ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೇ ಸೇರಬೇಕು ಎಂದ ಫಾರೂಕ್ ಅಬ್ದುಲ್ಲಾ
Posted On November 12, 2017

ಶ್ರೀನಗರ: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತೆ ತಮ್ಮ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೇ ಸೇರಬೇಕು ಎಂದಿದ್ದಾರೆ.
ಜಮ್ಮು-ಕಾಶ್ಮೀರ ಹೇಗೆ ಭಾರತದ ಅವಿಭಾಜ್ಯ ಅಂಗವಾಗಿದೆಯೋ, ಹಾಗೆಯೇ ಪಿಒಕೆ ಪಾಕಿಸ್ತಾನದ ಅಂಗವಾಗಿದೆ. ಒಂದು ವೇಳೆ ಸರ್ಕಾರ ಶಾಂತಿ ಬಯಸಿದರೆ, ಮೊದಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಿ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ನೆಲೆಸಲು, ದಶಕಗಳ ವಿವಾದ ಬಗೆಹರಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲೇಬೇಕು. ಕಾಶ್ಮೀರದ ಒಂದು ಭಾಗ ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಹಾಗಾಗಿ ಮಾತುಕತೆ ಹಾಗೂ ಸಹಕಾರದಿಂದ ವರ್ತಿಸಲೇಬೇಕು ಎಂದಿದ್ದಾರೆ.
ಅಲ್ಲ ಕಾಶ್ಮೀರದಲ್ಲಿ ದಶಕಗಳವರೆಗೆ ಆಡಳಿತ ನಡೆಸುತ್ತಿರುವ ಅಬ್ದುಲ್ಲಾ ಕುಟುಂಬ, ಕಾಶ್ಮೀರವನ್ನು ನುಂಗಿ ನೀರು ಕುಡಿದ, ಶಾಂತಿ ಕದಡಿದ ಈ ಕುಟುಂಬ ಪಾಕಿಸ್ತಾನದ ಪರ ಮಾತನಾಡುವುದರಲ್ಲಿ ಅಚ್ಚರಿಯಿಲ್ಲ ಬಿಡಿ. ಆದರೆ ಹೀಗೆ ಉಂಟ ಮನೆಗೆ ಎರಡು ಬಗೆಯುವ ಮನಸ್ಥಿತಿಯನ್ನು ನಾವು ಖಂಡಿಸಲೇಬೇಕು.
- Advertisement -
Leave A Reply