ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಜೈಲು ಪಾಲಾದರೆ, ತೆರಿಗೆ ವಂಚನೆಯಲ್ಲಿ ಈಗ ಪತಿ ನಟರಾಜನ್ ಜೈಲಿಗೆ!
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದ ಬಳಿಕ ಅವರ ಆಪ್ತೆ ಶಶಿಕಲಾ ನಟರಾಜನ್ ಗೆ ಬರೀ ಆಪತ್ತೇ ಎದುರಾಗಿದೆ. ಜಯಲಲಿತಾ ಬಳಿಕ ಶಶಿಕಲಾ ಬದಲಿಗೆ ಪನ್ನೀರ್ ಸೆಲ್ವಂ ಸಿಎಂ ಆದರು. ಬಳಿಕ ಸಿಎಂ ಆಗುವ ಅವಕಾಶ ಸಿಕ್ಕರೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾರೇ ಜೈಲುಪಾಲಾಗಬೇಕಾಯಿತು. ಅತ್ತ ಸಂಬಂಧಿ ಟಿಟಿವಿ ದಿನಕರನ್ಗೂ ಹಿನ್ನಡೆಯಾಯಿತು.
ಈಗ ಅದೇ ಶಶಿಕಲಾ ಪತಿ ನಟರಾಜನ್, ತೆರಿಗೆ ವಂಚನೆ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಹೌದು, ನಟರಾಜನ್ 1994ರಲ್ಲಿ ಲೆಕ್ಸಸ್ ಎಂಬ ಐಷಾರಾಮಿ ಕಾರು ಖರೀದಿಸಿದ್ದು, ಅದಕ್ಕೆ 1.62 ಕೋಟಿ ರುಪಾಯಿ ತೆರಿಗೆ ಪಾವತಿಸಿರಲಿಲ್ಲ. ಈ ಕುರಿತು 2010ರಲ್ಲಿ ನಟರಾಜನ್ ಸೇರಿ ಮೂವರ ವಿರುದ್ಧ ಆರ್ಥಿಕ ಅಪರಾಧ ಪ್ರಕರಣದಲ್ಲಿ ಎರಡು ಪ್ರಕರಣ ದಾಖಲಾಗಿದ್ದವು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ವರನ್ನೂ ದೋಷಿಗಳೆಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ನಟರಾಜನ್ ಗೆ ಈಗ ಹಿನ್ನಡೆಯಾಗಿದ್ದು ಮದ್ರಾಸ್ ಹೈಕೋರ್ಟ್ ಅಧೀನ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದ್ದು, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಜಯಲಲಿತಾ ವಾಸವಿದ್ದ ಪೋಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಜಯಲಲಿತಾ ಆಪ್ತೆ ಶಶಿಕಲಾಗೆ ಹಿನ್ನಡೆಯೇ ಸರಿ.
Leave A Reply