ಮುಖ್ಯಮಂತ್ರಿಯವರೇ, ನಿಮಗೆ ಧೈರ್ಯವಿದ್ದರೆ ಬೇರೆ ಧರ್ಮಗಳ ಈ ಮೌಢ್ಯವನ್ನೂ ನಿಷೇಧಿಸಿ!
-
ದೆವ್ವ ಓಡಿಸುವ ನೆಪದಲ್ಲಿ ಪಾದರಕ್ಷೆಯಲ್ಲಿ ಅದಿದ ನೀರನ್ನು ಒತ್ತಾಯಪೂರ್ವಕವಾಗಿ ಕುಡಿಸುವುದು, ಮೆಣಸಿಕ ಕಾಯಿ ಹೊಗೆ, ಹೊಡೆಯುವುದು, ಕೂದಲು ಕೀಳುವುದು.
-
ಭಾನಾಮತಿ, ನಿಧಿ ಹುಡುಕುವುದು, ವ್ಯಕ್ತಿ ಹಾಗೂ ಸಮೂಹಕ್ಕೆ ಬಹಿಷ್ಕಾರ ಹಾಕುವುದು.
-
ಗರ್ಭದಲ್ಲಿನ ಹೆಣ್ಣು ಮಗು ಗಂಡಾಗಿ ಪರಿವರ್ತಿಸುವುದಾಗಿ ಹೇಳಿ ಮೋಸ ಮಾಡುವುದು.
-
ಋತುಮತಿಯಾದ ಸ್ತ್ರೀಯನ್ನು ಪ್ರತ್ಯೇಕವಾಗಿ ಅಥವಾ ಮನೆ ಹೊರಗೆ ವಸತಿ ಕಲ್ಪಿಸುವುದು.
-
ಬೆರಳುಗಳ ಮೂಲಕ ಶಸ್ತ್ರಚಿಕಿತ್ಸೆ ಕೈಗೊಳ್ಳುವುದು.
-
ಎಂಜಲು ಎಲೆ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನ, ಕೆಂಡ ಹಾಯುವುದು, ಬೆತ್ತಲೆ ಸೇವೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಿಂದ ಯತ್ನಿಸಿ ಕೊನೆಗೂ ಬೆಳಗಾವಿ ಅಧಿವೇಶನದಲ್ಲಿ ಮೌಢ್ಯ ಪ್ರತಿಬಂಧಕ ವಿಧೇಯಕ ಮಂಡಿಸಿದೆ. ಈ ವಿಧೇಯಕದಲ್ಲಿ ಹಿಂದೂ ಧರ್ಮದ ಈ ಮೇಲಿನ ಅಂಶಗಳನ್ನು ನಿಷೇಧಿಸಿದೆ ಹಾಗೂ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಖಂಡಿತವಾಗಿಯೂ ಯಾವುದೇ ಜಾತಿ, ಧರ್ಮದಲ್ಲಿರುವ ಜಾಢ್ಯವನ್ನು ತೊಲಗಿಸಬೇಕು, ಸಮಾಜದ ಮೇಲೆ ಪರಿಣಾಮ ಬೀರುವ, ವ್ಯಕ್ತಿಯ ಘನತೆಗೆ ಕುತ್ತು ತರುವ ಮೌಢ್ಯವನ್ನು ನಿಷೇಧಿಸಬೇಕು. ಮಂಗಳನ ಅಂಗಳಕ್ಕೆ ಕಾಲಿಟ್ಟೆವು ಎಂದು ಬೀಗುವ ನಾವು ಮೌಢ್ಯದಿಂದ ಹೊರಬರಬೇಕು.
