ಅರವಿಂದ್ ಕೇಜ್ರಿವಾಲರನ್ನು ಭೇಟಿಯಾಗಲು ಸಮಯವಿಲ್ಲ ಎಂದ ಪಂಜಾಬ್ ಮುಖ್ಯಮಂತ್ರಿ!
ಚಂಡೀಗಡ: ದೆಹಲಿಯಲ್ಲಿ ವಾಯುಮಾಲಿನ್ಯದ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಘೋಷಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿದ್ದು, ಈ ಕುರಿತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಲು ಪ್ರಸ್ತಾಪಿಸಿದ್ದರು.
ಆದರೆ ಇದಕ್ಕೆ ಸೊಪ್ಪು ಹಾಕದ ಅಮರಿಂದರ್ ಸಿಂಗ್, ಅರವಿಂದ್ ಕೇಜ್ರಿವಾಲರನ್ನು ಭೇಟಿಯಾಗುವಷ್ಟು ಸಮಯ ನನ್ನ ಬಳಿ ಇಲ್ಲ ಎಂದು ಛೇಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಪಂಜಾಬ್ ಮುಖ್ಯಮಂತ್ರಿ, ಅರವಿಂದ್ ಕೇಜ್ರಿವಾಲ್ ಅವರು ವಾಯುಮಾಲಿನ್ಯ ವಿಷಯದಲ್ಲೂ ರಾಜಕೀಯ ಬೆರೆಸಲು ಮುಂದಾಗಿದ್ದಾರೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾದರೆ ಪಂಜಾಬಿನ ರೈತರು ಗದ್ದೆಯಲ್ಲಿ ಭತ್ತದ ತ್ಯಾಜ್ಯ ಸುಡಬಾರದು ಎನ್ನುತ್ತಾರೆ. ಹೀಗೆ ರಾಜಕೀಯ ಬೆರೆಸುತ್ತಿರುವ ಕಾರಣ ಹಾಗೂ ನನ್ನ ಬಳಿ ಅವರನ್ನು ಭೇಟಿಯಾಗಲು ಸಮಯವಿಲ್ಲದ ಕಾರಣ ಭೇಟಿಮಾಡಲಾಗುವುದಿಲ್ಲ ಎಂದು ಖಡಾಖಡಿಯಾಗಿ ಹೇಳಿದ್ದಾರೆ.
ದೆಹಲಿ ಹಾಗೂ ಪಂಜಾಬಿನಲ್ಲಿ ನಗರವಾಸಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದರಲ್ಲೂ ದೆಹಲಿಯಲ್ಲಿ ಸಾರಿಗೆ ವ್ಯವಸ್ಥೆಯ ಲೋಪದಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಆದರೆ ಇದನ್ನು ತಡೆಯುವಲ್ಲಿ ವಿಫಲವಾಗಿರುವ ಅರವಿಂದ ಕೇಜ್ರಿವಾಲ್ ವಿಷಯ ಬೇರೆಡೆ ವಾಲಿಸಲು ಭತ್ತ ಸುಡದಂತೆ ಹಾಗೂ ನಮ್ಮನ್ನು ಭೇಟಿ ಮಾಡುವಂತೆ ಪ್ರಸ್ತಾಪಿಸಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
Leave A Reply