ಕಮ್ಯುನಿಸ್ಟ್ ರೌಡಿಗಳಷ್ಟೇ ಅಲ್ಲ, ಐಸಿಸ್ ಬೀಡಾಗುತ್ತಿದೆ ಕೇರಳ
Posted On November 13, 2017

ತಿರುವನಂತಪುರ: ಕೇರಳದಲ್ಲಿ ಸಿಪಿಎಂ ಕಾರ್ಯಕರ್ತರ ಗೂಂಡಾಗಿರಿ ಹೆಚ್ಚಾಗಿರುವ, ಹಿಂದೂಗಳ, ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಹತ್ಯೆ ಬೆನ್ನಲ್ಲೇ ಕೇರಳದಲ್ಲಿ ನೂರಕ್ಕೂ ಅಧಿಕ ಜನ ಐಸಿಸ್ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಸಿಸ್ ಉಗ್ರ ಸಂಘಟನೆ ಸೇರಿ ಮೃತಪಟ್ಟ ತನ್ನ ಗಂಡ ಕುರಿತು ಮಹಿಳೆಯೊಬ್ಬಳು ಸಂಬಂಧಿಗೆ ಕಳುಹಿಸಿದ ಧ್ವನಿ ಸುರುಳಿ ಈಗ ಪೊಲೀಸರ ವಶದಲ್ಲಿದ್ದು, ಹೀಗೆ ವಾಟ್ಸ್ಯಾಪ್ ಸೇರಿ ಹಲವು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾದ 300ಕ್ಕೂ ಅಧಿಕ ಧ್ವನಿ ಸಂದೇಶಗಳನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಎಲ್ಲ ದಾಖಲೆ, ಆಡಿಯೋ ಕ್ಲಿಪ್ ವಶಪಡಿಸಿಕೊಂಡಿರುವ ಪೊಲೀಸರು 100ಕ್ಕೂ ಅಧಿಕ ಜನ ಐಸಿಸ್ ಸೇರಿದ್ದಾರೆ ಎಂದು ಭಯಂಕರ ಸುದ್ಧಿ ತಿಳಿಸಿದ್ದಾರೆ.
ಕಣ್ಣೂರು ಜಿಲ್ಲೆಯಲ್ಲಿ ಐಸಿಸ್ ಜತೆ ಸಂಬಂಧ ಹೊಂದಿರುವ ಆರೋಪದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾಪತ್ತೆಯಾಗಿ ಐಸಿಸ್ ಸೇರಿದ್ದಾರೆ ಎಂಬ ಶಂಕೆಯಿರುವ 21 ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.
- Advertisement -
Trending Now
“ನಾನು ಪಾಳೇಗಾರ ಅಲ್ಲ, ಕ್ಷೇತ್ರದ ಕಾವಲುಗಾರ!“ -ವೇದವ್ಯಾಸ ಕಾಮತ್ ಕಿಡಿ
February 17, 2025
Leave A Reply