂ ಹೆಸರು ಅಲ್ಲವೇ ಅಲ್ಲಾ, ಉರ್ದು, ಅರಬ್ಬಿ, ಹಿಂದೀ, ದಖ್ಖನೀ ಹೀಗೆ ಯಾವ ಭಾಷೆಯಲ್ಲೂ ಈ ಪದಕ್ಕೆ ಯಾವ ಆರ್ಥವೂ ಇಲ್ಲ! ಇದ್ದದ್ದರಲ್ಲಿ ಮಲಯಾ ಭಾಷೆಯಲ್ಲಿ ಟಿಪ್ಪು ಅಂದರೆ ಮೋಸ ಅಂತ ಅರ್ಥ ಇದೆ. ಹಾಗಾದರೆ ಟಿಪ್ಪುಗ್ಯಾಕೆ ಈ ಹೆಸರು ಬಂತು?
ಇದಕ್ಕೊಂದು ಕಥೆಯಿದೆ. ಮೈಸೂರು ಸೈನ್ಯದ ಸಾಮಾನ್ಯ ಸೈನಿಕನಾಗಿದ್ದ ಹೈದರಾಲಿ ನಂತರ ಒಂದು ತುಕಡಿಗೆ ಸರದಾರನಾದ. ಆಗ ಆತನ ಸೈನ್ಯದಲ್ಲಿದ್ದದು ವಾಲ್ಮೀಕಿ ಜನಾಂಗದ ಬೇಡ-ಯೋಧರು. ಹೈದರಾಲಿಯ ಎಲ್ಲಾ ಯಶಸ್ಸುಗಳಲ್ಲೂ ಈ ಬೇಡ-ಯೋದರದ್ದೇ ಕಾಣಿಕೆ ಇತ್ತು. ಹೈದರಾಲಿಗೆ ಮಕ್ಕಳಾಗದೇ ಇದ್ದಾಗ ಆತನ ಸೈನ್ಯದ ಬೇಡ-ಸೈನಿಕರು ತಾವು ಬಹುವಾಗಿ ನಂಬುವ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿಯ ಬಳಿ ಹರಕೆ ಕಟ್ಟಿಕೊಳ್ಳಲು ಕೇಳಿಕೊಂಡರಂತೆ. ಆದರಂತೆ ಹೈದರ ಹರಕೆ ಮಾಡಿಕೊಂಡ ಮೇಲೆ ಗಂಡು ಮಗುವಾಯಿತಂತೆ. ಹಾಗಾಗಿ ಹೈದರಾಲಿ ಮಗನಿಗೆ ಟಿಪ್ಪು ಎಂಬ ಅಡ್ಡ ಹೆಸರಿಟ್ಟ ಅಂತ ಪ್ರಚಲಿತ ಕಥೆಯೊಂದಿದೆ.
ಅಂದಹಾಗೆ, ಹೈದರಾಲಿಯ ಪ್ರಥಮ ಗೆಲುವುಗಳಲ್ಲಿ ವಾಲ್ಮೀಕಿ ನಾಯಕ-ಬೇಡರ ಬಹುವಾದ ಕೊಡುಗೆಯಿದೆ.ನಂತರ ಮೈಸೂರಿನ ಸೈನ್ಯದಲ್ಲಿ ಉಚ್ಛ್ರಾಯ ಸ್ಥಿತಿಗೇರಲೂ ಬೇಡ-ನಾಯಕ ಸೈನಿಕರ ಕೊಡುಗೆ ಅಪಾರ. ಆದರೆ ಹೈದರಾಲಿ ನಂತರ ಬೆಳೆದು ಮೈಸೂರು ರಾಜ್ಯವನ್ನೇ ಆಪೋಶನ ತೆಗೆದುಕೊಳ್ಳುವ ಹೊತ್ತಿನಲ್ಲೂ ಹೈದರಾಲಿಗೆ ಬೇಡಯೋಧರು ನಿಷ್ಠರಾಗಿದ್ದರು. ಆದರೆ ಅಧಿಕಾರದ ರುಚಿ ಹತ್ತಿಸಿಕೊಂಡ ಹೈದರಾಲಿ ನಂತರದ ದಿನಗಳಲ್ಲಿ ವಾಲ್ಮೀಕಿ-ಬೇಡ ಪಾಳೇಗಾರರಿಗೇ ತಲೆನೋವಾದ. ಹಲವರು ಪಾಳೇಪಟ್ಟುಗಳನ್ನು ಕೊಳ್ಳೆಹೊಡೆದು ಹೈದರ ಚಿತ್ರದುರ್ಗಕ್ಕೆ ಎರಡೆರಡು ಬಾರಿ ಮುತ್ತಿಗೆ ಹಾಕಿದರೂ ಗೆಲ್ಲಲಾಗಲಿಲ್ಲ. ಮೂರನೇ ಬಾರಿಗೆ ಮುತ್ತಿಗೆ ಹಾಕಿ ಮೋಸದಿಂದ ಯುದ್ಧಗೆದ್ದ. ಮದಕರಿನಾಯಕನ ಮೇಲೆ ಹೈದರಾಲಿಗೆ ಅಪಾರ ದ್ವೇಷವಿತ್ತು. ಮದಕರಿನಾಯಕನ ಕೋಟೆಯೊಳಗಿನ ಸೈನ್ಯದಲ್ಲಿ ಮೂರುಸಾವಿರ ಮುಸ್ಲಿಂಯೋಧರಿದ್ದರು. ಕೋಟೆಯಳಗಿದ್ದ ಓರ್ವ ಮುಸ್ಲಿಂ ಫಕೀರನ ಮೂಲಕ ಇವರನ್ನು ಹೈದರ ಸಂಪರ್ಕಿಸಿದ. ಆ ಮುಸ್ಲಿಂ ಯೋಧರ ಗುಂಪು ಕೋಟೆಯೊಳಗಿಂದಲೇ ವಿಶ್ವಾಸದ್ರೋಹವೆಸಗಿತು. ಹಾಗಾಗಿ ಮದಕರಿನಾಯಕ ಯುದ್ದದಲ್ಲಿ ಸೋತ.
ಹೈದರಾಲಿಗೆ ಕರುಣೆ ಎನ್ನುವುದೇ ಇರಲಿಲ್ಲ. ಕೋಟೆ ವಶವಾದ ಮೇಲೆ ಮದಕರಿನಾಯಕನ ಕುಟುಂಬ, ಸಂಭಂಧಿಕರು, ಸೈನಿಕರು, ಅವರ ಹೆಂಡತಿಮಕ್ಕಳು ಎಲ್ಲರನ್ನು ಹೈದರ ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಬಂಧನದಲಿಟ್ಟ. ಬಂಧಿಸಲ್ಪಟ್ಟ ಹುಡುಗಿಯರನ್ನೆಲ್ಲಾ ತನ್ನಸೈನ್ಯದ ಮುಸ್ಲಿಂ ಸೈನಿಕರಿಗೆ ಮದುವೆ ಮಾಡಿಸಿ ಮತಾಂತರ ಮಾಡಿದ. ಯುವಕರನ್ನೆಲ್ಲಾ ಮತಾಂತರಗೊಳಿಸಿ ಅವರದ್ದೇ ಒಂದು ಸೈನ್ಯ ರಚಿಸಿದ. ಅದಕ್ಕೆ “ಚೇಲಾ ಬೆಟಾಲಿಯನ್” ಅಂತ ಹೆಸರಿಟ್ಟು ಟಿಪ್ಪುಸುಲ್ತಾನನ ಕೈಗೆ ಕೊಟ್ಟ.
