ಮುಸ್ಲಿಂ ರಕ್ಷಣಾ ಸಿಬ್ಬಂದಿ ಬೇಡ ಎಂದ ಪಾಕ್ ಸಚಿವ
ಇಸ್ಲಾಮಾಬಾದ್: ಇಸ್ಲಾಂ ಮೂಲಭೂತವಾದಿಗಳ ಭೀತಿಯಿಂದ ಮುಸ್ಲಿಂ ರಕ್ಷಣಾ ಸಿಬ್ಬಂದಿ ನನ್ನ ರಕ್ಷಣೆಗೆ ಬರುವುದು ಬೇಡ ಎಂದು ಪಾಕ್ ರಾಜ್ಯ ಕಾನೂನು ಸಚಿವ ರಾಣಾ ಸನಾಉಲ್ಲಾ ಹೇಳಿದ್ದಾರೆ. ಸದ್ಯ ತಮ್ಮಗಿರುವ ಮುಸ್ಲಿಂ ರಕ್ಷಣಾ ಸಿಬ್ಬಂದಿಯನ್ನು ತೆಗೆದುಹಾಕಿದ್ದು, ಕ್ರಿಶ್ಚಿಯನ್, ಹಿಂದೂ ಅಥವಾ ಅಹ್ಮದಿ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಟಿವಿಯೊಂದಕ್ಕೆ ಸಂದರ್ಶನ ನೀಡಿರುವ ಮುಸ್ಲಿಂ ಮತ್ತು ಅಹ್ಮದಿಯರಲ್ಲಿ ಸಣ್ಣ ವ್ಯತ್ಯಾಸವಿದೆ ಎಂದು ಹೇಳಿದ್ದರು. ಇದು ರಾಷ್ಟ್ರಾಧ್ಯಂತ ತೀವ್ರ ವಿವಾದ ಸೃಷ್ಟಿಸಿತ್ತು. ಮುಸ್ಲಿಂ ಮೂಲಭೂತವಾದಿಗಳು ಸಚಿವ ರಾಣಾ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ರಾಷ್ಟ್ರಾಧ್ಯಂತ ಇಸ್ಲಾಂ ಸಂಘಟನೆ ತೆಹ್ರಿಕ್ ಲಬೈಕ್ ಯಾ ರಸೂಲ್ ಅಲ್ಹಾ ಸಚಿವನ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪ್ರತಿಭಟನೆಯಿಂದ ಜೀವ ಭೀತಿ ಹೆಚ್ಚಾಗಿದ್ದು, ಪಾಕ್ ಪೊಲೀಸರಿಗೆ ತಮಗೆ ನೇಮಿಸುವ ಸಿಬ್ಬಂದಿಯ ವಿವರವನ್ನು ಪರಿಶೀಲಿಸಿ ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಕ್ರಿಶ್ಚಿಯನ್ ಧರ್ಮದ ಸಿಬ್ಬಂದಿ ಹೊಂದಿರುವ ಖಾಸಗಿ ಸಂಸ್ಥೆಯಿಂದ ರಕ್ಷಣೆ ಪಡೆಯುತ್ತಿದ್ದಾರೆ.
Leave A Reply