ಜಿಎಸ್ಟಿ ವಿರೋಧಿಗಳೇ ಇಲ್ಲಿ ಕೇಳಿ, ಅಂತಾರಾಷ್ಟ್ರೀಯ ಸಂಸ್ಥೆಯೇ ತೆರಿಗೆ ಪದ್ಧತಿ ಬೆಂಬಲಿಸಿದೆ ಹಾಗೂ ರೇಟಿಂಗ್ ಹೆಚ್ಚಿಸಿದೆ
ದೆಹಲಿ: ಅಂತಾರಾಷ್ಟ್ರೀಯ ಹೂಡಿಕೆ ದರ ನಿಗದಿ ಸಂಸ್ಥೆ ಮೂಡಿ 14 ವರ್ಷಗಳ ಬಳಿಕ ಭಾರತದ ವಿದೇಶಿ ಕರೆನ್ಸಿ ಸಾಲದ ಮೇಲಿನ ದರವನ್ನು ಪರಿಷ್ಕರಣೆ ಮಾಡಿದ್ದು, ಇದು ಜಿಎಸ್ಟಿ ವಿರೋಧಿಸಿದವರಿಗೆ ಬರೆ ಎಳೆದಂತಾಗಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಿಂದ ಭಾರತದ ಆರ್ಥಿಕ ಸುಧಾರಣೆ, ತೆರಿಗೆ ವಸೂಲಿ, ಏಕ ತೆರಿಗೆ ಪದ್ಧತಿ ಪರಿಗಣಿಸಿ ಮೂಡಿ ಸಂಸ್ಥೆ ಈ ರೇಟಿಂಗ್ ನೀಡಿದ್ದು, ಬಿಎಎ 2ರಿಂದ ಬಿಎಎ 3ಕ್ಕೆ ಪರಿಷ್ಕರಣೆ ಮಾಡಿದೆ.
ಜಿಎಸ್ಟಿ ಜಾರಿಯಿಂದ ಭಾರತದಲ್ಲಿ ಉದ್ಯಮ ಕೈಗೊಳ್ಳುವಲ್ಲಿ ಸರಳೀಕರಣ, ಉತ್ಪಾದನೆಗೆ ಉತ್ತೇಜನ, ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ದರದಲ್ಲಿ ಹೆಚ್ಚಳ ಮಾಡಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಭಾರತದ ಜಿಡಿಪಿ 6.7ರಿಂದ ಮಾರ್ಚ್ 2018ರ ವೇಳೆಗೆ 7.1ರಷ್ಟು ತಲುಪಲಿದೆ ಎಂದು ಸಹ ಮೂಡಿ ಸಂಸ್ಥೆ ತಿಳಿಸಿದೆ.
2003ರಲ್ಲಿ ಮೂಡಿ ಸಂಸ್ಥೆ ರೇಟಿಂಗ್ ದರದಲ್ಲಿ ಅಪ್ ಗ್ರೇಡ್ ಮಾಡಿತ್ತು. ಆದರೀಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಪ್ರಭಾವಿತವಾಗಿ ಅಪ್ ಗ್ರೇಡ್ ಮಾಡಿದೆ. ಒಟ್ಟಿನಲ್ಲಿ ಈ ಅಪ್ ಗ್ರೇಡ್ ನಿಂದ ದೇಶದ ಆರ್ಥಿಕತೆ ಸುಧಾರಣೆಗೆ ಉತ್ತೇಜನ ಸಿಕ್ಕಂತಾಗಿದೆ. ಜತೆಗೆ ಜಿಎಸ್ಟಿ ಜಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಯಿತು ಎಂದು ಬೊಬ್ಬೆ ಹಾಕುವವರ ಬಾಯಿಗೂ ಬೀಗ ಜಡಿದಂತಾಗಿದೆ.
Leave A Reply