ಅರುಣಾಚಲ ಪ್ರದೇಶ ನಮ್ಮ ಪ್ರದೇಶ, ಯಾರ ಅಭಿಪ್ರಾಯಕ್ಕೂ ಸೊಪ್ಪು ಹಾಕೋಲ್ಲ: ನಿರ್ಮಲಾ ಸೀತಾರಾಮನ್
Posted On November 12, 2017

ಅಹಮದಾಬಾದ್: ಅರುಣಾಚ ಪ್ರದೇಶಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ ಬಳಿಕ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಕ್ಕೆ ಈಗ ನಿರ್ಮಲಾ ಸೀತಾರಾಮನ್ನೇ ಟಾಂಗ್ ನೀಡಿದ್ದು, “ಇದು ನಮ್ಮ ಪ್ರದೇಶ, ಯಾರ ಅಭಿಪ್ರಾಯಕ್ಕೂ ನಾವು ಸೊಪ್ಪು ಹಾಕುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಅರುಣಾಚಲ ಪ್ರದೇಶ ನಮ್ಮ ದೇಶದ ಅಂಗ, ಅಲ್ಲಿಗೆ ಹೋದರೆ ಯಾರಿಗೇನು ತೊಂದರೆ? ನಾವು ಹೋಗೇ ಹೋಗುತ್ತೇವೆ ಎಂದಿದ್ದಾರೆ.
ಕಳೆದ ಶುಕ್ರವಾರ ಮತ್ತು ಶನಿವಾರ ನಿರ್ಮಲಾ ಸೀತಾರಾಮನ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾ, ವಿವಾದಿತ ಪ್ರದೇಶಕ್ಕೆ ಭಾರತೀಯ ಸಚಿವೆ ಭೇಟಿ ನೀಡಿದ್ದು ತರವಲ್ಲ ಎಂಬರ್ಥದಲ್ಲಿ ಮಾತನಾಡಿತ್ತು. ಈಗ ಚೀನಾಗೆ ಖುದ್ದು ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
- Advertisement -
Leave A Reply