ಭಾರತೀಯ ಮುಸ್ಲಿಮರು ನಿರಾಕರಿಸಿದ್ದ ಯೋಗಕ್ಕೆ ಮಾನ್ಯತೆ ನೀಡಿದ ಸೌದಿ ಅರೇಬಿಯಾ
Posted On November 15, 2017

ಅಬುದಾಬಿ: ಯೋಗ ಹಿಂದೂತ್ವವನ್ನು ಬೋಧಿಸುತ್ತದೆ ಎಂದು ಯೋಗವನ್ನು ನಿರಾಕರಿಸಿದ್ದ ಕೆಲ ಭಾರತೀಯ ಮುಸ್ಲಿಮರು ನಿರಾಕರಿಸಿದ್ದ ಯೋಗಕ್ಕೆ ಸೌದಿ ಅರೇಬಿಯಾ ಸರಕಾರ ‘ಯೋಗ ಒಂದು ಕ್ರೀಡಾ ಚಟುವಟಿಕೆ ಅದನ್ನು ಯಾರೂ ಬೇಕಾದರೂ ಅಭ್ಯಾಸ ಮಾಡಬಹುದು ಎಂದು ಮಂಗಳವಾರ ಆದೇಶ ಹೊರಡಿಸಿದೆ.
ಯೋಗ ಶಿಕ್ಷಕಿ ನೌಫ್ ಮಾರ್ವಾಯಿ ನಿರಂತರ ಶ್ರಮದಿಂದ ಸೌದಿ ಅರೇಬಿಯಾದ ಸರಕಾರ ಈ ನಿರ್ಧಾರ ಪಡೆದಿದೆ. ಈಗ ಅರೇಬಿಯಾದಲ್ಲಿ ಯಾರೂ ಬೇಕಾದರೂ ಯೋಗ ಅಭ್ಯಾಸ ಮಾಡಬಹುದು ಮತ್ತು ಯೋಗ ಶಿಕ್ಷಣವನ್ನು ನೀಡಬಹುದು. ಯೋಗವೊಂದು ಕ್ರೀಡಾ ಚಟುವಟಿಕೆ ಎಂದು ಸರಕಾರ ತಿಳಿಸಿದೆ.
ಇತ್ತೀಚೆಗೆ ಜಾರ್ಖಂಡನಲ್ಲಿ ಯೋಗ ಶಿಕ್ಷಕಿಯೊಬ್ಬರಿಗೆ ಸ್ಥಳೀಯ ಮೌಲ್ವಿಗಳು ಫತ್ವಾ ಹೊರಡಿಸಿದ್ದಲ್ಲದೇ, ಅವರ ಮನೆ ಮೇಲೆ ಕಲ್ಲು ತೂರಿದ್ದರು. ಅಲ್ಲದೇ ವಿಶ್ವಯೋಗದಿನಾಚರಣೆಗೂ ಭಾರತದಲ್ಲಿ ವಿರೋಧ ವ್ಯಕ್ತವಾಗಿತ್ತು. ಈಗ ಸೌದಿ ಅರೇಬಿಯಾದಂಥ ಕಟ್ಟರ್ ಮುಸ್ಲಿಂ ರಾಷ್ಟ್ರದಲ್ಲೇ ಯೋಗಕ್ಕೆ ಮಾನ್ಯತೆ ನೀಡಲಾಗಿದೆ.
- Advertisement -
Leave A Reply