ಭಾರತದಲ್ಲಿ ಇಸ್ಲಾಂ ಬ್ಯಾಂಕಿಂಗ್ ಗೆ ಅವಕಾಶವಿಲ್ಲ: ರಿಸರ್ವ್ ಬ್ಯಾಂಕ್
ದೆಹಲಿ: ಭಾರತದಲ್ಲಿ ಪ್ರತ್ಯೇಕವಾಗಿ ಇಸ್ಲಾಂ ಬ್ಯಾಂಕಿಂಗ್ ಗೆ ಅವಕಾಶವಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಆರ್ ಟಿ ಐ ಅರ್ಜಿಗೆ ಪ್ರತಿಕ್ರಿಯಿಸಿರುವ ಆರ್ ಬಿಐ ಭಾರತದಲ್ಲಿ ಆರ್ಥಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮಾನ ಮತ್ತು ವಿಶಾಲ ಅವಕಾಶಗಳನ್ನು ಎಲ್ಲ ನಾಗರಿಕರಿಗೆ ನೀಡಲಾಗಿದೆ ಇನ್ನು ಪ್ರತ್ಯೇಕವಾಗಿ ಇಸ್ಲಾಂ ಬ್ಯಾಂಕಿಂಗ್ ಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇನ್ನು ಇಸ್ಲಾಂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಷರಿಯಾ ನಿಮಯಮದ ಪ್ರಕಾರ ಬಡ್ಡಿ ಹೇರುವಂತಿಲ್ಲ. ಬಡ್ಡಿ ಪಡೆಯುವುದು ಇಸ್ಲಾಂನಲ್ಲಿ ನಿಷೇಧಿಸಲ್ಟಟ್ಟಿದೆ. ಕೇಂದ್ರ ಸರಕಾರ ಮತ್ತು ಆರ್ ಬಿಐ ಈ ಕುರಿತು ಸ್ಪಷ್ಟನೆ ನೀಡಿದ್ದು, ಪ್ರತಿ ಖಾತೆದಾರರಿಗೆ ಭಾರತದಲ್ಲಿ ಸಮಾನ ಅವಕಾಶಗಳನ್ನು ನೀಡಲಾಗಿದೆ. ಇನ್ನು ಈ ಪ್ರಸ್ತಾಪವನ್ನು ಮುಂದೂಡದಿರಲು ಕೇಂದ್ರ ಸರಕಾರ ನಿರ್ಧರಿಸಿದೆ.
ಇನ್ನು ಆರ್ ಬಿಐ ಭಾರತದಲ್ಲಿ ಬಡ್ಡಿ ರಹಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ನಿರ್ಧರಿಸಿದೆ. ಇದು ಇಸ್ಲಾಂ ಬ್ಯಾಂಕಿಂಗ್ ಗೆ ಪೂರಕವಾದ ನಡೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ 2014 ಆಗಸ್ಟ್ 28ರಂದು ಘೋಷಿಸಿರುವ ‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’ ರಾಷ್ಟ್ರದ ಎಲ್ಲರಿಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೂಕ್ತ ಸೌಲಭ್ಯಗಳನ್ನು ನೀಡುತ್ತದೆ. ಇದು ಬಡ್ಡಿ ರಹಿತ ಬ್ಯಾಂಕಿಂಗ್ ಗೆ ಒತ್ತು ನೀಡಬೇಕು ಎಂದು ಆರ್ ಬಿಐ ಗವರ್ನರ್ ಆಗಿದ್ದಾಗ ರಘುರಾಮ್ ರಾಜನ್ ಸಲಹೆ ನೀಡಿದ್ದರು. ಅದಕ್ಕೆ ಜನ್ ಧನ್ ಯೋಜನೆ ಪೂರಕವಾಗಿದೆ. ಆದ್ದರಿಂದ ಪ್ರತ್ಯೇಕ ಇಸ್ಲಾಂ ಬ್ಯಾಂಕಿಂಗ್ ಅವಶ್ಯಕತೆಯಿಲ್ಲ ಎಂದು ಆರ್ ಬಿಐ ತಿಳಿಸಿದೆ.
Leave A Reply