ಅರೆಸ್ಸೆಸ್ ಮುಖಂಡನ ಕೊಲೆ ಪ್ರಕರಣ ಎನ್ಐಎ ತನಿಖೆಗೆ ವಹಿಸಿದ ಪಂಜಾಬ್ ಸರ್ಕಾರ
Posted On November 17, 2017
ಚಂಡೀಗಡ: ಪಂಜಾಬಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರವಿಂದರ್ ಗೊಸೈನ್ ಹತ್ಯೆ ಪ್ರಕರಣವನ್ನು ಕೊನೆಗೂ ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿದೆ.
ಆರೆಸ್ಸೆಸ್ ಮನವಿ ಮೇರೆಗೆ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲಾಗಿದೆ. ಪಂಜಾಬ್ ಪೊಲೀಸರು ಹಾಗೂ ಕೇಂದ್ರ ತನಿಖಾ ದಳ ಪರಸ್ಪರ ಸಹಕಾರದೊಂದಿಗೆ ಈ ತನಿಖೆ ನಡೆಸಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 17ರಂದು ಲುಧಿಯಾನದ ಕೈಲಾಶ್ ನಗರದಲ್ಲಿ ರವಿಂದರ್ ಗೊಸೈನ್ (60) ಎಂಬ ಆರೆಸ್ಸೆಸ್ ಮುಖಂಡರನ್ನು ಹಾಡಹಗಲೇ ನಡುಬೀದಿಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.
ಘಟನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಪೊಲೀಸ್ ಉಪ ಆಯುಕ್ತರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಈಗ ಆರೆಸ್ಸೆಸ್ ಮನವಿ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಪ್ರಕರಣ ವಹಿಸಲಾಗಿದೆ.
- Advertisement -
Trending Now
ಕಿಸ್, ಅಪ್ಪುಗೆ ಪ್ರೀತಿ, ಪ್ರೇಮದಲ್ಲಿ ಸ್ವಾಭಾವಿಕ -ಎಂದ ಮದ್ರಾಸ್ ನ್ಯಾಯಾಲಯ
November 14, 2024
25 ರ ನಂತರ ಹೆಣ್ಣು ಮದುವೆಯಾಗಬಾರದು ಎನ್ನುವ ನಿಯಮ ತರಲು ಆಗ್ರಹಿಸಿದ ನಾಯಕ!
November 14, 2024
Leave A Reply