ಕೇರಳದ ನಂತರ ಮುಂಬೈಯಲ್ಲೂ ಲವ್ ಜಿಹಾದ್ ಭೂತ: ಮತಾಂತರಕ್ಕಾಗಿ ಗಂಡನಿಂದ ಕಿರುಕುಳ ಎಂದು ಮಾಡೆಲ್ ದೂರು!
ಮುಂಬೈ: ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳ ಕುರಿತು ಎನ್ಐಎ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಮುಂಬೈಯಲ್ಲೂ ಇದೇ ಪ್ರಕರಣ ಸುದ್ದಿಯಾಗಿದ್ದು, ಇಸ್ಲಾಂಗೆ ಮತಾಂತರ ಆಗು ಎಂದು ಗಂಡ ಪ್ರತಿದಿನ ಕಿರುಕುಳ ನೀಡುತ್ತಿದ್ದಾನೆ ಎಂದು ಮಾಡೆಲ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ರಶ್ಮಿ ಎಂಬ ಮಾಡೆಲ್ ಆಸಿಫ್ ಎಂಬಾತನನ್ನು 2005ರಲ್ಲಿ ಮದುವೆಯಾಗಿದ್ದು, ಏಳು ವರ್ಷದ ಒಬ್ಬ ಮಗನಿದ್ದಾನೆ. ಆದರೆ ಇತ್ತೀಚೆಗೆ ಆತ ಇಸ್ಲಾಂಗೆ ಮತಾಂತರವಾಗು ಎಂದು ಪೀಡಿಸುತ್ತಿದ್ದು, ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಮಹಿಳೆ ಹೇಳಿಕೆ ಆಧರಿಸಿ ಪೊಲೀಸರು ಆಸಿಫ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಶುಕ್ರವಾರ ಮನೆಗೆ ಬಂದ ಪತಿ ಇಸ್ಲಾಂಗೆ ಮತಾಂತರವಾಗು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಪಾತ್ರೆಗಳಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ ಮನೆ ಬಿಟ್ಟು ಹೋಗು ಎಂದು ಪೀಡಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.
ಆದಾಗ್ಯೂ, ಆಸಿಫ್ ಇತ್ತೀಚೆಗೆ ಮತ್ತೊಂದು ಮದುವೆಯಾಗಿದ್ದು, ನನ್ನನ್ನು ಮನೆಯಿಂದ ಹೊರಹಾಕುವ ಹುನ್ನಾರ ಮಾಡಿದ್ದಾನೆ. ಇತ್ತೀಚೆಗೆ ಮದುವೆಯಾದ ಮಹಿಳೆ ಇಸ್ಲಾಂಗೆ ಮತಾಂತರ ಸಹ ಆಗಿದ್ದಾಳೆ ಎಂದು ಮಾಡೆಲ್ ದೂರಿದ ಹಿನ್ನೆಲೆಯಲ್ಲಿ ಪೊಲೀಸರು, ಇದು ಲವ್ ಜಿಹಾದ್ ಇರಬಹುದೆಂದು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕೇರಳ, ಪಂಜಾಬ್ ಸೇರಿ ಹಲವೆಡೆ ಲವ್ ಜಿಹಾದ್ ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಮುಂಬೈಯಲ್ಲೂ ಇಂಥ ಪ್ರಕರಣ ಕೇಳಿ ಬಂದಿದ್ದು, ಇಸ್ಲಾಂ ಮೂಲಭೂತವಾದದ ಪರಾಕಾಷ್ಠೆಯೇ ಸರಿ ಎಂಬ ಮಾತು ಕೇಳಿಬರುತ್ತಿವೆ. ಆದರೆ, ಇಂಥ ಪ್ರಕರಣಗಳ ಬಗ್ಗೆ, ಹಿಂದೂ ಮಹಿಳೆಯರ ಬಗ್ಗೆ ಯಾವ ಪ್ರಗತಿಪರರೂ ಸೊಲ್ಲೆತ್ತದೇ ಇರುವುದು ಸಹ ನಾಚಿಕೆಗೇಡಿನ ಸಂಗತಿಯಾಗಿದೆ.
Leave A Reply