ಫಲಿಸಿತು ಇರಾನಿನೊಂದಿಗೆ ಭಾರತ ಮಾಡಿಕೊಂಡ ಒಪ್ಪಂದ, ಪಾಕಿಸ್ತಾನದ ಗರ್ವಭಂಗ
ಕಳೆದ ಅಕ್ಟೋಬರ್ 29ರಂದು ಭಾರತ ಇರಾನಿನೊಂದಿಗೆ ಮಾಡಿಕೊಂಡಿದ್ದ ಚೌಬಹಾರ್ ಒಪ್ಪಂದ ಫಲ ನೀಡಿದ್ದು, ಚೌಬಹಾರ್ ಬಂಧರಿನ ಮೂಲಕ ಭಾರತದ ಗೋಧಿ ಅಫ್ಗಾನಿಸ್ತಾನ ತಲುಪಿದ್ದು, ಪಾಕಿಸ್ತಾನದ ಮಾರುಕಟ್ಟೆಗೆ ಹೊಡೆತ ನೀಡುವ ಭಾರತದ ನಡೆ ಯಶಸ್ವಿಯಾಗಿದೆ.
ಇರಾನ್ ದೇಶದೊಂದಿಗೆ ಭಾರತ ಚೌಬಹಾರ್ ಒಪ್ಪಂದ ಹಾಗೂ ಸೌಹಾರ್ದ ಒಪ್ಪಂದ ಮಾಡಿಕೊಂಡು ಚೌಬಹಾರ್ ಬಂದರಿನ ಮೂಲಕ ರಫ್ತು ಮಾಡಿತ್ತು. ಅಫ್ಘಾನಿಸ್ತಾನದ ಜರಂಜ್ ಪ್ರದೇಶಕ್ಕೆ ಭಾರತ ರವಾನಿಸಿದ್ದ ಗೋಧಿ ತುಂಬಿದ ಸರಕು ಸಾಗಣೆ ನೌಕೆ ತಲುಪಿದ್ದು ಪಾಕಿಸ್ತಾನಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ.
ಇದಕ್ಕೂ ಮೊದಲು ಪಾಕಿಸ್ತಾನದ ಕರಾಚಿ ಮೂಲಕ ಗೋಧಿ ರಫ್ತು ಮಾಡಲಾಗುತ್ತಿತ್ತು. ಆದರೆ ಪಾಕಿಸ್ತಾನದ ಉಪಟಳ ಬುದ್ಧಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇರಾನಿನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಈ ಒಪ್ಪಂದದ ಯಶಸ್ಸು ಈಗ ದಕ್ಕಿದ್ದು, ಇದು ಅಫ್ಘಾನಿಸ್ತಾನದ ನಡುವಿನ ಸಂಬಂಧ ವೃದ್ಧಿಗೆ ಪಾಕಿಸ್ತಾನದ ಆರ್ಥಿಕ ವ್ಯವಸ್ಥೆಗೆ ದೊಡ್ಡಪೆಟ್ಟು ನೀಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟರು.
Leave A Reply