2019ರ ವೇಳೆಗೆ ಜಗತ್ತಿನ ಐದನೇ, 2028ರ ವೇಳಗೆ ಮೂರನೇ ಅತಿದೊಡ್ಡ ರಾಷ್ಟ್ರವಾಗಲಿದೆ ಭಾರತ
ದೆಹಲಿ: ಇತ್ತೀಚೆಗೆ ಭಾರತದ ಆರ್ಥಿಕತೆ ಸುಧಾರಣೆ ಕಾಣುತ್ತಿರುವ ಬೆನ್ನಲ್ಲೇ, ಅಮೆರಿಕದ ಬ್ರೋಕರೇಜ್ ಎಂಬ ಸಂಸ್ಥೆಯೊಂದು “ಇಂಡಿಯಾ 2028:ದಿ ಲಾಸ್ಟ್ ಬ್ರಿಕ್ ಇನ್ ದಿ ವಾಲ್” ಎಂಬ ವರದಿ ಬಿಡುಗಡೆ ಮಾಡಿದ್ದು, ಭಾರತ 2019ರ ವೇಳೆಗೆ ಜಗತ್ತಿನ ಐದನೇ, 2028ರ ವೇಳಗೆ ಮೂರನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂದು ತಿಳಿಸಿದೆ.
ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಗಣನೀಯ ಏರಿಕೆಯಾಗಲಿದ್ದು, ಈಗಾಗಲೇ ಭಾರತ ಬ್ರೆಜಿಲ್ ಹಾಗೂ ರಷ್ಯಾವನ್ನು ಜಿಡಿಪಿಯಲ್ಲಿ ಹಿಂದಿಕ್ಕಿದೆ. ಇನ್ನೇನು ಎರಡೇ ವರ್ಷದಲ್ಲಿ ಫ್ರಾನ್ಸ್ ಹಾಗೂ ಬ್ರಿಟನ್ ಅನ್ನು ಹಿಂದಿಕ್ಕಿ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಅರ್ಥವ್ಯವಸ್ಥೆಯ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಂದಿನ ಒಂದು ದಶಕದಲ್ಲಿ ಭಾರತದ ಆರ್ಥಿಕತೆ ಶೇ.10ರಷ್ಟು ಹೆಚ್ಚಾಗಲಿದೆ. ಈ ದರ ಜಪಾನ್ ಗಿಂತ 1.6ರಷ್ಟು ಹೆಚ್ಚಾಗುತ್ತದೆ. ಅಲ್ಲದೆ ಜರ್ಮನಿಯ ಆರ್ಥಿಕತೆಯನ್ನೂ ಭಾರತ ಹಿಂದಿಕ್ಕಲಿದ್ದು, 2028ರ ವೇಳಗೆ ಈ ಎರಡೂ ರಾಷ್ಟ್ರಗಳನ್ನು ಬದಿಗೊತ್ತಿ, ಭಾರತ ಜಿಡಿಪಿ ದರದಲ್ಲಿ ಜಗತ್ತಿನ ಮೂರನೇ ದೊಡ್ಡ ರಾಷ್ಟ್ರವಾಗಲಿದೆ ಎಂದು ತಿಳಿದುಬಂದಿದೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ ಜಿಎಸ್ಟಿ ಹಾಗೂ ನೋಟು ನಿಷೇಧದಿಂದ ದೇಶದ ಅರ್ಥವ್ಯವಸ್ಥೆಯೇ ಬುಡಮೇಲಾಯಿತು ಎಂದು ದೇಶದಲ್ಲಿ ಬೊಬ್ಬೆ ಹಾಕುತ್ತಿದ್ದರೂ, ಜಗತ್ತಿನ ಪ್ರಮುಖ ಸಂಸ್ಥೆಗಳು ದೇಶದ ವಿತ್ತ ವ್ಯವಸ್ಥೆಯ ಸುಧಾರಣೆ ಬಗ್ಗೆ ಮಾತನಾಡುತ್ತಿವೆ. ನಮ್ಮವರಿಗೆ ಇದು ಅರ್ಥವಾಗೋದು ಯಾವಾಗ ಎಂಬುದೇ ಪ್ರಶ್ನೆ.
Leave A Reply