ತನ್ನೊಂದಿಗೆ ಪ್ರಾರಂಭದಿಂದಲೂ ಜೊತೆಯಾಗಿದ್ದ ವಾಲ್ಮೀಕಿ-ಬೇಡ ಜನಾಂಗದವರ ಬಗ್ಗೆ ಹೈದರಾಲಿಗೆ ಯಾವುದೇ ಪ್ರೀತಿ ವಿಶ್ವಾಸವೂ ಇರಲಿಲ್ಲ. ವಿಶ್ವಾಸದ್ರೋಹವೆಸಗಿದ ಹೈದರಾಲಿ ‘ಚೇಲಾ ಬೆಟಾಲಿಯನ್’ ಮಾಡಿದ. ಮುಂದೆ ಇದಕ್ಕೆ ಕೇರಳ, ಮಂಗಳೂರು, ಕೊಡಗು, ತಮಿಳುನಾಡುಗಳಿಂದಲೂ ಯುದ್ಧಖೈದಿಗಳನ್ನು ತಂದು ಅವರನ್ನು ಮತಾಂತರಗೊಳಿಸಿ ಈ ತುಕಡಿಗೆ ಸೇರಿಸಿಕೊಂಡ. ನಂತರ ಟಿಪ್ಪು ಕೂಡಾ ಇದನ್ನೆ ಮುಂದುವರಿಸಿದ. ಹೊಸದಾಗಿ ಇಸ್ಲಾಂಗೆ ಮತಾಂತರವಾದ ಸೈನಿಕರಿಂದಲೇ ಈ ಸೈನ್ಯಕಟ್ಟಿ ಇದಕ್ಕೆ ‘ಅಹ್ಮದೀ ಸೈನ್ಯ’ ಅಂತ ಹೆಸರಿಟ್ಟ! ಈ ಅಂಶವನ್ನು ಬ್ರಿಟಿಷ್ ಆಧಿಕಾರಿ ಲೆವಿನ್ ಲೆಥಾಮ್ ಬೌರಿಂಗ್ ಬರೆದ – “ಹೈದರಾಲಿ ಅಂಡ್ ಟಿಪ್ಪು ಸುಲ್ತಾನ್ ಅಂಡ್ ದ ಸ್ಟ್ರಗಲ್ ವಿದ್ ಮುಸಲ್ಮಾನ್ ಪವರ್ ಆಫ್ ಇಂಡಿಯಾ” ಪುಸ್ತಕದಲ್ಲಿ ದಾಖಲಿಸಿದ್ದಾನೆ.
ಇವತ್ತು ಸಿದ್ರಾಮಣ್ಣ ಅಹಿಂದ, ಅಹಿಂದ… ಅಂತ ಜಪಿಸುತ್ತಾ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲೇ ‘ಟಿಪ್ಪುಜಯಂತಿ’ ಅಂತ ಹಬ್ಬ ಮಾಡ ಹೊರಟಾಗ ಅವರ ಕಾಂಗ್ರೆಸಿನಲ್ಲೇ ಅನೇಕ ವಾಲ್ಮೀಕಿ ನಾಯಕರಿಗೆ ಒಳಗೊಳಗೇ ಕರುಳು ಚುರ್ ಎನ್ನುವಂತಹಾ ಭಾವ. ತಾವು ಮಹಾ ವೀರನೆಂದು ಆರಾಧಿಸುವ ಮದಕರಿನಾಯಕ ಹೈದರ ಮತ್ತು ಟಿಪ್ಪುವಿನ ದೌರ್ಜನ್ಯಕ್ಕೆ ಗುರಿಯಾಗಿ ಶ್ರೀರಂಗಪಟ್ಟಣದಲ್ಲಿ ಹೆಸರಿಲ್ಲದಂತೆ ಘೋರ ಸಾವು ಕಂಡ ಅಂತ ಇತಿಹಾಸದ ಸತ್ಯವನ್ನು ಹೇಳಲಿಕ್ಕೂ ಆಗದೆ, ಟಿಪ್ಪುಜಯಂತಿಯಂಥಾ ಪರಮ ಅಸಹ್ಯವನ್ನು ಅರಗಿಸಿಕೊಳ್ಳಲಿಕ್ಕೂ ಆಗದೆ ಪರಿತಪಿಸುತ್ತಿದ್ದಾರೆ. ಅವರೆಲ್ಲಾ ಸುಮ್ಮನೆ ಬಾಯಿ ಮಾತಿಗೆ
ಸಿದ್ರಾಮಣ್ಣ ‘ಅಹಿಂದಾ’ ಅಂತ ಅಂದಾಗಲೆಲ್ಲಾ ಧ್ವನಿಗೂಡಿಸುತ್ತಾರಾದರೂ, ಸಿದ್ರಾಮಣ್ಣ ‘ಹಿಂದ’ ವನ್ನು ಹಿಂದೆಬಿಟ್ಟು ‘ಅ’ ಒಂದನ್ನೆ ಹಿಡಿದು ನೇತಾಡುತ್ತಿರುವುದನ್ನು ಬಾಯಿಮುಚ್ಚಿಕೊಂಡು ಸಹಿಸುತ್ತಿದ್ದಾರೆ.
