ದೇಶದಲ್ಲೇ ಪ್ರಧಾನಿ ಮೋದಿ ಜನಪ್ರಿಯ ರಾಜಕಾರಣಿ
ವಾಷಿಂಗ್ಟನ್: ದೇಶದ ರಾಜಕಾರಣಿಗಳಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರಾಜಕಾರಣಿ ಎಂದು ತಿಳಿದುಬಂದಿದೆ.
ಅಮೆರಿಕದ ಪ್ಯೂ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಇದು ದೃಢಪಟ್ಟಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಿ ಮೂರು ವರ್ಷವಾದ ಬಳಿಕವೂ ಅವರ ಜನಪ್ರಿಯತೆ ಕುಗ್ಗಿಲ್ಲ ಹಾಗೂ ಅದು ಹೆಚ್ಚಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರಸಕ್ತ ವರ್ಷದ ಫೆಬ್ರವರಿ 21ರಿಂದ ಮಾರ್ಚ್ 10ರ ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇದು ದೃಢವಾಗಿದ್ದು, ಅಭಿಪ್ರಾಯ ತಿಳಿಸಿದ 2464 ಜನರಲ್ಲಿ ಮೋದಿ ಅವರಿಗೆ ಜನಪ್ರಿಯತೆಯಲ್ಲಿ 88 ಅಂಕ ನೀಡಿದ್ದಾರೆ.
ಇನ್ನುಳಿದಂತೆ ರಾಹುಲ್ ಗಾಂಧಿ ಅವರಿಗೆ 58, ಸೋನಿಯಾ ಗಾಂಧಿಗೆ 49, ಅರವಿಂದ್ ಕೇಜ್ರಿವಾಲ್ ಅವರಿಗೆ 39 ಅಂಕ ನೀಡಲಾಗಿದೆ.
ಭಾರತದ ಆರ್ಥಿಕತೆ ಸುಧಾರಣೆ, ನೋಟು ನಿಷೇಧ, ಜಿಎಸ್ ಟಿ ನರೇಂದ್ರ ಮೋದಿ ಕೈಗೊಂಡ ಹಲವು ನಿರ್ಧಾರ ಹಾಗೂ ಯೋಜನೆಗಳು ಇಷ್ಟವಾಗಿವೆ ಎಂದು ಜನ ಸಮೀಕ್ಷೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.
2014ಕ್ಕೆ ಹೋಲಿಸಿದರೆ ಮೋದಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದ್ದು, 10ರಲ್ಲಿ ಏಳು ಮಂದಿಗೆ ಪ್ರಧಾನಿ ಆಡಳಿತ ಇಷ್ಟವಾಗಿದೆ ಎಂದು ತಿಳಿಸಿದೆ.
Leave A Reply