ಡೋಕ್ಲಾಮ್ ವಿವಾದ ಬಳಿಕ ಇದೇ ಮೊದಲ ಬಾರಿಗೆ ಭಾರತ ಚೀನಾ ಸಭೆ
Posted On November 18, 2017

ಬೀಜಿಂಗ್: ಸಿಕ್ಕಿಂನ ಡೊಕಾಲಾ ಗಡಿಯಲ್ಲಿ ಉಂಟಾದ ಬಿಕ್ಕಟ್ಟು ಶಮನವಾದ ಬಳಿಕ ಇದೇ ಮೊದಲ ಬಾರಿಗೆ ಭಾರತ-ಚೀನಾ ಸಭೆ ನಡೆಸಲಿವೆ ಎಂದು ತಿಳಿದುಬಂದಿದೆ.
ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಸಭೆ ನಡೆಯಲಿದ್ದು, ಉಭಯ ರಾಷ್ಟ್ರಗಳು ಗಡಿಯಲ್ಲಿ ಶಾಂತಿ ಸ್ಥಾಪನೆ, ಸಹಕಾರ, ಪರಸ್ಪರ ಸ್ನೇಹ ವೃದ್ಧಿ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ತಾಂತ್ರಿಕ ಸಹಕಾರ ಮತ್ತು ಸಲಹೆ ಮಂಡಳಿ (ಡಬ್ಲ್ಯೂಎಂಸಿಸಿ) 10ನೇ ಸಭೆ ಇದಾಗಿದ್ದು, ಗಡಿಯಲ್ಲಿ ಉಂಟಾದ ಹಲವು ಸಮಸ್ಯಗಳ ಕುರಿತು ಸಹ ಚರ್ಚಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಿಲಿಟರಿ ಪಡೆಗಳ ನಡುವಿನ ಸಂಬಂಧ ವೃದ್ಧಿಗೂ ಈ ಸಭೆ ಸಹಕರಿಯಾಗಲಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಚೀನಾ ಸಿಕ್ಕಿಂ ಗಡಿಯಲ್ಲಿ ಸೇನೆ ನಿಯೋಜಿಸಿ ಉಪಟಳ ಮಾಡಿತ್ತು. ಬಳಿಕ ಸೇನೆ ಹಿಂಪಡೆದಿತ್ತು.
- Advertisement -
Trending Now
ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
December 5, 2023
ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
December 5, 2023
Leave A Reply