ಮಂಡ್ಯದ ಮೇಲುಕೋಟೆ ಭಾಗದ ಅಯ್ಯಂಗಾರ್ ಕುಟುಂಬಗಳಂತು ಕಳೆದ ಇನ್ನೂರು ವರ್ಷಗಳಿಂದ ದೀಪಾವಳಿಯನ್ನೇ ಆಚರಿಸುತ್ತಿಲ್ಲ. ಯಾಕೆಂದರೆ ಅವರಿಗೂ ಅಂದು ಕರಾಳ ದಿನ. ತಿರುಮಲ ಅಯ್ಯಂಗಾರ್ ಎಂಬಾತನೊಬ್ಬ ಮೈಸೂರಿನ ಒಡೆಯರ ಅರಸು ಮನೆತನದೊಂದಿಗೆ ಸೇರಿಕೊಂಡು ಟಿಪ್ಪುಸುಲ್ತಾನನನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರ ಹೂಡಿದ್ದಾನೆ ಎಂಬ ಒಂದು ಸುದ್ದಿಯನ್ನೇ ನಂಬಿದ ಟಿಪ್ಪು ನರಕ-ಚತುರ್ದಶಿಯಂದೇ ಏಳುನೂರು ಜನ ಅಯ್ಯಂಗಾರ್ ಗಂಡಸರ ತಲೆ ಕತ್ತರಿಸಿದ್ದ. ಇದರಿಂದಾಗಿ ಆ ಕುಟುಂಬಗಳಿಗೆ ದೀಪಾವಳಿಯೆಂದರೆ ಈ ಇನ್ನೂರು ಚಿಲ್ಲರೆ ವರ್ಷಗಳ ಬಳಿಕವೂ ಸೂತಕವೇ.
ಇನ್ನು ಮಂಗಳೂರಿನ ಕ್ರಿಶ್ಚಿಯನರ ಕತೆಯಂತೂ ಇನ್ನೂ ಘೋರ. ಇದು ಆದದ್ದು 1781-84 ಮಧ್ಯೆ ನಡೆದ ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಂದರ್ಭ. ಮಂಗಳೂರಿನಲ್ಲಿದ್ದ ಬ್ರಿಟಿಷರಿಗೆ ಅಲ್ಲಿನ ಕ್ರಿಶ್ಚಿಯನ್ನರು ಸಹಾಯಮಾಡಿದ್ದರೆಂಬುದೇ ಟಿಪ್ಪುವಿನ ಕೋಪಕ್ಕೆ ಕಾರಣವಾಯಿತು. 1784 ರಂದು ಟಿಪ್ಪು ಪ್ರತಿ ತಾಲೂಕು ಆಧಿಕಾರಿಗಳಿಗೂ ಪತ್ರ ಬರೆದು ಕ್ರಿಶ್ಚಿಯನ್ನರ ಜನಸಂಖ್ಯೆ ಹಾಗು ಮನೆ ಗುರುತಿಸುವಂತೆ ಆಜ್ಞೆಮಾಡಿದ.
