ವಿವಾದಾತ್ಮಕ ಹೇಳಿಕೆ ಜಮೈತ್ ಉಲೆಮಾ ಈ ಹಿಂದ್ ಮುಖ್ಯಸ್ಥ ಮದನಿ ವಿರುದ್ಧ ದೂರು ದಾಖಲು
ಗುವಾಹಟಿ: ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕತ್ವ ನೋಂದಣಿಯನ್ನು ವಿರೋಧಿಸಿ ವಿವಾದಾತ್ಮಕ ಹೇಳಿಕೆ ನೀಡಿರುವ ಜಮೈತ ಉಲೆಮಾ ಈ ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ವಿರುದ್ಧ ಮೂರು ಎಫ್ಐಆರ್ ದಾಖಲಿಸಲಾಗಿದೆ.
ದೆಹಲಯಲ್ಲಿ ನಡೆದ ಉಪನ್ಯಾಸವೊಂದರಲ್ಲಿ ಮದನಿ ವಿವಾದಾತ್ಮಕ, ಪ್ರಚೋದನಾತ್ಮಕ ಮತ್ತು ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದ. ಪ್ರಚೋದನಕಾರಿ ಹೇಳಿಕೆ ಕುರಿತು ಪರಿಶೀಲಿಸಲಾಗುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಡಿಜಿಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರಾಷ್ಟ್ರೀಯ ನಾಗರಿಕತ್ವ ನೋಂದಣಿ ಕಾರ್ಯದಿಂದ ಮುಸ್ಲಿಮರನ್ನು ಕೈಬಿಡದಿದ್ದರೇ ಅಸ್ಸಾಂ ಪರಿಸ್ಥಿತಿ ಹದಗೆಡಲಿದೆ. ಅಸ್ಸಾಂನಲ್ಲಿ ಶಾಂತಿ ನೆಲೆಸಬೇಕೆಂದರೆ ಕೂಡಲೇ ನೋಂದಣಿ ಕಾರ್ಯದಿಂದ ಮುಸ್ಲಿಂರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದ. ಅಲ್ಲದೇ ಅಸ್ಸಾಂನಲ್ಲಿ 70 ಲಕ್ಷ ಮುಸ್ಲಿಮರಿದ್ದು ಅವರಿಗೆ ಇದರಿಂದ ಅನ್ಯಾಯವಾಗುತ್ತದೆ. ಕೈಬಿಡದಿದ್ದರೆ ಶಾಂತಿ ಕದಡಲಿದೆ. ಭಾರತೀಯ ಜನತಾ ಪಕ್ಷ ಮಯನ್ಮಾರನಲ್ಲಿ ನಿರ್ಮಾಣವಾಗಿರುವ ಸ್ಥಿತಿ ಅಸ್ಸಾಂನಲ್ಲೂ ನಿರ್ಮಿಸುತ್ತಿದೆ ಎಂದು ಹೇಳಿದ್ದ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸರಕಾರ ರಾಷ್ಟ್ರೀಯ ನಾಗರಿಕ ನೋಂದಣಿ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ. ವಿವಾದ ಸೃಷ್ಟಿಸಿ, ಶಾಂತಿ ಕದಡಲು ಪ್ರಯತ್ನಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Leave A Reply