ಪದ್ಮಾವತಿ ಚಿತ್ರದಲ್ಲಿ ಮಾರ್ಪಾಡು ಮಾಡುವಂತೆ ರಾಜಸ್ಥಾನ ಮುಖ್ಯಮಂತ್ರಿಯಿಂದ ಸ್ಮೃತಿ ಇರಾನಿಗೆ ಪತ್ರ
ಜೈಪುರ: ದಿನೇದಿನೆ ಪದ್ಮಾವತಿ ಚಿತ್ರದ ವಿವಾದ ಕಾವೇರುತ್ತಿದ್ದು, ಚಿತ್ರದಲ್ಲಿ ಹಲವು ಮಾರ್ಪಾಡು ಮಾಡಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆದಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನ ಇತಿಹಾಸ ತಜ್ಞರು, ಸಿನಿಮಾ ತಜ್ಞರು ಹಾಗೂ ರಜಪೂತ ಸಮುದಾಯದ ಮುಖಂಡರನ್ನೊಳಗೊಂಡ ಸಮಿತಿ ರಚಿಸಬೇಕು. ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿದ್ದರೆ ಚಿತ್ರದಲ್ಲಿ ಅಂಥ ದೃಶ್ಯಕ್ಕೆ ಕತ್ತರಿಪ್ರಯೋಗ ಮಾಡಬೇಕು ಎಂದು ರಾಜೆ ಪತ್ರದಲ್ಲಿ ತಿಳಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ರಜಪೂತರ ರಾಣಿ ಪದ್ಮಾವತಿಯನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ರಜಪೂತರು ಚಿತ್ರ ಬಿಡುಗಡೆಯ ದಿನವಾದ ಡಿ.1ರಂದು ಭಾರತ ಬಂದ್ ಗೆ ಕರೆ ನೀಡಿದ್ದಾರೆ.
ಅಲ್ಲದೆ ಚಿತ್ರ ತಂಡ ಸಲ್ಲಿಸಿರುವ ಅರ್ಜಿ ಅಪೂರ್ಣ ಎಂದು ಸೆನ್ಸಾರ್ ಮಂಡಳಿ ಪದ್ಮಾವತಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಈಗ ಪದ್ಮಾವತಿ ಚಿತ್ರದ ಕುರಿತು ಕೇಂದ್ರ ಸರ್ಕಾರ ಯಾವ ನಿಲುವು ತಾಳಲಿದೆ ಎಂಬುದು ಕುತೂಹಲ ಕೆರಳಿಸಿದೆ.
Leave A Reply