1784 ಫೆಬ್ರವರಿ 24 ರಂದು ಕ್ರೈಸ್ತರ ಹಬ್ಬ “ಆಶ್ ವೆಡ್ನೆಸ್ಟ್ ಡೇ” ಯಂದು ಒಂದು ರಹಸ್ಯ ಯೋಜನೆಯನ್ವಯ ಸುಮಾರು ಎಂಬತ್ತು ಸಾವಿರ ಕ್ರಿಶ್ಚಿಯನ್ನರನ್ನು ಬಂಧಿಸಿದ. ಆಷ್ಟೂ ಜನರ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡು ಕೊಳ್ಳೆಹೊಡೆದ. ನಂತರ ಒಟ್ಟು ಇಪ್ಪತ್ತೇಳು ಚರ್ಚಗಳನ್ನು ಧ್ವಂಸಮಾಡಿಸಿ ಮಂಗಳೂರಿನ ಈದ್ಗಾ ಮಸೀದಿಯನ್ನು ಮಂಗಳೂರಿನ ಮಿಲಾಗ್ರಿಸ್ ಚರ್ಚನ್ನುರುಳಿಸಿದ ಕಲ್ಲುಗಳಿಂದಲೇ ಕಟ್ಟಿಸಿದ. ಮಂಗಳೂರಿನ ಲೇಡಿ ಆಫ್ ರೋಸರಿ, ಅವರ್ ಲೇಡಿ ಆಪ್ ಮಿರಾಕಲ್, ವಾಮಂಜೂರಿನ ಹೋಲಿ ಫ್ಯಾಮಿಲಿ, ಪೇಝೂರ್ನ ಸೈಂಟ್ ಜೋಸೆಫ್, ಬಂಟವಾಳದ ಇನ್ಫ್ಸಾಂಟ್ ಜೀಸಸ್, ಕಾರ್ಕಳದ ಸೈಂಟ್ ಲಾರೆನ್ಸ್ ಹೀಗೆ ಮಹತ್ವದ ಚರ್ಚ್ಗಳನೆಲ್ಲಾ ಧ್ವಂಸ ಮಾಡಿದ ಟಿಪ್ಪು, ಬಂಧಿತರನ್ನೆಲ್ಲಾ ಹೆಂಗಸರು ಮಕ್ಕಳೆನ್ನದೆ ಕಾಲ್ನಡಿಗೆಯಲ್ಲೆ ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೊರಟ.
ಇವತ್ತಿಗೂ ಮಂಗಳೂರು ಮಾರಿಪಳ್ಳದ ಬಳಿ ನೆತ್ತರಕೆರೆ ಎಂಬ ಊರಿದೆ. ಅಲ್ಲಿ ಬಂಧಿತ ಕ್ರಿಶ್ಚಿಯನ್ ಹೆಂಗಸರ ಮೇಲೆ ಟಿಪ್ಪು ಸೈನಿಕರು ಕೈಮಾಡಿದಾಗ ಗಂಡಸರು ಪ್ರತಿಭಟಿಸಿದ್ದರು ಆಗ ನಡೆದ ಮಾರಣ ಹೋಮದಲ್ಲಿ ರಾಶಿ-ರಾಶಿ ಹೆಣಗಳುರುಳಿ ರಕ್ತದ ಒಂದು ಕೆರೆಯೇ ನಿರ್ಮಾಣವಾಗಿತ್ತು. ದಾರಿ ಮದ್ಯೆ ಹಲವಾರು ಸಾವಿರ ಜನ ಪ್ರಾಣ ತೆತ್ತರು. ಶ್ರೀರಂಗಪಟ್ಟಣಕ್ಕೆ ಬಂದು ತಲುಪಿದವರನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಮಾಡುವ ಕೆಲಸ ಶುರುವಾಯಿತು.
1787 ರ ಹೊತ್ತಿಗೆ ಬಂಧಿತರಾದವರಲ್ಲಿ ಅರ್ಧದಷ್ಟು ಜನ ಆಸುನೀಗಿದ್ದರು. ಯಾವಾಗ ಬ್ರಿಟಿಷರು 1799ರಲ್ಲಿ ಟಿಪ್ಪುವನ್ನು ಸೋಲಿಸಿದಾಗಲೇ ಅವರಿಗೆಲ್ಲಾ ಬಿಡುಗಡೆಯ ಭಾಗ್ಯ ದೊರಕಿದ್ದು. ಹದಿನೈದು ವರ್ಷಗಳ ಭೀಕರ ಸೆರೆವಾಸದ ನಂತರ ಎಂಬತ್ತು ಸಾವಿರ ಜನರಲ್ಲಿ ಉಳಿದುಕೊಂಡವರು ಕೇವಲ ಇಪ್ಪತ್ತು ಸಾವಿರದಷ್ಷು ಮಾತ್ರ. ಅವರಲ್ಲಿ ಹತ್ತು ಹದಿನೈದು ಸಾವಿರ ಮಂದಿ ಮಂಗಳೂರಿಗೆ ಮರಳಿದರು.
