ಹಿಂದುತ್ವ ದೇಶಭಕ್ತಿಗೆ ಸಂಬಂಧಿಸಿದ್ದು: ಯೋಗಿ ಆದಿತ್ಯನಾಥ
Posted On November 15, 2017

ಲಖನೌ: ಹಿಂದುತ್ವ ಎಂಬುದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ. ಅದು ರಾಷ್ಟ್ರೀಯತೆ ಹಾಗೂ ದೇಶಭಕ್ತಿಗೆ ಮೀಸಲಾದ ಪದ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
ಪ್ರತಿಪಕ್ಷಗಳು ವೋಟ್ ಬ್ಯಾಂಕಿಗಾಗಿ ಹಿಂದುತ್ವವನ್ನು ದ್ವೇಷಿಸುವ ಮೂಲಕ ದೇಶದ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯನ್ನೇ ಮರೆತಂತೆ ಆಡುತ್ತವೆ ಎಂದಿದ್ದಾರೆ.
ಅಖಿಲೇಶ್ ಯಾದವ್ ಇಟಾವಾದಲ್ಲಿ ಧುರ್ಯೋಧನನ ಮೂರ್ತಿ ಪ್ರತಿಷ್ಠಾಪನೆ ಕುರಿತು ಸಹ ಯೋಗಿ ಮಾತನಾಡಿದ್ದು, ಅಖಿಲೇಶ್ ಯಾದವ್ ಅವರಿಗೆ ಸಿಕ್ಕ ಸಂಸ್ಕಾರದ ಪ್ರತೀಕವಾಗಿ ಅವರು ಧುರ್ಯೋಧನ ಮೂರ್ತಿ ನಿರ್ಮಿಸುವುದಾಗಿ ತಿಳಿಸಿದ್ದಾರೆ ಎಂದು ಯೋಗಿ ಟೀಕಿಸಿದ್ದಾರೆ.
ಹಿಂದಿನ ಸರ್ಕಾರಗಳು ಅಯೋಧ್ಯೆಯನ್ನು ನಿರ್ಲಕ್ಷಿಸಿದ್ದವು. ಆದರೆ ನಾವು ಪಾರಂಪರಿಕ ತಾಣಗಳ ಗತವೈಭವ ಮರುಸೃಷ್ಟಿಮಾಡುತ್ತೇವೆ. ಆ ದಿಸೆಯಲ್ಲಿಯೇ ಕಾರ್ಯ ನಿರ್ವಹಿಸುತ್ತೇವೆ ಎಂದು ಆದಿತ್ಯನಾಥ ತಿಳಿಸಿದ್ದಾರೆ.
- Advertisement -
Leave A Reply