ಆದರೆ…
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೀ ಹಿಂದೂ ಧರ್ಮದಲ್ಲಿರುವ ಮೌಢ್ಯ, ಅನಾಚಾರಗಳೇಕೆ ಕಣ್ಣಿಗೆ ಕಾಣುತ್ತವೆ? ಇಸ್ಲಾಂ, ಕ್ರಿಶ್ಚಿಯನ್ ಸೇರಿ ದೇಶದಲ್ಲಿರುವ ಹಲವು ಧರ್ಮಗಳ ಮೌಢ್ಯ, ಕಂದಾಚಾರಗಳೇಕೆ ಸಿದ್ದರಾಮಯ್ಯ ಅವರಿಗೆ ಕಾಣಿಸುವುದಿಲ್ಲ? ಬೇರೆ ಧರ್ಮಗಳ ಮೌಢ್ಯ ನಿಷೇಧಿಸಿದರೆ, ಅಲ್ಪಸಂಖ್ಯಾತರ ಮತ ಬೀಳುವುದಿಲ್ಲ ಎಂಬ ಭಯವೇ? ಮುಸ್ಲಿಮರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ದುಗುಡವೇ? ಅಥವಾ ಆ ಧರ್ಮಗಳಲ್ಲಿ ಕಂದಾಚಾರಗಳೇ ಇಲ್ಲವೇ? ಇಲ್ಲ, ಹಿಂದೂಗಳನ್ನು ದೂಷಿಸುವುದೇ ಸಿದ್ದರಾಮಯ್ಯ ಅವರ ಸಮಾಜವಾದ, ಜಾತ್ಯತೀತವಾದವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಹಿಂದೂಗಳ ಅನಾಚಾರ ನಿಷೇಧಿಸಿದ ನಿಮಗೆ ತಿಳಿದಿರಲಿ. ಇಸ್ಲಾಂ ಧರ್ಮದಲ್ಲಿ ಇಂದಿಗೂ ಯಾವ ಮಹಿಳೆಯೂ ಮಸೀದಿಯಲ್ಲಿ, ದರ್ಗಾಗಳಲ್ಲಿ ಪ್ರವೇಶ ಮಾಡುವಂತಿಲ್ಲ. ಹಿಂದೂ ಯುವತಿ ಋತುಮತಿಯಾದರೆ ಪ್ರತ್ಯೇಕವಾಗಿ ಇಡುವಂತಿಲ್ಲ ಎಂದು ನ್ಯಾಯ ಒದಗಿಸುವ ನೀವು, ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಕ್ಕೆ ಪ್ರವೇಶ ಏಕೆ ನೀಡಬಾರದು.
ಇಂದಿಗೂ ಇಸ್ಲಾಮಿನಲ್ಲಿ ಮುಸ್ಲಿಂ ವ್ಯಕ್ತಿ ನಾಲ್ಕೈದು ಮದುವೆಯಾಗಬಹುದು ಎಂದಿದೆ. ಇದರಿಂದ ಎಷ್ಟೋ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ತಲಾಖ್ ಪಡೆದು, ಜೀವನಾಂಶವೂ ಸಿಗದೆ ನರಳುವ ಮುಸ್ಲಿಂ ಮಹಿಳೆಯರಿದ್ದಾರೆ. ನೀವೇಕೆ ಇಸ್ಲಾಂ ಬಹುಪತ್ನಿತ್ವ ನಿಷೇಧಿಸಿ ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಬಾರದು? ನೀವೇಕೆ ಅವರ ಬಾಳಿಗೆ ಬೆಳಕಾಗಬಹುದು? ಮನಸ್ಸು ಮಾಡುವಿರಾ?