ಮಂಗಳೂರಿನ ಅಷ್ಟು ಕ್ರಿಶ್ಚಿಯನ್ ಕುಟುಂಬಗಳವರಿಗೆ ಇದೆಲ್ಲಾ ನೆನ್ನೆ-ಮೊನ್ನೆ ನಡೆದ ಘಟನೆಗಳೇನೋ ಎಂಬಂತಿದೆ. ಅವರ್ಯಾರೂ ಆ ನೋವನ್ನು ಮರೆತ್ತಿಲ್ಲಾ. ಆದರೇನು ಮಾಡೋದು ತಾವೇ ಮನಸಾರೆ ಆರಿಸಿ ಕಳಿಸಿದ ಸಿದ್ರಾಮಣ್ಣನೀಗ ಟಿಪ್ಪುವಿನ ನಾಮಜಪ ಮಾಡುತ್ತಿದ್ದಾರೆ. ಪಾಪ ಅವರೆಲ್ಲಾ ಗಟ್ಟಿದನಿಯಲ್ಲಿ ಅರಚಿಹೇಳಿದರು ದಪ್ಪಚರ್ಮದ ಅವರ ಮುಖಂಡರು ನಿದ್ದೆ ಬಂದ ಹಾಗೆ ನಟಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ತೂಕದ ನಾಯಕರನ್ನು ಪಡೆದ ಖುಷಿಯಲ್ಲಿರುವ ಕರಾವಳಿ ಭಾಗದ ಕ್ರಿಶ್ಚಿಯನ್ ನಾಯಕರು ಇವತ್ತು ಸಿದ್ರಾಮಣ್ಣನ ಆಟಗಳನೆಲ್ಲಾ ನೋಡುತ್ತಾ ತಣ್ಣಗೆ ಕೂತು ಬಿಟ್ಟಿದ್ದಾರೆ. ಕ್ರಿಶ್ಚಿಯನ್ ಸಮುದಾಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದವರೆ ಆದ ಜನಪ್ರತಿನಿಧಿಗಳು ಕಳೆದ ಬಾರಿಯ ಟಿಪ್ಪುಜಯಂತಿಯ ಸಂದರ್ಭದಲ್ಲೆ ನಾಲಿಗೆ ಸತ್ತು ಧ್ವನಿ ಕಳೆದುಕೊಂಡಿದ್ದಾರೆ. ಹಾಗಾಗಿ ಕರಾವಳಿ ಕ್ರಿಶ್ಚಿಯನ್ನರು ಈಗ ಮತ್ತೊಮ್ಮೆ 1784ರ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಪ್ರತಿಪಕ್ಷ ‘ಬಿಜಿಪಿ’ ಟಿಪ್ಪು ಜಯಂತಿ ವಿರುದ್ದ ಕೂಗೆಬ್ಬಿಸುತ್ತಿದ್ದರೂ, ಆ ಕೂಗಿಗೆ ದನಿಗೂಡಿಸುವ ಶಕ್ತಿಯಾಗಲಿ, ಧೈರ್ಯವಾಗಲಿ ಅಲ್ಲಿನ ಕ್ರಿಶ್ಚಿಯನ್ನರಲ್ಲಿ ಉಳಿದಿಲ್ಲ.
