ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ: ಕೇರಳ ಕಮ್ಯುನಿಸ್ಟರ್ ಗೂಂಡಾಗಿರಿದು ನಿದರ್ಶನ
ದೆಹಲಿ: ಇತ್ತೀಚೆಗಷ್ಟೇ ಕೇರಳದಲ್ಲಿ ನಡುರಸ್ತೆಯಲ್ಲೇ ಹತ್ಯೆ ಮಾಡಲಾದ ನೆನ್ಮಿನಿ ಆನಂದ್ ಎಂಬ ಆರೆಸ್ಸೆಸ್ ಕೊಲೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರಿಗೇ ಕೊಲೆ ಬೆದರಿಕೆ ಹಾಕಲಾಗಿದ್ದು, ಇದು ಕಮ್ಯುನಿಸ್ಟರ ಗೂಂಡಾಗಿರಿಗೆ ನಿದರ್ಶನ ಎಂಬ ಮಾತು ಕೇಳಿಬರುತ್ತಿವೆ.
ಆರೆಸ್ಸೆಸ್ ಕಾರ್ಯಕರ್ತರ ಕೊಲೆ ಕುರಿತು ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದ. ಇದರಿಂದ ಕುಪಿತರಾದ ಮೂವರು ವಿಡಿಯೋ ಕರೆ ಮಾಡಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿದ್ದಾರೆ.
ವೀಡಿಯೋ ಕರೆ ವೇಳೆ ಮೂವರು ಪುಡಿ ರೌಡಿಗಳ ಬಳಿ ಎಕೆ 47 ಬಂದೂಕಿದ್ದು, ನಾವು ರಾಜಕೀಯ ಪಕ್ಷವೊಂದಕ್ಕೆ ಸಂಬಂಧಿಸಿದವರು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯೇ ಅವರು ಕಮ್ಯುನಿಸ್ಟ್ ಪಕ್ಷದವರು ಎಂಬ ಅನುಮಾನಕ್ಕೆ ಕಾರಣವಾಗಿದೆ.
ಬೆದರಿಕೆ ಹಾಕಿದ ಬಳಿಕ ವಿದ್ಯಾರ್ಥಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಟ್ವಿಟರ್ ಮೂಲಕ ದೂರು ನೀಡಿದ್ದಾನೆ.
ನೋಯ್ಡಾ ಮೂಲದ ವಿದ್ಯಾರ್ಥಿ ಆರೆಸ್ಸೆಸ್ ಕಾರ್ಯಕರ್ತರ ಕೊಲೆ ಖಂಡಿಸಿದ್ದಲ್ಲದೇ, ಕಮ್ಯುನಿಸಂ ಹಾಗೂ ಜಿಹಾದಿ ಎಂಬ ಪದ ಬಳಕೆ ಮಾಡಿದ್ದ.
Leave A Reply