ಗುಜರಾತ್ ಚುನಾವಣೆ: ಪಾಟೀದಾರ ಸಮುದಾಯದ ಮುಖಂಡರೇ ಬಿಜೆಪಿ ಸಿಎಂ ಅಭ್ಯರ್ಥಿ?
Posted On November 19, 2017

ಗಾಂಧಿನಗರ: ದೇಶದ ಗಮನ ಸೆಳೆದಿರುವ ಹಾಗೂ 2019ರ ಲೋಕಸಭೆ ಚುನಾವಣೆಯ ಮುನ್ನುಡಿ ಎಂದೇ ಬಿಂಬಿತವಾಗಿರುವ ಗುಜರಾತ್ ವಿಧಾನಸಭೆ ಚುನಾವಣೆ ಕಾವು ದಿನೇದಿನೆ ರಂಗೇರುತ್ತಿದ್ದು, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ, ಬಿಜೆಪಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.
ಅದರಲ್ಲೂ ಗುಜರಾತಿನಲ್ಲಿ ಜಾಸ್ತಿ ಜನಸಂಖ್ಯೆಯಿರುವ ಪಾಟೀದಾರ್ ಸಮುದಾಯದ ಮುಖಂಡರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಪಕ್ಷದ ಹಿರಿಯ ಮುಖಂಡ ಪುರುಷೋತ್ತಮ್ ರುಪಾಲಾ, ರಾಜ್ಯ ಬಿಜೆಪಿ ಅಧ್ಯಕ್ಷ ಜಿತು ವಘಾನಿ ಸೇರಿ ಹಲವು ಪಾಟೀದಾರ್ ಸಮುದಾಯದ ಮುಖಂಡರು ಹೆಸರುಗಳು ಕೇಳಿಬರುತ್ತಿವೆ.
ಒಂದು ವೇಳೆ ಪಾಟೀದಾರ್ ಸಮುದಾಯದ ಮುಖಂಡರಿಗೇ ಸಿಎಂ ಅಭ್ಯರ್ಥಿಯನ್ನಾಗಿ ಮಾಡಿದರೆ, ಹಾರ್ದಿಕ್ ಪಟೇಲ್ ಗೆ ಟಾಂಗ್ ನೀಡಿದಂತಾಗುತ್ತದೆ ಎಂದೇ ವಿಶ್ಲೇಷಿಸಲಾಗಿದೆ.
- Advertisement -
Trending Now
ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
October 3, 2023
Leave A Reply