ಇನ್ನು ನಮ್ಮ ರಾಜ್ಯದ ಮುಸ್ಲಿಮರು…
ಕಳೆದ ಇನ್ನೂರು ಚಿಲ್ಲರೆ ವರ್ಷಗಳಲ್ಲಿ ‘ಟಿಪ್ಪು’ ಅಂತ ಹೆಸರಿಟ್ಟುಕೊಂಡ ಇಪ್ಪತ್ತು ಜನ ಮುಸ್ಲಿಮರೂ ಈ ರಾಜ್ಯದಲ್ಲಿ ಇರಲಿಕ್ಕಿಲ್ಲ. ಆದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೇರಿ ಬೀದಿಯೊಂದರಲ್ಲೇ ‘ಟಿಪ್ಪು’ ಹೆಸರಿನ ನಾಯಿಗಳಿವೆ! ಆದರೆ ಆಶ್ಚರ್ಯ ಹುಟ್ಟಿಸುವ ವಿಷಯವೆಂದರೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದ ಮೇಲೂ ರಾಜ್ಯದ ಒಬ್ಬೇ ಒಬ್ಬ ಮುಸ್ಲಿಂ ಮುಖಂಡನಾಗಲೀ, ಪ್ರಜೆಯಾಗಲೀ ತಾವೇ ಮುಂದಾಗಿ ನಿಂತು ‘ಟಿಪ್ಪುಜಯಂತಿ ಮಾಡಿ’ ಅಂತ ಸರಕಾರಗಳ ಮುಂದೆ ಅಂಗಲಾಚಿಲ್ಲ.
ಅಂದ ಹಾಗೆ ನೈಜ ಮುಸಲ್ಮಾನರಿಗೆ ಹಾಗೆ ಮಾಡಲು ಸಾಧ್ಯವೂ ಇಲ್ಲ. ಅದರಲ್ಲು ಈಗ ವಹಾಬಿ- ಸಲಾಫಿ ಎಂಬ ಭಯಂಕರ “ಪ್ಯೂರ್ ಇಸ್ಲಾಮಿ”ಗಂತೂ ಈ ಥರದ ಜಯಂತಿ ಆಚರಣೆಗಳೂ ತುಂಬ ನಿಷಿದ್ಧ. ಈ ರೀತಿಯ ‘ಕಟ್ಟರ್ ಇಸ್ಲಾಂ’ ಹೇಗಿದೆಯೆಂದರೆ “ಮೌಲೀದ್-ಅಲ್-ನಬಿ” ಅಂತ ಹೆಸರಿರುವ ಪ್ರವಾದಿ (ಸ.ಅ.) ರವರ ಹುಟ್ಟುಹಬ್ಬದ ಆಚರಣೆಗೂ ಅವಕಾಶ ನೀಡಬಾರದು ಅಂತ ವಾದಿಸುವವರಿದ್ದಾರೆ. ಸಲಾಫಿಗಳಂತೂ ಪ್ರವಾದಿ (ಸ.ಅ.) ರವರ ಸಮಕಾಲೀನ ಮತ್ತು ನಂತರದ ಮೂರು ತಲೆಮಾರು ಆಥವಾ ಮುನ್ನೂರು ವರ್ಷಗಳವರೆಗೆ ಇಸ್ಲಾಂ ಅಷ್ಟೇ ಪವಿತ್ರವಾದದ್ದು ಅಂತ ಭಾವಿಸುವವರು. ಅವರಿಗೆಲ್ಲಾ ಈ ರೀತಿ ಆಚರಣೆಗಳು ಪರಮ ನಿಷಿದ್ದ ಸಂಗತಿ. ಯಾಕೆಂದರೆ ಮುಸ್ಲಿಮರು ಅಪಾರವಾಗಿ ಗೌರವಿಸುವ ಅಲ್-ಬುಖಾರಿ, ಮುಸ್ಲಿಮ್, ಅಲ್ ನಿಶಾದಂತಹ ಹದೀಸ್ ಗಳಲ್ಲಿ ಈ ರೀತಿ ಆಚರಣೆಗಳನ್ನು ಕೈಗೊಳ್ಳಬಾರದು ಅಂತ ಹೇಳಲಾಗಿದೆ ಎಂದು