ಆಡಳಿತದಲ್ಲಿ ಉರ್ದು ದ್ವಿತೀಯ ಭಾಷೆ ಮಾಡಿ ಮುಸ್ಲಿಂ ಪ್ರೇಮ ಮುಂದುವರಿಸಿದ ತೆಲಂಗಾಣ ಸಿಎಂ ಕೆಸಿಆರ್
ಹೈದರಾಬಾದ್: ತೆಲಂಗಾಣದ ಆಡಳಿತದಲ್ಲಿ ಉರ್ದುವನ್ನು ದ್ವೀತಿಯ ಭಾಷೆಯನ್ನಾಗಿ ಮಾಡುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಮತ್ತೊಮ್ಮೆ ಮುಸ್ಲಿಂ ಪ್ರೇಮ ಮುಂದುವರಿಸಿದ್ದಾರೆ.
ರಾಜ್ಯದ ಎಲ್ಲ ಅಧಿಕಾರಿಗಳು, ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳೂ ಕೂಡ ಉರ್ದು ಭಾಷೆಯಲ್ಲಿ ಸಂವಹನ ನಡೆಸಬೇಕು ಮತ್ತು ಆಡಳಿತವನ್ನು ಮಾಡಬೇಕು ಎಂದು ಸೂಚಿಸಿದ್ದಾರೆ. ಇದು ಬಹು ದಿನಗಳ ಆಗ್ರಹವಾಗಿತ್ತು ಎಂದು ಹೇಳಿದ್ದಾರೆ.
ಇದು ಒಂದು ಜಿಲ್ಲೆ, ಒಂದು ಪ್ರದೇಶ, ಒಂದು ಹೋಬಳಿಗೆ ಅನ್ವಯಿಸುವುದಿಲ್ಲ. ಇಡೀ ರಾಜ್ಯವೇ ಒಂದು ಘಟಕ. ಆದ್ದರಿಂದ ಇಡೀ ರಾಜ್ಯಾಧ್ಯಂತ ಉರ್ದುವನ್ನು ಆಡಳಿತದಲ್ಲಿ ಎರಡನೇ ಭಾಷೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಬಿಜೆಪಿ ವಕ್ತಾರ ಕೃಷ್ಣ ಸಾಗರ ‘ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಮತಕ್ಕಾಗಿ ಇಂತಹ ನೀತಿ ಜಾರಿಗೆ ತಂದಿದ್ದಾರೆ. ಮುಸ್ಲಿಂರನ್ನು ತುಷ್ಟೀಕರಣ ಮಾಡುವ ಸಿಎಂ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಇದೆ ಕೆಸಿಆರ್ ಮುಸ್ಲಿಂರಿಗಾಗಿ ಪ್ರತ್ಯೇಕ ಐಐಟಿ ಕಾರಿಡಾರ್ ನಿರ್ಮಿಸುವ ವಿಲಕ್ಷಣ ಯೋಜನೆ ಕೈಗೊಂಡಿದ್ದರು. ಈಗ ಮತ್ತದೇ ಮುಸ್ಲಿಂ ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಇದು ಜನರನ್ನು ಒಡೆದು ಆಳುವ ನೀತಿಯಲ್ಲದೇ, ವಿನಾಕಾರಣ ಜನರ ಹಣವನ್ನು ವ್ಯರ್ಥ ಮಾಡುವ ಕೊಳಕು ಪ್ರಯತ್ನ ಎಂದು ಹೇಳಿದ್ದಾರೆ.
ಹಿಂದೆಯೂ ಕೆಸಿಆರ್ ಕೇವಲ ಮುಸ್ಲಿಂರ ಚಾಲಕರಿಗೆ ಆರ್ಥಿಕ ಸಹಾಯ ನೀಡಿ ತಮ್ಮ ಮುಸ್ಲಿಂ ಪ್ರೇಮ ಮೆರೆದಿದ್ದರು. ಅಲ್ಲದೇ ಮೀಸಲಿನಲ್ಲಿ ಶೇ.4 ರಷ್ಟಿದ್ದದನ್ನು ಶೇ.12ರಷ್ಟು ಹೆಚ್ಚಿಸುವ ಮೂಲಕ ಮುಸ್ಲಿಂರನ್ನು ಸೆಳೆಯುವ ಹುಚ್ಚು ಪ್ರಯತ್ನ ಮಾಡಿದ್ದರು. ಇದರಿಂದ ತೆಲಂಗಾಣದಲ್ಲಿ ಪದೇ ಪದೆ ಕೆಸಿಆರ್ ಮುಸ್ಲಿಂರನ್ನು ಒಲೈಸಲು ಹಿಂದೂಗಳನ್ನು ನಿರ್ಲಕ್ಷಿಸುತ್ತಿದ್ದಾರೆ.
Leave A Reply