ಲಾಸ್ ವೆಗಾಸ್ ದಾಳಿಯಂತೆಯೇ ಕುಂಭಮೇಳಕ್ಕೂ ಐಸಿಸ್ ದಾಳಿ?
ದೆಹಲಿ: ಇಸ್ಲಾಂ ಮೂಲಭೂತವಾತದ ಪ್ರತೀಕವಾದ ಐಸಿಸ್ ಭಾರತದ ಮೇಲೂ ಕಣ್ಣು ನೆಟ್ಟಿದ್ದು, ಲಕ್ಷಾಂತರ ಜನ ಸೇರುವ ಕುಂಭಮೇಳಕ್ಕೂ ಅಮೆರಿಕದ ಲಾಸ್ ವೆಗಾಸ್ ಮೇಲೆ ಮಾಡಿದಂತೆ ದಾಳಿ ಮಾಡುವುದಾಗಿ ಐಸಿಸ್ ಬೆದರಿಕೆಯೊಡ್ಡಿದೆ.
ಈ ಕುರಿತು ಮಲಯಾಳಂನಲ್ಲಿರುವ 10 ನಿಮಿಷದ ಧ್ವನಿ ಮುದ್ರಿಕೆ (ಆಡಿಯೋ)ಯೊಂದು ಹರಿದಾಡುತ್ತಿದ್ದು, ಕುಂಭಮೇಳ ಸೇರಿ ದೇಶದ ಹಲವು ಭಾಗಗಳಲ್ಲಿ ದಾಳಿ ಮಾಡುವುದಾಗಿ ಉಲ್ಲೇಖಿಸಲಾಗಿದೆ.
ದೌಲತ್ ಉಲ್ ಇಸ್ಲಾಂ ಎಂಬ ಐಸಿಸ್ ಸ್ಥಳೀಯ ಸಂಘಟನೆ ಈ ಆಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದ್ದು, ಈ ಸಂಘಟನೆ ಬಿಡುಗಡೆ ಮಾಡಿರುವ 50ನೇ ಧ್ವನಿ ಸುರುಳಿ ಇದಾಗಿದೆ ಎಂದು ತಿಳಿದುಬಂದಿದೆ.
ಬುದ್ಧಿ ಶಕ್ತಿಯನ್ನು ಬಳಸಿ, ಆಹಾರದಲ್ಲಿ ವಿಷಯವಾದರೂ ಬೆರೆಸಿ, ಅಮೆರಿಕದಲ್ಲಿ ನಡೆಸಿದಂತೆ ಬಂದೂಕು ಹಾಗೂ ಟ್ರಕ್ ಹಾಯಿಸಿ, ರೈಲು ಹಳಿಯನ್ನಾದರೂ ತಪ್ಪಿಸಿ. ಕೊನೆ ಪಕ್ಷ ಚಾಕು ಬಳಸಿಯಾದರೂ ಕುಂಭಮೇಳಕ್ಕೆ ದಾಳಿ ಮಾಡಿ ಎಂದು ಐಸಿಸ್ ಉಗ್ರರಿಗೆ ಧ್ವನಿಮುದ್ರಿಕೆಯಲ್ಲಿ ಕರೆ ನೀಡಲಾಗಿದೆ.
ಇತ್ತೀಚೆಗೆ ಅಮೆರಿಕದ ಲಾಸ್ ವೆಗಾಸ್ ನಲ್ಲಿ 22 ಸಾವಿರ ಜನಸಂದಣಿ ಸೇರಿದ ಹಬ್ಬದ ಆಚರಣೆ ವೇಳೆ ಉಗ್ರರು ಗುಂಡಿನ ಮಳೆಗರೆದಿದ್ದರು.
ಆಡಿಯೋ ಕ್ಲಿಪ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಕುಂಭಮೇಳಕ್ಕೆ ಭಾರಿ ಭದ್ರತೆ ಒದಗಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
Leave A Reply