ಬದ್ರಿನಾಥ ದೇವಾಲಯ ಹಿಂದೂಗಳದ್ದಲ್ಲವಂತೆ: ಮುಸ್ಲಿಂ ಮೌಲ್ವಿ ಉವಾಚ
ದೇವಬಂಧ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ವಿವಾದ ಬಗೆಹರಿಯುವ ಮುನ್ನವೇ ಮುಸ್ಲಿಂ ಮೌಲ್ವಿಯೊಬ್ಬ ಮತ್ತೊಂದು ವಿವಾದ ಸೃಷ್ಟಿದ್ದಾನೆ. ದೇವಬಂದ್ ನಲ್ಲಿರುವ ಬದ್ರಿನಾಥ್ ದೇವಾಲಯ ಹಿಂದೂಗಳದಲ್ಲ, ಅದು ಮುಸ್ಲಿಮರ ದೈವಿಸ್ತಾನ ಎಂದು ಹೇಳಿದ್ದಾನೆ. ದರೂಲ್ ಉಲೂಮ್ ಮದರಸಾದ ಮೌಲಾನಾ ಅಬ್ದುಲ್ ಲತೀಫ್ ಈ ವಿವಾದಿತ ಹೇಳಿಕೆ ನೀಡಿದ್ದಾನೆ.
ಬದ್ರಿನಾಥ್ ದೇವರೇ ಇಲ್ಲ ಅದು ಬದರುದ್ಧಿನ್ ಶಾಹ ಎಂದು ಇದೆ. ಹಿಂದೂಗಳು ಮುಸ್ಲಿಮರ ದೇವರ ಹೆಸರನ್ನು ಬದಲಾಯಿಸಿ ನಾಥ್ ಎಂಬ ಪದವನ್ನು ಸೇರಿಸಿದ್ದಾರೆ. ನಾಥ ಪದ ಸೇರಿಸುವುದರಿಂದ ದೇವರು ಹಿಂದೂ ಆಗಲು ಸಾಧ್ಯವಿಲ್ಲ ಎಂದು ಸಮರ್ಪಣೆ ನೀಡಿದ್ದಾನೆ.
ಮುಸ್ಲಿಂರಿಗೆ ಬದ್ರಿನಾಥ ಬಿಟ್ಟುಕೊಡುವಂತೆ ಆಗ್ರಹಿಸಿದ್ದು, ಬದ್ರಿನಾಥ ದೇವಾಲಯದಲ್ಲಿ ಒತ್ತಾಯಪೂರ್ವಕವಾಗಿ ಗೋ ಮೂತ್ರ ಮತ್ತು ಗಂಗಾಜಲ ಕುಡಿಯುವಂತ ಸ್ಥಿತಿ ನಿರ್ಮಿಸಿದ್ದಾರೆ. ಇದನ್ನು ವಿರೋಧಿಸುವವರಿಗೆ ಇತಿಹಾಸದ ಅರಿವು ಇಲ್ಲ. ಬದ್ರಿನಾಥ ಮುಸ್ಲಿಂರ ಧಾರ್ಮಿಕ ಸ್ಥಳವಾಗಿದೆ. ಅದನ್ನು ಮುಸ್ಲಿಮರಿಗೆ ಹಸ್ತಾಂತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಗೆ ಮನವಿ ಮಾಡಿದ್ದಾನೆ.
Leave A Reply