ಅನೇಕ ಮುಸ್ಲಿಂ ಮೌಲ್ವಿಗಳ ವಾದ. ಹೀಗಾಗಿ ಪರಮದಯಾಳುವಾದ ‘ಅಲ್ಲಾಹು’ ವನ್ನು ಹೊರತುಪಡಿಸಿ ಬೇರೆ ಯಾವುದನ್ನು, ಬೇರೆ ಯಾರನ್ನು ಹೊಗಳಬಾರದು ಎಂಬುದು ಇಸ್ಲಾಂ ಧರ್ಮದ ಲಿಖಿತ ನಿಯಮ. ಹಾಗಾಗಿ ನಮ್ಮ ರಾಜ್ಯದ ಮುಸ್ಲಿಮರು ‘ಟಿಪ್ಪುಜಯಂತಿ’ ಹೆಸರಲ್ಲಿ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಮುಂದುವರಿಸಿದರೆ ಅದು ಧರ್ಮಬಾಹಿರವಾದ ನಡವಳಿಕೆಯಾಗುತ್ತದೆ ಅಂತ ಗಟ್ಟಿದನಿಯಲ್ಲಿ ಹೇಳಬೇಕು. ಆಗ ‘ಅ’ ಎಂಬುದನ್ನು ಹಿಡಿದು ಹಲ್ಲುಕಿಸಿಯುವ ‘ಅಹಿಂದ’ ಮುಖ್ಯಮಂತ್ರಿಗಳ ಆಟ ನಡೆಯುವುದಿಲ್ಲ. ಸುಮ್ಮನೆ ಹಠಕ್ಕೆ ಬಿದ್ದು ರಾಜ್ಯದ ಸಾಮರಸ್ಯ ಕದಡುವ ಕೆಲಸಕ್ಕೆ “ಅಲ್ಪಸಂಖ್ಯಾತ”ರ ಹೆಸರುಕೊಟ್ಟು ‘ಕೈ’ ಹಾಕಬಾರದು ಎಂಬುದನ್ನು ಇವತ್ತು ಮುಸ್ಲಿಂ ಸಮುದಾಯವೇ ಒಕ್ಕೊರಲಿನಿಂದ ರಾಜ್ಯದ ಮುಖ್ಯಮಂತ್ರಿಗೆ ಹೇಳಿದರೆ ಚೆನ್ನ.
‘ಸಲಾಫಿ’ ಯೆಂಬ ಇಸ್ಲಾಂ ಅನ್ನು ಬಹುವಾಗಿ ಗೌರವಿಸುವ ‘ಪಿಎಫ್ಐ’ ಯಂಥಾ ಸಂಘಟನೆ ಈ ಟಿಪ್ಪು ಜಯಂತಿಯನ್ನು ಬೆಂಬಲಿಸಿದರೆ ಅದೂ ಒಂದು ರೀತಿಯಲ್ಲಿ ” ಶಿರ್ಕ್” ಆಗುವುದಿಲ್ಲವೇ? ಹಾಗಾಗಿ ಈ ವಿಷಯಕ್ಕೆ ಸಂಬಂಧಪಟ್ಟ ಇತರರೆಲ್ಲರೂ ಒಮ್ಮೆ ಸಾವಕಾಶವಾಗಿ ಆತ್ಮಶೋಧನೆ ಮಾಡಿಕೊಂಡರೆ ಈ ಸರ್ಕಾರದ ಈ ಮುಖ್ಯಮಂತ್ರಿಯ “ಅಹಿಂದ” ದೊಂಬರಾಟಕ್ಕೊಂದು ಕೊನೆ ಹಾಡಬಹುದು.
ಆದುದರಿಂದ ಈ ‘ಟಿಪ್ಪು ಜಯಂತಿ’ ಎಂಬ ಆಟವನ್ನು ಕಟ್ಟಾಮುಸ್ಲಿಮರೇ ಮುಂದೆ ನಿಂತು ವಿರೋಧಿಸಬೇಕು. ಅಂದಹಾಗೆ ಬಾಯಿಬಿಟ್ಟು ಹೇಳದಿದ್ದರು ಸಿದ್ರಾಮಯ್ಯನವರ ಮಂತ್ರಿಮಂಡಲದಲ್ಲೆ ಟಿಪ್ಪು ಜಯಂತಿ ಬಗ್ಗೆ ತೀವ್ರ ವಿರೋಧವಿದೆ.
Leave A Reply