ಸಿಎಂ ಸಾಹೇಬ್ರೆ ನಿಮಗೂ ಗೊತ್ತಿದೆ. ಒಂದು ಸಣ್ಣ ಪಿನ್ನು ಚುಚ್ಚಿದರೆ, ಇಸ್ತ್ರಿ ಪೆಟ್ಟಿಗೆ ತುಸು ತಾಕಿದರೆ ಜೀವ ಹೋದ ಹಾಗೆ ಆಗುತ್ತದೆ. ಆ ನೋವು ಬಾಧಿಸುತ್ತದೆ. ಅಂಥಾದ್ದರಲ್ಲಿ ಮುಸ್ಲಿಂ ಬಾಲಕನೊಬ್ಬನಿಗೆ ಧರ್ಮದ ಹೆಸರಿನಲ್ಲಿ ಸುನ್ನತ್ (ಮರ್ಮಾಂಗದ ಮುಂದೊಗಲು ಕತ್ತರಿಸುವುದು) ಮಾಡಿದರೆ ಎಷ್ಟು ನೋವಾಗುವುದಿಲ್ಲ? ಎಷ್ಟು ದಿನ ಆ ಬಾಲಕ ನಿದ್ದೆಯಿಲ್ಲದೆ ರಾತ್ರಿ ಕಳೆಯುವುದಿಲ್ಲ? ಈ ಸುನ್ನತ್ ನಿಷೇಧಿಸುವ ಧೈರ್ಯ, ಮುಸ್ಲಿಂ ಬಾಲಕರಿಗೆ ನ್ಯಾಯ ಕೊಡಿಸುವ ಧೈರ್ಯ ನಿಮಗಿದೆಯಾ?
ಇನ್ನು ಕ್ರಿಶ್ಚಿಯನ್ ಧರ್ಮದಲ್ಲಂತೂ ಮೌಢ್ಯದ ಸರಮಾಲೆಯೇ ಇದೆ. ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆಯಾದರೆ, ಯಾವುದೇ ರೋಗವಾದರೆ ಜೀಸಸ್ ಬಂದೇ ಅದನ್ನು ಗುಣಪಡಿಸುತ್ತಾನಂತೆ. ಹಾಗೆಂದು ಕ್ರೈಸ್ತ ಪಾದ್ರಿಗಳು ಹಿಂದೂಗಳನ್ನು ಮತಾಂತರ ಮಾಡುತ್ತಾರಲ್ಲ, ಇದು ಕಂದಾಚಾರವಲ್ಲವೇ? ಇದನ್ನೇಕೆ ನೀವು ಬ್ಯಾನ್ ಮಾಡಿ ವಿಧೇಯಕ ಮಂಡಿಸಬಹುದು.
ನೀವೇ ಯೋಚನೆ ಮಾಡಿ ಮುಖ್ಯಮಂತ್ರಿಯವರೇ, ಬೇರೆ ಧರ್ಮಗಳಲ್ಲಿ ಅನಾಚಾರವಿದ್ದೂ, ಅವು ಇವೆ ಎಂದು ಗೊತ್ತಿದ್ದೂ, ನೀವು ಬರೀ ಹಿಂದೂಗಳನ್ನೇ ಟಾರ್ಗೆಟ್ ಮಾಡುವುದು ಯಾವ ನ್ಯಾಯ? ಮನೆಯಲ್ಲಿರುವ ಮಕ್ಕಳು, ಸಹೋದರ, ಸಹೋದರಿಯರಲ್ಲೂ ನೀವು ಹೀಗೆಯೇ ಭೇದ ಮಾಡುವಿರಾ? ಭೇದ ಮಾಡುವವರನ್ನು ಕುಟುಂಬದವರು ಯಾವ ರೀತಿ ಮಾಡಿಯಾರು? ನಿಮ್ಮ ಜಾತ್ಯತೀತವಾದ ಇಂಥ ವಿಷಯದಲ್ಲೇಕೆ ಜಾಗೃತವಾಗುವುದಿಲ್ಲ? ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ ಈ ಇಸ್ಲಾಂ ಹಾಗೂ ಕ್ರೈಸ್ತ ಧರ್ಮದಲ್ಲಿರುವ ಮೌಢ್ಯ ನಿಷೇಧಿಸಿ ನೋಡೋಣ.
ಚಿತ್ರಕೃಪೆ: ಇಂಟರ್ ನೆಟ್
Leave A Reply