ದೇಶದ ಎಡಬಿಡಂಗಿಗಳೇ ಕೇಳಿ, ಟ್ರಂಪ್ ಮೋದಿ ಕುರಿತು ಏನು ಹೇಳಿದ್ದಾರೆ ಕೇಳಿ…
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ವಿಶ್ವವೇ ಹಾಡಿ ಹೊಗಳುತ್ತಿದ್ದರೆ ಭಾರತದಲ್ಲಿ ಮಾತ್ರ ದೆಹಲಿಯಲ್ಲಿ ವಾಯುಮಾಲಿನ್ಯವಾದರೂ ಮೋದಿ ಅವರನ್ನೇ ಟೀಕಿಸುವ ಕೆಲವು ಕುತ್ಸಿತ ಮನಸ್ಸುಗಳಿವೆ. ಸುಖಾಸುಮ್ಮನೇ ಪ್ರಧಾನಿಯವರನ್ನು ಟೀಕಿಸಿ ಸಮಾಧಾನಪಟ್ಟುಕೊಳ್ಳುತ್ತವೆ.
ಆದರೆ ವಿಶ್ವದ ದೊಡ್ಡಣ್ಣ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರನ್ನು ಹೊಗಳಿದ್ದು, ಭಾರತದ ಎಡಬಿಡಂಗಿಗಳು ಇದನ್ನು ಕೇಳಿದರೆ ಎಷ್ಟು ಹೊಟ್ಟೆ ಉರಿದುಕೊಳ್ಳುತ್ತಾರೋ ಏನೋ?
ಹೌದು, ವಿಯೇಟ್ನಾಂನಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಮೋದಿ ಅವರ ಕಾರ್ಯವೈಖರಿಯನ್ನು ಹೊಗಳಿದ್ದು, ಮೋದಿ ಅವರು ಬಹುದೊಡ್ಡ ರಾಷ್ಟ್ರವನ್ನು ಹಾಗೂ ಅಲ್ಲಿನ ಜನರನ್ನು ಅಭ್ಯುದಯದತ್ತ ಕೊಂಡೊಯ್ಯಲು ಕಾರ್ಯಪ್ರವೃತ್ತರಾಗಿದ್ದಾರೆ ಎಂದಿದ್ದಾರೆ.
ಭಾರತ 70ನೇ ಸ್ವಾತಂತ್ರ್ಯ ದಿನ ಆಚರಿಸಿದೆ. 100 ಕೋಟಿಗೂ ಅಧಿಕ ಜನರಿದ್ದರೂ ಆರ್ಥಿಕ ವಲಯದಲ್ಲಿ ಉತ್ತಮ ಏಳಿಗೆಯತ್ತ ದಾಪುಗಾಲು ಇಡುತ್ತಿದೆ. ನಿಜಕ್ಕೂ ಭಾರತ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave A Reply