ನಾನು ಶಿವನ ಭಕ್ತ ಎಂದ ರಾಹುಲ್ ಗಾಂಧಿ: ಇದು ಚುನಾವಣೆ ಎಫೆಕ್ಟಾ?
Posted On November 14, 2017
ಗಾಂಧಿನಗರ: ಶತಾಯಗತಾಯ ಗುಜರಾತ್ ಚುನಾವಣೆ ಗೆಲ್ಲಲೇಬೇಕು ಎಂದು ಗುರಿ ಹೊಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ಹಿಂದೂ ದೇವಸ್ಥಾನಗಳ ದರ್ಶನದ ನಾಟಕವಾಡುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.
ಗುಜರಾತಿನ ಪಟನ್ ನ ವೀರ್ ಮೇಘ್ ಮಾಯಾ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಾನು ಶಿವನ ಭಕ್ತ, ನಾನು ದೇವರನ್ನು ನಂಬುತ್ತೇನೆ” ಎಂದು ಹಿಂದುತ್ವದ ಗಾಳ ಹಾಕಿದ್ದಾರೆ.
ಅಲ್ಲದೆ ಇತ್ತೀಚೆಗೆ ಸತತವಾಗಿ ಅಂಬಾಜಿ ಹಾಗೂ ಅಕ್ಷರಧಾಮ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ದ್ವಾರಕೀಶ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಹಿಂದುತ್ವ ಮಂತ್ರ ಪಠಿಸಿದಾಗಲೇ ರಾಹುಲ್ ಚುನಾವಣೆಗೆ ಚಾಲನೆ ನೀಡಿದ್ದರು. ಅದಾದ ಬಳಿಕವೂ ರಾಹುಲ್ ಗಾಂಧಿ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು.
ಅಲ್ಲದೆ ಈಗ, ರಾಹುಲ್ ಗಾಂಧಿ ನಾನು ಶಿವನ ಭಕ್ತ ಎಂದು ಹೇಳುವ ಮೂಲಕ ಮತ್ತೆ ಹಿಂದುತ್ವ ಮಂತ್ರ ಪಠಿಸಿದ್ದು, ಇದು ಗುಜರಾತ್ ಚುನಾವಣೆ ಎಫೆಕ್ಟೇ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply