ತಾಯಿಗಿಂತ ದೊಡ್ಡ ಸ್ಥಾನವಿಲ್ಲ ಎಂದ ಮಾನುಷಿಗೆ ವಿಶ್ವಸುಂದರಿ ಪಟ್ಟ
ಬೀಜಿಂಗ್: ‘ತಾಯಿ ಸ್ಥಾನವೇ ಅತಿ ದೊಡ್ಡದು. ಬರೀ ಹಣದಿಂದ ಏನನ್ನು ಅಳೆಯಲು ಆಗುವುದಿಲ್ಲ. ಪ್ರೀತಿ ಮತ್ತು ವಿಶ್ವಾಸಕ್ಕೆ ಸಾಟಿ ತಾಯಿ. ತಾಯಿಯೇ ನನ್ನ ಜೀವನಕ್ಕೆ ಸ್ಫೂರ್ತಿ. ತಾಯಿ ಸ್ಥಾನ ಅತ್ಯಂತ ಗೌರವಯುತವಾದದ್ದು ಎಂದು ಟಾಪ್ 5ರ ಸ್ಥಾನದಲ್ಲಿದ್ದಾಗ ವಿಶ್ವಸುಂದರಿ ಆಯ್ಕೆಗಾರರು ಕೇಳಿದ ಯಾವ ವೃತ್ತಿ ಶ್ರೇಷ್ಠ, ಯಾವ ವೃತ್ತಿಗೆ ಅತಿ ಹೆಚ್ಚು ಸಂಭಾವನೆ ದೊರೆಯುತ್ತದೆ ಎಂಬ ಪ್ರಶ್ನೆಗೆ ವಿಶ್ವಸುಂದರಿ ಮಾನುಷಿ ಚಿಲ್ಲರ್ ಉತ್ತರಿಸಿ ಪರಿ ಇದು.
ಈಗ ಅದೇ 20 ವರ್ಷದ ಸುಂದರಿ ಮಾನುಷಿಗೆ ವಿಶ್ವಸುಂದರಿ ಪಟ್ಟ ದೊರಕಿದೆ. 17 ವರ್ಷದ ನಂತರ ವಿಶ್ವಸುಂದರಿ ಪ್ರಶಸ್ತಿಯನ್ನು ಭಾರತದ ಮಾನುಷಿ ಚಿಲ್ಲರ್ ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ಚೀನಾದ ಸಾನ್ಯದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 108 ಜನರಲ್ಲಿ ಮಾನುಷಿ ಪ್ರಥಮರಾಗಿ ಆಯ್ಕೆಯಾಗಿದ್ದಾರೆ.
ಭಾರತದಿಂದ 2000ರಲ್ಲಿ ಆಯ್ಕೆಯಾದ ನಟಿ ಪ್ರಿಯಾಂಕಾ ಚೋಪ್ರಾ ನಂತರ ಇದೀಗ ವಿಶ್ವಸುಂದರಿಯಾಗಿ ಮಾನುಷಿ ಚಿಲ್ಲರ್ ಹೊರ ಹೊಮ್ಮಿದ್ದಾರೆ. ವಿಶ್ವಸುಂದರಿ 2016ರ ಪಟ್ಟಹೊಂದಿದ್ದ ಪೋರ್ಟೋ ರಿಕೋ ಸ್ಟಿಪನಿಯಾ ಮಾನುಷಿಗೆ ವಿಶ್ವಸುಂದರಿ ಕಿರೀಟ ಧರಿಸಿದರು. ಈ ಅದ್ಭುತ ಕ್ಷಣಕ್ಕೆ ಚಿಲ್ಲರ್ ಅವರ ತಂದೆ, ತಾಯಿ, ಸಹೋದರ, ಸಹೋದರಿ ಸಾಕ್ಷಿಯಾಗಿದ್ದರು.
ಹರ್ಯಾಣ ಮೂಲದ 20 ವಯಸ್ಸಿನ ಮಾನುಷಿ ಭಾರತದಲ್ಲಿ ನಡೆದ ಫೇಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಪಡೆದಿದ್ದರು. ವೈದ್ಯರ ಪುತ್ರಿಯಾಗಿರುವ ಮಾನುಷಿ ದೆಹಲಿಯಲ್ಲಿರುವ ಸೆಂಟ್ ಥಾಮಸ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಸೋನೆಪತ್ ನಲ್ಲಿ ಮಹಿಳೆಯರ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಅಧ್ಯಯನ ಮಾಡುತ್ತಿದ್ದಾರೆ.
Leave A Reply